4:40 AM Tuesday4 - August 2026
ಬ್ರೇಕಿಂಗ್ ನ್ಯೂಸ್
ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ…

ಇತ್ತೀಚಿನ ಸುದ್ದಿ

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆನ್ಲೈನ್ ಕಾರ್ಯಾಗಾರ

04/10/2021, 17:47

ಮಂಗಳೂರು(reporterkarnataka.com): ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬೆಸೆಂಟ್‌ ಸಂಧ್ಯಾ ಕಾಲೇಜು, ಮಂಗಳೂರು ಹಾಗೂ ಗೋವಿಂದದಾಸ ಕಾಲೇಜು, ಸುರತ್ಕಲ್‌ನ ವಾಣಿಜ್ಯ ಸ್ನಾತಕೋತ್ತರ ವಿಭಾಗಗಳು ಭಾರತದಲ್ಲಿನ ಮ್ಯೂಚುವಲ್ ಫಂಡ್ಸ್‌ ಸಂಘ (AMFI) ದ ಸಹಯೋಗದೊಂದಿಗೆ ಕಾರ್ಯತಂತ್ರ ಯೋಜನೆಯ ಮೂಲಕ ಆರ್ಥಿಕ ಸಬಲೀಕರಣ” ಎಂಬ ವಿಷಯದ ವೆಬಿನಾರ್  ಆನ್‌ಲೈನ್ ನಲ್ಲಿ ಇತ್ತೀಚಿಗೆ ಜರುಗಿತು. 

ಬೆಸೆಂಟ್ ಸಂಧ್ಯಾ ಕಾಲೇಜಿನ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಅಸಿಸ್ಟೆಂಟ್ ಪ್ರೊ. ತಾರಾ ಶೆಟ್ಟಿ ಆಯೋಜಕರಾಗಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಎಎಂಎಫ್ ಐನ ಹಿರಿಯ ಸಲಹೆಗಾರ ಸೂರ್ಯಕಾಂತ್ ಶರ್ಮಾ (ಭಾರತೀಯ ಭದ್ರತಾ ಏನಿಮಯ ಮಂಡಳಿ (ಸೆಬಿ) ಯ ನಿವೃತ್ತ ಉಪಪ್ರಧಾನ ವ್ಯವಸ್ಥಾಪಕರು) ಭಾಗವಹಿಸಿದ್ದರು. 

ಸೂರ್ಯ ಕಾಂತ  ಶರ್ಮಾ ಪ್ರಾರಂಭದಲ್ಲಿ ವ್ಯಕ್ತಿಗತ ಆರ್ಥಿಕ ಭದ್ರತೆಯ ಬಗ್ಗೆ ವಿವರಿಸಿದರು. ಹೂಡಿಕೆದಾರರು ಸಂಪತ್ತನ್ನು ಕ್ರೋಢೀಕರಿಸುವ ಮೊದಲು ಯೋಚಿಸಿ, ಅರ್ಥಮಾಡಿಕೊಂಡು ಸಾಧ್ಯವಾದಷ್ಟು ಜೀವವಿಮೆಯಲ್ಲಿ ಹಾಗೂ ಸಾಧಾರಣವಾಗಿ ವೈದ್ಯಕೀಯ ವಿಮೆಯಲ್ಲಿ ಹಾಗೂ ತುರ್ತು ಪರಿಸ್ಥಿತಿಗೆಂದು ಉಳಿತಾಯ ಮಾಡಿಕೊಂಡು ನಂತರ ಹೂಡಿಕೆ ಮಾಡಿದರೆ ಉತ್ತಮ ಎಂದು ಹೇಳಿದರು.

ಹೂಡಿಕೆದಾರರು ಉಳಿತಾಯವನ್ನು ಪ್ರತಿ ವರ್ಷ ಶೇಕಡಾ 10ರಷ್ಟು ಹೆಚ್ಚಿಸಬೇಕಾಗುತ್ತದೆ. ಹೂಡಿಕೆದಾರರು ಸಂಪತ್ತನ್ನು ಕೂಡಿಡುವವರಾಗದೇ ಸಂಪತ್ತಿನ ಸೃಷ್ಟಿಕರ್ತನಾಗಬೇಕು ಎಂದು ತಿಳಿಸಿದರು. ವಿವಿಧ ಹೂಡಿಕೆಗಳ ಮೇಲಿನ ಪ್ರತಿಫಲಗಳು, ಪಿ.ಪಿ.ಎಫ್ (PPP), ಎನ್.ಪಿ.ಎಸ್ (NPS) ಸುಕನ್ಯ ಸಮೃದ್ಧಿ ಯೋಜನೆ, ಭದ್ರತಾ ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಸವಿವರವಾಗಿ ವಿವರಿಸಿ,  ಇವುಗಳು ಮಧ್ಯಮ ವರ್ಗದ ಹಾಗೂ ಮಾಸಿಕ ಸಂಬಳ ಪಡೆಯುವ ಜನಸಾಮಾನ್ಯರಿಗೆ ಉತ್ತಮವಾದ ಉಳಿತಾಯ ಯೋಜನೆಗಳು ಎಂದು ಹೇಳಿದರು.

ಈ ಆನ್‌ಲೈನ್‌ ವೆಬಿನಾರ್‌ನಲ್ಲಿ ಭಾರತದಾದ್ಯಂತ 348 ಜನರು ಸಕ್ರಿಯವಾಗಿ ಭಾಗವಹಿಸಿದ್ದರು.

ಬೆಸೆಂಟ್‌ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀನಾರಾಯಣ ಭಟ್ ಎ,  ಸ್ವಾಗತಿಸಿ,  ವಾಣಿಜ್ಯ ಸ್ನಾತಕೋತ್ತರ ವಿಭಾಗದ ಅಸಿಸ್ಟೆಂಟ್ ಪ್ರೊ. ಸಾತ್ವಿಕಾ ಶೆಟ್ಟಿ  ನಿರೂಪಿಸಿದರು. 

ಗೋವಿಂದದಾಸ ಕಾಲೇಜಿನ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಅಸಿಸ್ಟೆಂಟ್ ಪ್ರೊ. ಸಜನ್ ಆಚಾರ್ಯ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು