11:26 PM Wednesday19 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ತಲ್ವಾರ್ ದಾಳಿ ಯತ್ನ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮೊದಲ ಪ್ರತಿಕ್ರಿಯೆ ಏನು?

14/10/2022, 18:24

ಮಂಗಳೂರು(reporterkarnataka.com): ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ತಲ್ವಾರ್ ದಾಳಿ ಯತ್ನದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಕೇಳೋಣ ಬನ್ನಿ…

ಬೆಂಗಳೂರಿನಿಂದ ಗುರುವಾರ ರಾತ್ರಿ ನಾನು ಮಂಗಳೂರಿಗೆ ಆಗಮಿಸಿ ಬೆಳ್ತಂಗಡಿಗೆ ತೆರಳುತ್ತಿದ್ದ ವೇಳೆ ಫರಂಗಿಪೇಟೆ ಸಮೀಪ ಸ್ಕಾರ್ಪಿಯೊ ವಾಹನ ಓವರ್ ಟೇಕ್ ಮಾಡಿ ನನ್ನ ಸರಕಾರಿ ಕಾರಿಗೆ ಎರಡು ಬಾರಿ ತಲ್ವಾರ್ ದಾಳಿ ಮಾಡಲಾಯಿತು.

ನಾನು ಸ್ನೇಹಿತನ ಐ20 ಕಾರಿನಲ್ಲಿದ್ದೆ, ನಾನು ಸರಕಾರಿ ಕಾರಿನಲ್ಲಿ ಇಲ್ಲ ಎಂದು ಗೊತ್ತಾದ ಮೇಲೆ ಐ20 ಕಾರಿ‌ನ ಮೇಲೆ ದಾಳಿ ಮಾಡಿದ್ದಾನೆ. ಕಾರಿನಲ್ಲಿ ಒಬ್ಬನೇ ಇದ್ದು, ಡ್ರೈವ್ ಮಾಡಿಕೊಂಡು ಎರಡು ಬಾರಿ ತಲವಾರು ದಾಳಿಗೆ ಯತ್ನಿಸಿದ್ದ, ಹಾಗೆ ಕಾರಿನಿಂದ ಇಳಿಯಲು ಯತ್ನಿಸಿದ್ದ ಎಂದು ಶಾಸಕರು ಹೇಳಿದ್ದಾರೆ.

ದಾಳಿಗೆ ಬಳಸಿದ ಕಾರು ಕೇರಳ ರಿಜಿಸ್ಟ್ರೇಷನ್ ಹೊಂದಿತ್ತು. ಯಶಸ್ವಿ ಹಾಲ್ ಬಳಿಕ ನಾನು ಡಿವೈಎಸ್ಪಿಗೆ ಮಾಹಿತಿ ನೀಡಿದ್ದೆ.ಬಳಿಕ ಎರಡು ಪ್ಯಾಸೆಂಜರ್ ಕಾರಿನ ಜೊತೆ ತಲವಾರು ದಾಳಿಗೆ ಉತ್ನಿಸಿದವನ ಕಾರು ತೆರಳಿದೆ ಎಂದು ಹೇಳಿದ್ದಾರೆ.

ದಾಳಿ ಕುರಿತು ಗೃಹ ಸಚಿವರಿಗೆ ಮಾಹಿತಿ ನೀಡಿದ್ದೇನೆ. ಎರಡೆರಡು ಬಾರಿ ಅವರು ಕರೆ ಮಾಡಿದ್ದಾರೆ. ಗನ್ ಮ್ಯಾನ್ ನೀಡುವುದಾಗಿ ಹೇಳಿದ್ದಾರೆ. ಈ ಕುರಿತು ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮುಂಜಾನೆ 2 ಗಂಟೆಗೆ ಕೇಸ್ ದಾಖಲು ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ಗೃಹ ಸಚಿವರು ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿ, ನನಗೆ ಅಂಗರಕ್ಷಕರನ್ನು ನೀಡಲು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು