1:03 PM Saturday14 - November 2026
ಬ್ರೇಕಿಂಗ್ ನ್ಯೂಸ್
ಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ನಯವಾದ ತಿರುಗೇಟು: ಈಗ ಸೆಂಚುರಿ ಬಾರಿಸಿದೆ… ಚಿಕ್ಕಮಗಳೂರು | ತರೀಕೆರೆ‌ ಬಳಿ ಮಣ್ಣಿನಗುಡ್ಡೆಗೆ ಬೈಕ್ ಡಿಕ್ಕಿ: ಪುತ್ರಿ ಸಾವು; ತಂದೆ… ಎಚ್​.ಡಿ.ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು: ಪಿಎ ವಾಟ್ಸಪ್​ ಚಾಟ್​ ಬಗ್ಗೆ ಡಿಸಿ… ಮುಖ್ಯಮಂತ್ರಿ ಡಿಕೆಶಿ ಹಾಸನಾಂಬೆ ದರ್ಶನ ಪಡೆಯುತ್ತಿರುವ ವೀಡಿಯೋಗೆ ಭಕ್ತರಿಂದ ಚಪ್ಪಲಿ ಎಸೆತ: ಸರತಿ… ಕೊಡಗಿನ ಜನತೆಗೆ ಬೆಲೆ ಏರಿಕೆ ನಡುವೆಯೇ ಮತ್ತೊಂದು ಶಾಕ್: ಖಾಸಗಿ ಬಸ್ ದರ… Bangalore | ಹಾಕಿ ದಿಗ್ಗಜ ಕೊಡಗಿನ ಎಂ.ಎಂ. ಸೋಮಯ್ಯ ಮನೆಯಲ್ಲಿದ್ದ ಒಲಿಂಪಿಕ್ಸ್ ಚಿನ್ನದ… ಬಸ್ ದರ ಏರಿಕೆ | ಹೆಂಡ್ತಿಗೆ ಫ್ರಿ ಕೊಟ್ಟು ಗಂಡನಿಂದ ಡಬಲ್ ವಸೂಲಿ… Mysore | ಹುಣಸೂರು ಬಳಿ ಬೈಕ್‌ಗೆ ಒಕ್ಕಣೆ ಯಂತ್ರ ಡಿಕ್ಕಿ: ಸವಾರರಿಬ್ಬರ ದುರ್ಮರಣ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000… Kodagu | ಚಲಿಸುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊಗೆ: ಪ್ರಯಾಣಿಕರಲ್ಲಿ ಆತಂಕ

ಇತ್ತೀಚಿನ ಸುದ್ದಿ

ತುಮಕೂರು: ಮೊದಲ ಐಷಾರಾಮಿ ಮಲ್ಟಿಪ್ಲೆಕ್ಸ್ ಆರಂಭ; ಸಿನಿ ರಸಿಕರಿಗೆ ತೆರೆದ ಮಾಯಾಲೋಕ

05/03/2022, 20:18

ತುಮಕೂರು(reporterkarnataka.com): ಸಿರಾ ರಸ್ತೆಯಲ್ಲಿರುವ ಎಸ್ ಮಾಲ್‍ನಲ್ಲಿ ಐನೋಕ್ಸ್  ತನ್ನ ಮೊದಲ, ಅತಿ ದೊಡ್ಡ ಮತ್ತು ಅತ್ಯಂತ ಐಷಾರಾಮಿ ಮಲ್ಟಿಪ್ಲೆಕ್ಸ್  ಆರಂಭಿಸಿದೆ.

5 ಪರದೆಗಳು ಮತ್ತು 1069 ಆಸನಗಳನ್ನು ಹೊಂದಿದ್ದು, ತುಮಕೂರು ಸಿನಿ ರಸಿಕರಿಗೆ ಎಸ್ ಮಾಲ್‍ನಲ್ಲಿರುವ ಹೊಚ್ಚ ಹೊಸ ಇನ್ ಸೈನಿಯಾ ಅಲ್ಟ್ರಾ ಪ್ರೀಮಿಯಂ ಚಲನಚಿತ್ರ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ತಡೆರಹಿತ ಚೆಕ್- ಇನ್‍ಗಳು ಮತ್ತು ಆಹಾರ ಆರ್ಡರ್‍ಗಳಿಂದ ಹಿಡಿದು ಪ್ರತಿ ಸಭಾಂಗಣದಲ್ಲಿ ಚೂಪಾದ ಪ್ರೊಜೆಕ್ಷನ್ ಮತ್ತು ಅಸಾಧಾರಣ ಡಾಲ್ಬಿ ಅಟ್ಮಾಸ್ ಸರೌಂಡ್ ಸೌಂಡ್‍ನೊಂದಿಗೆ ಆರಾಮದಾಯಕ ಒರಗುವ ಆಸನದ ವರೆಗೆ, ಅತಿಥಿಗಳು ಎಸ್ ಮಾಲ್‍ನಲ್ಲಿರುವ ಐನೋಕ್ಸ್‍ನಲ್ಲಿ ನಯವಾದ ಅನುಭವಗಳನ್ನು ಪಡೆಯುತ್ತಾರೆ. ಸಿನಿಮಾ ಪ್ರೇಕ್ಷಕರಿಗೆ ಅತ್ಯುತ್ತಮ ದರ್ಜೆಯ ಸಿನಿಮಾ ಆತಿಥ್ಯವನ್ನು ನೀಡಲಾಗುತ್ತದೆ. ರುಚಿಕರವಾದ ಆಹಾರ ಮತ್ತು ಪಾನೀಯ ಆಯ್ಕೆಗಳ ಆಕರ್ಷಕ ಶ್ರೇಣಿಯಾಗಿದೆ. ಈ ಅವಿಸ್ಮರಣೀಯ ಅನುಭವವನ್ನು ಪಡೆಯಲು ನಗರದ ಚಲನಚಿತ್ರ ರಸಿಕರು ಮರಳುವುದು ಖಚಿತ.

“ನಮ್ಮ ಮೊದಲ ಮಲ್ಟಿಪ್ಲೆಕ್ಸ್ ಅನ್ನು ಅದ್ಭುತ ನಗರವಾದ ತುಮಕೂರಿನಲ್ಲಿ ತೆರೆಯಲು ನಾವು ಹೆಮ್ಮೆಪಡುತ್ತೇವೆ ಮತ್ತು ಸಂತೋಷಪಡುತ್ತೇವೆ, ಇದು ನಗರದಲ್ಲಿಯೇ ದೊಡ್ಡದಾಗಿದೆ. ತುಮಕೂರಿನ ಮೊಟ್ಟಮೊದಲ ಅಲ್ಟ್ರಾ- ಐಷಾರಾಮಿ ಸಿನಿಮಾ ಅನುಭವ, ಐನೋಕ್ಸ್ ಇನ್‍ಸೈನಿಯಾ, ನಮ್ಮ ಅತಿಥಿಗಳಿಗೆ ಅಲ್ಟ್ರಾ- ಪ್ರೀಮಿಯಂ ಚಲನಚಿತ್ರ ವೀಕ್ಷಣೆಯ ಅನುಭವವನ್ನು ಪರಿಚಯಿಸುತ್ತದೆ, ಇದು ಐಷಾರಾಮಿ, ಉತ್ತಮ ಧ್ವನಿ ಮತ್ತು ಪ್ರೊಜೆಕ್ಷನ್ ತಂತ್ರಜ್ಞಾನದ ಒಂದು ಶ್ರೇಣಿಯ ಆಹಾರ ಆಯ್ಕೆಗಳೊಂದಿಗೆ ಮಿಶ್ರಣವಾಗಿದೆ. ತುಮಕೂರಿನ ಸಿನಿ ಪ್ರೇಕ್ಷಕರನ್ನು ನಮ್ಮನ್ನು ಭೇಟಿ ಮಾಡಲು ಮತ್ತು ನಗರದ ಅತ್ಯಂತ ಐಷಾರಾಮಿ ಸಿನಿಮಾ ತಾಣದಲ್ಲಿ ಅಸಾಧಾರಣ ಚಲನಚಿತ್ರ ವೀಕ್ಷಣೆಯ ಅನುಭವವನ್ನು ಅನುಭವಿಸಲು ನಾವು ಆಹ್ವಾನಿಸುತ್ತೇವೆ” ಎಂದು ಐನೋಕ್ಸ್ ಲೀಶರ್ಸ್ ಲಿಮಿಟೆಡ್‍ನ ದಕ್ಷಿಣ ಪ್ರಾದೇಶಿಕ ನಿರ್ದೇಶಕ ಮೋಹಿತ್ ಭಾರ್ಗವ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು