1:00 AM Wednesday19 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಸಚಿವರ ಹೇಳಿಕೆ ವಂಚನೆಯ ಹೊಸ ವರಸೆ: ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ

23/10/2022, 14:17

ಮಂಗಳೂರು(reporterkarnataka.com); ಸಂಸದ ನಳಿನ್ ಕುಮಾರ್ 20 ದಿನಗಳ ಕಾಲಾವಧಿ ನೀಡುವಂತೆ ಜನತೆಯ ಮುಂದೆ ಕೈ ಮುಗಿದಿದ್ದರೆ, ವಾರದ ತರುವಾಯ ಈಗ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಟೋಲ್ ತೆರವು ನವಂಬರ್ ಅಂತ್ಯಕ್ಕೆ ಎಂಬ ಹೊಸ ಹೇಳಿಕೆಯ ಮೂಲಕ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನತೆಗೆ ಮತ್ತೊಂದು ಆಘಾತ ನೀಡಿದ್ದಾರೆ.

ಈವರಗೆ ಟೋಲ್ ಸುಲಿಗೆಯ ಕುರಿತು ಒಂದು ಶಬ್ದವನ್ನೂ ಮಾತಾಡದಿರುವ ಸುನಿಲ್ ಕುಮಾರ್ ಈಗ 40 ದಿನಗಳ ಕಾಲಾವಧಿಯ ಹೇಳಿಕೆಯೊಂದಿಗೆ ರಂಗಪ್ರವೇಶಿಸಿರುವುದು ಬಿಜೆಪಿ ಸರಕಾರದ ವಂಚನೆಯ ಹೊಸ ವರಸೆಯಲ್ಲದೆ ಮತ್ತೇನಲ್ಲ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಬಣ್ಣಿಸಿದೆ.

ಈ ರೀತಿಯ ಕಾಲಮಿತಿಗಳು 6 ವರ್ಷಗಳಿಂದ ಹಲವು ಬಾರಿ ಪುನರಾವರ್ತನೆಗೊಂಡಿದೆ. ತುಳುನಾಡಿನ ಜನತೆ ಇಂತಹ ಹೇಳಿಕೆಗಳ ಕುರಿತು ಯಾವುದೆ ನಂಬಿಕೆ ಹೊಂದಿಲ್ಲ. ಅಕ್ಟೋಬರ್ 17 ರಂದು 20 ದಿನಗಳ ಕಾಲಾವಧಿ ಕೊಡುವಂತೆ ಸಂಸದ ನಳಿನ್ ಕುಮಾರ್ ಕೈ ಮುಗಿದು ಬೇಡಿಕೊಂಡಾಗ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಎಲ್ಲಿದ್ದರು ? ಟೋಲ್ ಗೇಟ್ ಮುತ್ತಿಗೆ ಸಂದರ್ಭ ಇಡೀ ತುಳುನಾಡು ಒಂದಾಗಿ ಟೋಲ್ ಗೇಟ್ ಮುಚ್ಚಲು ಆಗ್ರಹಿಸುತ್ತಿದ್ದಾಗ ಉಸ್ತುವಾರಿ ಸಚಿವರ ಜವಾಬ್ದಾರಿ ಮರೆತು ಕಾಣೆಯಾಗಿದ್ದ ಸುನಿಲ್ ಕುಮಾರ್ ಈಗ ದಿನ ಮುಂದೂಡುವ ಹೊಸ ಆಟದೊಂದಿಗೆ ರಂಗಕ್ಕಿಳಿದಿರುವುದರ ಮರ್ಮ ಸಣ್ಣ ಮಕ್ಕಳಿಗೂ ಅರ್ಥವಾಗುತ್ತದೆ. ಬಿಜೆಪಿ ಸಂಸದ, ಶಾಸಕರುಗಳ ಇಂತಹ ಹಳಸಲು ಸುಳ್ಳುಗಳನ್ನು ನಂಬುವವರು ಈ ಜಿಲ್ಲೆಗಳಲ್ಲಿ ಈಗ ಯಾರೂ ಇಲ್ಲ ಎಂದು ಹೋರಾಟ ಸಮಿತಿ ತಿರುಗೇಟು ನೀಡಿದೆ‌.

ಹೋರಾಟವನ್ನು ಕೈ ಬಿಟ್ಟರೆ ಟೋಲ್ ತೆರವು ಪ್ರಸ್ಥಾಪವನ್ನೆ ಬಿಜೆಪಿ ಸರಕಾರ ಕೈ ಬಿಡುತ್ತದೆ. ಜನತೆಯ ಒಗ್ಗಟ್ಟಿನ ಹೋರಾಟ ಮಾತ್ರ ಸುರತ್ಕಲ್ ಟೋಲ್ ಗೇಟ್ ಅನ್ನು ತೆರವುಗೊಳಿಸಬಲ್ಲದು. ಬಿಜೆಪಿ ಸಂಸದ, ಶಾಸಕರ‌ನ್ನು ನಂಬಿದರೆ ಟೋಲ್ ಸುಲಿಗೆ ಶಾಶ್ವತವಾಗಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಮಾತುಕೊಟ್ಟಂತೆ ಕಾಲಮಿತಿಯಲ್ಲಿ ಟೋಲ್ ತೆರವುಗೊಳಿಸುವಂತೆ ಒತ್ತಾಯಿಸಿ ಅಕ್ಟೋಬರ್ 28ರಿಂದ ನಡೆಯಲಿರುವ ಹಗಲು ರಾತ್ರಿ ಸಾಮೂಹಿಕ ಧರಣಿಯನ್ನು ಜನತೆ ವ್ಯಾಪಕವಾಗಿ ಬೆಂಬಲಿಸುವ ಮೂಲಕ ಟೋಲ್ ಗೇಟ್ ತೆರವು ಹೋರಾಟಕ್ಕೆ ಬಲ ತುಂಬಬೇಕು ಎಂದು ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು