11:57 PM Sunday9 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲು ಬಂದ ಸರಕಾರಿ ವೈದ್ಯರು ಫುಲ್ ಟೈಟ್!: ಆಪರೇಶನ್ ಥಿಯೇಟರ್ ಬೆಡ್ ನಲ್ಲೇ ರೆಸ್ಟ್!!

01/06/2023, 16:41

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporter Karnataka@gmail.com

ಆಪರೇಶನ್ ಮಾಡಲು ಬಂದ ವೈದ್ಯರು ಕುಡಿದು ಟೈಟಾದ ಪರಿಣಾಮ ಆಪರೇಶನ್ ಥಿಯೇಟರ್ ನ ಬೆಡ್ ನಲ್ಲಿ ಮಲಗಿದ ಬೆಚ್ಚಿಬೀಳಿಸುವ ಘಟನೆ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯರಿಗೆ
ಸಂತಾನ ಹರಣ ಆಪರೇಷನ್ ಕ್ಯಾಂಪ್ ಏರ್ಪಾಡು ಮಾಡಲಾಗಿತ್ತು. 10ಕ್ಕೂ ಹೆಚ್ಚು ಮಹಿಳೆಯರು ಮಕ್ಕಳನ್ನ ಬಿಟ್ಟು ಬೆಳಗ್ಗೆ 8 ಗಂಟೆಗೆ ಬಂದಿದ್ದರು‌‌. ಆದರೆ ಆಪರೇಶನ್ ಮಾಡುವ ವೈದ್ಯರಾದ
ಕೊಪ್ಪ ಸರ್ಕಾರಿ ಆಸ್ಪತ್ರೆ ಡಾ. ಬಾಲಕೃಷ್ಣ ಅವರು ಮಧ್ಯಾಹ್ನ 3 ಗಂಟೆಗೆ ಬಂದರು.
ವೈದ್ಯ ಬಾಲಕೃಷ್ಣ ಅವರು ಬರುವಾಗಲೇ ಫುಲ್ ಟೈಟ್ ಆಗಿದ್ದರು. ಟೈಟಾಗಿ ಬಂದ ವೈದ್ಯ ಸಂತಾನಹರಣ ಚಿಕಿತ್ಸೆ ಮಾಡುವ ಬದಲು ಆಪರೇಷನ್ ಥಿಯೇಟರ್ ಬೆಡ್ ಮೇಲೆ ಮಲಗಿಯೇ ಬಿಟ್ಟರು. ಇನ್ನೊಂದು ಕಡೆ ಸಂತಾನಹರಣ ಆಪರೇಶನ್ ಗೆ ಬಂದಿದ್ದ ಮಹಿಳೆಯರಿಗೆ ಅನಸ್ತೇಷಿಯಾ ನೀಡಿ ಮಲಗಿಸಲಾಗಿತ್ತು. ಈ ನಡುವೆ ಕುಡುಕ ವೈದ್ಯರನ್ನು ಬಚಾವ್ ಮಾಡಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ನಾಟಕ ಶುರುವಾಯಿತು.


ವೈದ್ಯರಿಗೆ ಏನೋ ಆಗಿದೆ, ಶುಗರ್ ಕಮ್ಮಿ ಆಗಿದೆ, ಬಿಪಿ ಜಾಸ್ತಿ ಆಗಿದೆ ಅಂತ ಹೈ ಡ್ರಾಮಾ ಮಾಡಲಾರಂಭಿಸಿದರು. ವೈದ್ಯರಿಗೆ ಗ್ಲೂಕೋಸ್ ಹಾಕಿಸಿ ಆಸ್ಪತ್ರೆಯಿಂದ ಕೊಪ್ಪಕ್ಕೆ ವಾಪಸ್ ಕಳುಹಿಸಲಾಯಿತು. ಆಪರೇಶನ್ ಗೆ ಬಂದ ಮಹಿಳೆಯರು, ಅವರ ಸಂಬಂಧಿಕರು ಹಾಗೂ ಸಾರ್ವಜನಿಕರು ಹಿಡಿಶಾಪ ಹಾಕಿದರು.

ಇತ್ತೀಚಿನ ಸುದ್ದಿ

ಜಾಹೀರಾತು