2:15 AM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಸರಕಾರ ಘೋಷಿಸಿದ ಪ್ಯಾಕೇಜ್ ಅವೈಜ್ಞಾನಿಕ: ಅಥಣಿಯ ವಕೀಲ ಗೌತಮ್ ಬನಸೋಡೆ  ಟೀಕೆ

20/05/2021, 20:48

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com

ಸರಕಾರ ಘೋಷಿಸಿದ ಪ್ಯಾಕೇಜ್ ಅವೈಜ್ಞಾನಿಕವೆಂದು ಅಥಣಿಯ ವಕೀಲ ಡಾ. ಗೌತಮ್ ಬನಸೋಡೆ  ಟೀಕಿಸಿದ್ದಾರೆ.

ತಮ್ಮ ಸ್ವಗೃಹದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಡಾ ಗೌತಮ್ ಬನಸೋಡೆ ಅವರು ಕೇವಲ ಧರ್ಮ , ವೃತ್ತಿ, ಆಧರಿಸಿ  ಪ್ಯಾಕೇಜ್ ಘೋಷಿಸಲಾಗಿದ್ದು, ಈ ರೀತಿಯ ಅವೈಜ್ಞಾನಿಕ ಪ್ಯಾಕೇಜ್ ನೀಡುವುದು ಸರಿಯಲ್ಲ. ಈಗಾಗಲೇ ರಾಜ್ಯದಲ್ಲಿ ಹಲವಾರು ಜನರು ಲಾಕ್ಡೌನ್ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುವುದರಿಂದ ಎಲ್ಲ ಜನರಿಗೂ ಈ ಪ್ಯಾಕೇಜ್ ತಲುಪುವಂತಾಗಬೇಕು.

ಜಾತಿ ಮತ್ತು ವೃತ್ತಿಯನ್ನು ಗುರುತಿಸಲಾರದೆ ಕೇವಲ ಬಡತನ ರೇಖೆ ಎಂದು ಆಧರಿಸಿ ರೇಷನ್ ಕಾರ್ಡ್ ಮುಖಾಂತರ ಪರಿಹಾರ ನೀಡುವುದರಿಂದ ಸಮಾಜದ ಕಟ್ಟಕಡೆ ವ್ಯಕ್ತಿಗೂ ಸಹ ಈ ಪ್ಯಾಕೇಜ್ ಮೂಡುವಂತಾಗಬೇಕು. ಕೇವಲ ಜಾತಿ ಹಾಗೂ ವೃತ್ತಿಗಳನ್ನು ಆಧರಿಸಿ ಇರುವುದರಿಂದ ಹಲವಾರು ವೃತ್ತಿಯನ್ನು ಮಾಡುವ ಜನರಿಗೆ ದೊರೆಯುವುದಿಲ್ಲ . ಈ ಕೂಡಲೇ ಎಚ್ಚೆತ್ತುಕೊಂಡು  ಜನರಿಗೆ ಪ್ಯಾಕೇಜ್ ನೀಡಬೇಕು ಮತ್ತು ಸರಕಾರ ಪತ್ರಕರ್ತರನ್ನು ಫ್ರಂಟ್ಲೈನ್ ವಾರಿಯರ್ ಎಂದು ಎಂದು ಗುರುತಿಸಿದರು ಸಹ ಅವರಿಗೆ ಯಾವುದೇ ರೀತಿಯ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಇದು ಸರಕಾರದ ಒಂದು ನಿರ್ಲಕ್ಷದ ಧೋರಣೆಯಾಗಿದೆ. ಈ ಕೂಡಲೇ ಪತ್ರಕರ್ತರಿಗೂ ಸಹ ಒಂದು ವಿಶೇಷವಾದ ಪ್ಯಾಕೇಜ್ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದರು. 

ಇತ್ತೀಚಿನ ಸುದ್ದಿ

ಜಾಹೀರಾತು