9:23 AM Wednesday5 - August 2026
ಬ್ರೇಕಿಂಗ್ ನ್ಯೂಸ್
ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ…

ಇತ್ತೀಚಿನ ಸುದ್ದಿ

ಸಂವಿಧಾನ ದೇಶದ ಅಡಿಪಾಯ, ಅದಕ್ಕೆ ತಾಯಿಯ ಸ್ಥಾನವಿದೆ: ಕೆನರಾ ಸಂಧ್ಯಾ ಕಾಲೇಜಿನ ಸಂವಿಧಾನ ದಿನಾಚರಣೆಯಲ್ಲಿ ಡಾ. ಅನಂತಕೃಷ್ಣ ಭಟ್

02/12/2021, 10:19

ಮಂಗಳೂರು(reporterkarnataka.com): ಸಂವಿಧಾನ ಒಂದು ದೇಶದ ಅಡಿಪಾಯವಿದ್ದಂತೆ. ಅದಕ್ಕೆ ತಾಯಿಯ ಸ್ಥಾನವಿದೆ. ಅತ್ಯಂತ ಸುದೀರ್ಘವಾದ ಕ್ರಮಬದ್ಧವಾದ ಸಂವಿಧಾನ ನಮ್ಮದು. ಸಂವಿಧಾನ ನಿಂತ ನೀರಲ್ಲ: ಹರಿಯುವ ನದಿಯಂತೆ ಅದರಲ್ಲಿ ಕಾಲಕಾಲಕ್ಕೆ ಬದಲಾವಣೆಗಳು ಆಗುತ್ತಾ ಹೋಗುತ್ತವೆ ಅಲ್ಲದೆ ಅದು ಜನತೆಯ ಆಶೋತ್ತರಗಳನ್ನು ಪ್ರತಿಫಲಿಸುವಂತಿರಬೇಕು ಎಂದು ಕೆನರಾ ಕಾಲೇಜಿನ ರಾಜ್ಯಶಾಸ್ತ್ರವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ ಪಿ. ಅನಂತಕೃಷ್ಣ ಭಟ್ ಹೇಳಿದರು.

ಅವರು ಸಂವಿಧಾನ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ಕೆನರಾ ಸಂಧ್ಯಾ ಕಾಲೇಜು ಹಮ್ಮಿಕೊಂಡಿದ್ದ “ಭಾರತೀಯ ಸಂವಿಧಾನ ರಚನೆ: ಸ್ಥಳೀಯ ಪ್ರಸ್ತುಕತೆಯ ಬಗ್ಗೆ ಅಜ್ಞಾತ ಸಂಗತಿಗಳು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.




ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಅಣ್ಣಪ್ಪ ಪೈ ಆದ್ಯಕ್ಷತೆ ವಹಿಸಿದ್ದರು. ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಖಜಾಂಜಿ ಹಾಗೂ ಕಾಲೇಜಿನ ಸಂಚಾಲಕ ಸಿ ಎ ವಾಮನ ಕಾಮತ್ , ಬದಲಿ ಖಜಾಂಚಿಗಳಾದ ಶ್ರೀ ಬಸ್ತಿ ಪುರುಷೋತ್ತಮ ಶೆಣೈ , ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಡಾ ಪ್ರೇಮಲತಾ ವಿ ಉಪಸ್ಥಿತರಿದ್ದರು.

ಕೆನರಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಅನಿಲ ಸ್ವಾಗತಿಸಿದರು, ಹಿಂದಿ ಪ್ರಾಧ್ಯಾಪಕಿ ಸುಜಾತ ಜಿ ನಾಯಕ್ ಅತಿಥಿಗಳನ್ನು ಪರಿಚಯಿಸದರು. ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕಿ ಸೀಮಾ ಪ್ರಭು ಎಸ್ ವಂದಿಸಿದರು. ಕನ್ನಡ ಪ್ರಾಧ್ಯಪಿಕೆ ವಾಣಿ ಯು ಎಸ್ ನಿರೂಪಿಸಿದರು. ಉಷಾ ನಾಯಕ್ ಹಾಗೂ ಸುಜಾತಾ ಜಿ ನಾಯಕ್ ಪ್ರಾರ್ಥಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು