11:37 AM Friday16 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಶಾಕಿಂಗ್ ನ್ಯೂಸ್: ಮಧ್ಯಾಹ್ನದ ನಿದ್ರೆಗೆ ಭಂಗ; ಪುಟ್ಟ ಕಂದಮ್ಮನ ಕತ್ತು ಹಿಸುಕಿ ಕೊಂದ ಪಾಪಿ ತಂದೆ

14/08/2022, 13:01

ಫರಿದಾಬಾದ್‌(reporterkarnataka.com): ಹರಿಯಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಧ್ಯಾಹ್ನದ ನಿದ್ದೆಗೆ ಭಂಗ ತಂದಿದೆ ಎಂದು ಕೋಪಗೊಂಡ ಪಾಪಿ ತಂದೆ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾನೆ.

ಹರಿಯಾಣದ ಫರಿದಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಕೆಲಸ ಮುಗಿಸಿ ಹಿಂತಿರುಗಿದ ವ್ಯಕ್ತಿ ಮಧ್ಯಾಹ್ನ ಮಲಗಿದ್ದಾಗ ಮಗು ಅಳುತ್ತಲೇ ಇತ್ತು.

ಮಗುವಿನ ಅಳುವಿಗೆ ಆಕ್ರೋಶಗೊಂಡ ತಂದೆ ದಿಂಬಿನಿಂದ ಮಗುವಿನ ಕತ್ತು ಹಿಸುಕಿ ಅದರ ಸಾವಿಗೆ ಕಾರಣನಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಗೆ ಮಾತನಾಡಿದ ಫರಿದಾಬಾದ್ ಸ್ಟೇಷನ್ ಹೌಸ್‌ ಆಫೀಸರ್‌ (ಸ್ಟೇಷನ್ ಹೌಸ್ ಆಫೀಸರ್ ) ದಿನೇಶ್ ಈ ಪ್ರಕರಣವನ್ನು ಖಚಿತಪಡಿಸಿದ್ದಾರೆ ಮತ್ತು ಮಗುವನ್ನು ತನ್ನ ತಂದೆಯೇ ಕೊಂದಿದ್ದಾನೆ ಎಂದು ಹೇಳಿದ್ದಾರೆ.

ಮಗು ಅಳುವುದನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದ್ದಕ್ಕೆ ನೆರೆಹೊರೆಯವರು ಅನುಮಾನಗೊಂಡು ಆ ವ್ಯಕ್ತಿಯ ಮನೆಗೆ ಹೋಗಿ ನೋಡಿದಾಗ ಮಗುವಿನ ಮೂಗು ಹಾಗೂ ಬಾಯಿಯಿಂದ ರಕ್ತಸ್ರಾವವನ್ನು ಕಂಡುಕೊಂಡರು ಎಂದೂ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಮಗುವಿನ ಸ್ಥಿತಿಯನ್ನು ಕಂಡ ನೆರೆಹೊರೆಯವರು ಆ ಬಗ್ಗೆ ಆರೋಪಿಯನ್ನು ವಿಚಾರಿಸಿದಾಗ ಆ ಮಗುವಿನ ತಂದೆ ಗಾಬರಿಗೊಂಡು ಓಡಿಹೋಗಿದ್ದಾನೆ. ಆರೋಪಿಯ ಪತ್ನಿ ಹಾಗೂ ಆ ಮಗುವಿನ ಸಹೋದರ ರಕ್ಷಾ ಬಂಧನವನ್ನು ಆಚರಿಸಲು ತನ್ನ ಸಹೋದರನ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ. 

ಆರೋಪಿಯ ಹೆಂಡತಿ ಮತ್ತು ಆ ದಂಪತಿಯ ಮತ್ತೊಂದು ಮಗು ರಕ್ಷಾ ಬಂಧನವನ್ನು ಆಚರಿಸಲು ಮಗುವಿನ ತಾಯಿ ಪ್ರಿಯಾ ಅವರ ಸಹೋದರನ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಆರೋಪಿ ತಂದೆಯನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಸ್ಟೇಷನ್‌ ಹೌಸ್‌ ಆಫೀಸರ್‌ ತಿಳಿಸಿದ್ದಾರೆ.

ಮನೆಗೆ ಹಿಂದಿರುಗಿದ ನಂತರ ಆರೋಪಿಯ ಪತ್ನಿ ಪ್ರಿಯಾ ತನ್ನ ಮಗು ಮೃತಪಟ್ಟಿದ್ದನ್ನು ಮತ್ತು ತನ್ನ ಮಗುವಿನ ಮೂಗು, ಕಿವಿ ಹಾಗೂ ಬಾಯಿಯಿಂದ ರಕ್ತಸ್ರಾವವಾಗುತ್ತಿರುವುದನ್ನು ಕಂಡರು. ಬಳಿಕ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಮಗುವಿನ ಶವವನ್ನು ಪೋಸ್ಟ್‌ಮಾರ್ಟಂಗೆ ಕಳಿಸಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು