12:29 AM Saturday2 - May 2026
ಬ್ರೇಕಿಂಗ್ ನ್ಯೂಸ್
ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನದ ಟಯರ್ ಬ್ಲಾಸ್ಟ್: ಓರ್ವ ಸಾವು, 7… ಶೃಂಗೇರಿ ವಿಧಾನಸಭಾ ಕ್ಷೇತ್ರ: ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡಗೆ… ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ…

ಇತ್ತೀಚಿನ ಸುದ್ದಿ

ಉಡುಪಿ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕವಿಗೋಷ್ಠಿ ಸಂಪನ್ನ

21/10/2023, 22:15

ಉಡುಪಿ(reporterkarnataka.com): ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಶನಿವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
ಉಡುಪಿ ತಾಲೂಕು ಘಟಕದ ಸಹಭಾಗಿತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿಯು ಉದ್ಘಾಟನೆಗೊಂಡು, ಕವಿಗೋಷ್ಠಿಯೊಂದಿಗೆ ಸಂಪನ್ನಗೊಂಡಿತು.

ಕಾಲೇಜಿನ ಪ್ರಾಚಾರ್ಯೆ ಆಶಾಕುಮಾರಿ ಉದ್ಘಾಟಿಸಿ ಕಲೆ, ಸಾಹಿತ್ಯ, ಸಂಗೀತ, ಕಾವ್ಯ, ನಾಟಕ ಇವುಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರಿಂದ ಓದಿನಲ್ಲಿ ಏಕಾಗ್ರತೆ ಮತ್ತು ಶ್ರದ್ಧೆ ಮೂಡುತ್ತದೆ ಎಂದು ತಿಳಿಸಿದರು.
ಕ.ಸಾ.ಪ ಉಡುಪಿ ಜಿಲ್ಲೆಯ ಕೋಶಾಧ್ಯಕ್ಷರಾದ ಮನೋಹರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಉಡುಪಿ ತಾಲ್ಲೂಕಿನ ಕ.ಸಾ.ಪ ಅಧ್ಯಕ್ಷ ಹಾಗೂ ಕಾಲೇಜು ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರವಿರಾಜ್ ಹೆಚ್.ಪಿ ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ಕಥೆ, ಕವನಗಳನ್ನು ರಚಿಸಲು ಒಲವು ತೋರಿದ್ದಲ್ಲಿ ಮುಂದೆ ಸಾಮಾಜಿಕ ವೇದಿಕೆಯಲ್ಲಿ ಉತ್ತಮ ಕವಿ ಮತ್ತು ಲೇಖಕರಾಗಿ ಮೂಡಿಬರಲು ಸಾಧ್ಯ ಎಂದು ತಿಳಿಸಿದರು.
ಕವಯಿತ್ರಿ ಪೂರ್ಣಿಮಾ ಸುರೇಶ್ ಕವಿಗೋಷ್ಠಿಯ ಆಶಯ ಭಾಷಣದಲ್ಲಿ ಕವಿತೆಯ ಮೂಲಕ ಭಾವನೆಗಳನ್ನು ಪ್ರಕಟ ಮಾಡುವವರು ಕವಿಗಳು, ಬಾಲ್ಯದಿಂದ ಮುಪ್ಪಿನವರೆಗೆ ಅನುಭವಿಸುವ ಅನುಭವಗಳನ್ನು ಕಾವ್ಯದಲ್ಲಿ ಬಿತ್ತರಿಸುತ್ತದೆ. ಒಳನೋಟ ಕಾಣಲು ನಮ್ಮಲ್ಲಿ ಭಾವನೆಗಳು ಬೇಕು ಎಂದು ನುಡಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಹಾಗೂ ರಂಗನಟ ರಾಜೇಶ್ ಭಟ್ ಪಣಿಯಾಡಿ ವಹಿಸಿಕೊಂಡು ಯುಪಿಎಂಸಿ ಕೇವಲ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಶಿಕ್ಷಣ ನೀಡುತ್ತಿದ್ದರೂ ಇಲ್ಲಿನ ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿಯನ್ನು ಶ್ಲಾಘಸಿ, ಕವಿತೆ ಹುಟ್ಟಲು ಜಾಗ, ಪ್ರಕೃತಿ, ಏಕಾಂತ, ನೋವು, ರೋಷ, ಭಾವಾ ಬೇಕಾಗುತ್ತದೆ, ಭಾವನೆಗಳನ್ನು ಬಿತ್ತರಿಸಲು ಕವಿತೆ ಸಾಧನಾ ಎಂದು ತಿಳಿಸಿದರು. ಸಾಹಿತಿ ನಾರಾಯಣ ಮಡಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರೇಮಸಾಯಿ, ಕಾವ್ಯ ಶೆಟ್ಟಿ, ರಕ್ಷಿತಾ, ಆಶಿಕಾ, ಸ್ನೇಹಾ, ಸಿಂಚನಾ, ಅದೀಶಾ, ಕೃತಿಕಾ, ನಂದೀಶ್ ಕವನಗಳನ್ನು ರಚಿಸಿ ವಾಚಿಸಿದರು.
ಕನ್ನಡ ಉಪನ್ಯಾಸಕ ಶಶಿಕಾಂತ್ ಶೆಟ್ಟಿ ಸ್ವಾಗತಿಸಿದರು, ಕವಿಗೋಷ್ಠಿಯ ಸಂಚಾಲಕ ರಾಘವೇಂದ್ರ ಜಿ.ಜಿ ವಂದಿಸಿದರು.
ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಸಭಾ ಕಾರ್ಯಕ್ರಮವನ್ನು ಹಾಗೂ ಕ.ಸಾ.ಪ ಉಡುಪಿ ತಾಲ್ಲೂಕಿನ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಕವಿಗೋಷ್ಠಿಯನ್ನು ನಿರೂಪಿಸಿ, ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು