1:42 PM Thursday18 - June 2026
ಬ್ರೇಕಿಂಗ್ ನ್ಯೂಸ್
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಅಂಡರ್​ 19 ವಿಶ್ವಕಪ್: ಬಿಸಿಸಿಐಯಿಂದ ಟೀಮ್ ಇಂಡಿಯಾ ಪ್ರಕಟ; ದಿಲ್ಲಿಯ ಯಶ್​ ಧುಲ್​ ನಾಯಕ

20/12/2021, 11:45

ಹೊಸದಿಲ್ಲಿ(reporterkarnataka.com):

ವೆಸ್ಟ್​ ಇಂಡೀಸ್​​ನಲ್ಲಿ ಜನವರಿ 14ರಿಂದ ಫೆಬ್ರವರಿ 5ರವರೆಗೆ ನಡೆಯುವ 2022ರ ಅಂಡರ್​ 19 ವಿಶ್ವಕಪ್​ಗಾಗಿ ಬಿಸಿಸಿಐ 17 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. 

ದಿಲ್ಲಿಯ ಯಶ್​ ಧುಲ್​ ನಾಯಕನಾಗಿ ಮತ್ತು ಆಂಧ್ರಪ್ರದೇಶದ ಎಸ್​ ಕೆ ರಶೀದ್ ಉಪನಾಯಕನಾಗಿ ನೇಮಕವಾಗಿದ್ದಾರೆ.

ಈ 14ನೇ ಆವೃತ್ತಿಯ ಟೂರ್ನಿಯಲ್ಲಿ 16 ದೇಶಗಳು ಭಾಗವಹಿಸಲಿವೆ. ಒಟ್ಟು 48 ಪಂದ್ಯಗಳು 4 ಕೆರಿಬಿಯನ್ ದೇಶಗಳಲ್ಲಿ ನಡೆಯಲಿವೆ.

ಯಶ್​ ಧುಲ್(ನಾಯಕ, ಡೆಲ್ಲಿ), ಹರ್ನೂರ್ ಸಿಂಗ್(UTCA ಚಂಡೀಗಡ) ಅಂಗ್​ಕ್ರಿಶ್​ ರಘವಂಶಿ(ಮುಂಬೈ), ಎಸ್​ಕೆ ರಶೀದ್(ಆಂದ್ರ ಪ್ರದೇಶ)​, ನಿಶಾಂತ್ ಸಿಂಧು(ಹರಿಯಾಣ), ಸಿದ್ಧಾರ್ಥ್​ ಯಾದವ್​(ಉತ್ತರಪ್ರದೇಶ), ಅನೀಶ್ವರ್ ಗೌತಮ್(ಕರ್ನಾಟಕ)​, ದಿನೇಶ್ ಬಾನ(ವಿಕೀ, ಹರಿಯಾಣ) ಆರಾಧ್ಯ ಯಾದವ್​(ವಿಕೆಟ್ ಕೀಪರ್, ಉತ್ತರಪ್ರದೇಶ), ರಾಜ್​ ಅಂಗದ್ ಬಾವಾ(UTCA ಚಂಡೀಗಢ), ಮನವ್ ಪ್ರಕಾಶ್(ತಮಿಳುನಾಡು), ಕೌಶಾಲ್ ತಾಂಬೆ(ಮಹಾರಾಷ್ಟ್ರ), ಆರ್​ಎಸ್​ ಹಂಗಾರ್ಗೆಕರ್ (ಮಹಾರಾಷ್ಟ್ರ), ವಾಸು ವತ್ಸ್(ಉತ್ತರಪ್ರದೇಶ)​, ವಿಕಿ ಒಸ್ತ್ವಾಲ್(ಮಹಾರಾಷ್ಟ್ರ) , ರವಿಕುಮಾರ್(ಬೆಂಗಾಲ್), ಗರ್ವ್​ ಸಂಗ್ವಾನ್(ಹರಿಯಾಣ).

ಮೀಸಲು ಆಟಗಾರರು
ರಿಶಿತ್ ರೆಡ್ಡಿ(ಹೈದರಾಬಾದ್​), ಉದಯ್ ಶಹರನ್(ಪಂಜಾಬ್), ಅನಶ್​ ಗೋಸಾಯ್(ಸೌರಾಷ್ಟ್ರ), ಅಮೃತ್​ ರಾಜ್ ಉಪಾಧ್ಯಾಯ್(ಬೆಂಗಾಲ್), ಪಿಎಂ ಸಿಂಗ್ ರಾಥೋರ್(ರಾಜಸ್ಥಾನ್)

ಭಾರತ U19 ಬಿ ಗುಂಪಿನಲ್ಲಿದ್ದು, ಜನವರಿ 15 ರಂದು ದಕ್ಷಿಣ ಆಫ್ರಿಕಾ, ಜನವರಿ 18ರಂದು ಐರ್ಲೆಂಡ್ ಮತ್ತು ಜನವರಿ 22ರಂದು ಉಗಾಂಡ ವಿರುದ್ಧ ಸೆಣಸಾಡಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು