9:37 PM Tuesday21 - July 2026
ಬ್ರೇಕಿಂಗ್ ನ್ಯೂಸ್
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರ ಧರ್ಮದೇಟು; ಪೊಲೀಸ್ ವಶಕ್ಕೆ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ತೀರ್ಥಹಳ್ಳಿ | ಗುಂಡುಗದ್ದೆ ಬಳಿ ಆಟವಾಡುತ್ತಾ ರಸ್ತೆಗೆ ಬಂದ ಮಗು: ಕಾರು ಡಿಕ್ಕಿಯಾಗಿ… ಧಾರವಾಡ ಟು ಬೆಂಗಳೂರು: ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ Mangaluru | ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ:… ದಾರಿ ತಪ್ಪಿ ನಾಪೋಕ್ಲು ಪಟ್ಟಣ ಪ್ರವೇಶಿಸಿದ ಜಿಂಕೆ: ವಾಹನಗಳ ಅರ್ಭಟ, ಬೀದಿ ನಾಯಿಗಳ… ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ನಿರ್ಧಾರ ಕೈಬಿಡದಿದ್ದರೆ ಧರಣಿ: ವಿವಿಧ ಸಂಘಟನೆಗಳ ಆಕ್ರೋಶ ಮುತ್ತೈದೆ ಸಾವು ಕಂಡ ಮಹಾತಾಯಿ: ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಚೆನ್ನಮ್ಮ… ಬಂಟ್ವಾಳ, ಬಾದಾಮಿ ಸಹಿತ ರಾಜ್ಯದ 4 ರೈಲು ನಿಲ್ದಾಣಗಳಿಗೆ ನ್ಯೂ ಲುಕ್: ಏರ್‌ಪೋರ್ಟ್… ಕೊಡಗಿನಲ್ಲಿ ಅಕ್ರಮ ಬೇಟೆಗಾರರ ಮೇಲೆ ಅರಣ್ಯ ಇಲಾಖೆ ಗುಂಡೇಟು: ಮಾಲು ಸಮೇತ ಇಬ್ಬರು…

ಇತ್ತೀಚಿನ ಸುದ್ದಿ

ಸಾದ್ ಸೈಮಾಚೊ: ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗ

11/08/2023, 21:31

ಮಂಗಳೂರು(reporterkarnataka.com): ಕವಿತಾ ಟ್ರಸ್ಟ್ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ `ಸಾದ್ ಸೈಮಾಚೊ’ (ಪ್ರಕೃತಿಯ ನಾದಗಳು) ಎಂಬ ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗವನ್ನು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಸಹಕಾರದಲ್ಲಿ ಆಗಸ್ಟ್ 6ರಂದು ನಡೆಸಿತು. ಗೋವಾದ ಢಾಯಿ ಆಖಾರ್ (ಎರಡುವರೆ ಅಕ್ಷರ) ತಂಡವು ಪ್ರಕೃತಿಯ ದನಿಗಳಿಗೆ ಸಂಬಂಧಪಟ್ಟ ಹಿಂದಿ ಮತ್ತು ಕೊಂಕಣಿಯ ಸಾಹಿತ್ಯವನ್ನು ಸಾದರಪಡಿಸಿದರು.

ಕೇದಾರ್‌ನಾಥ್ ಸಿಂಗ್ ಇವರ ’ಬಾಘ್’, ಸಲೀಲ್ ಚತುರ್ವೇದಿಯ ’ಕಹಾಂ ಗಯೀ ಓ ನದೀ ಕೀ ಧಾರ್’ ಮತ್ತು ಜಾರ್ಕಂಡಿನ ಜಾಸಿಂತಾ ಕೆರ್ಕಟ್ಟಾ ಇವರ ’ನದೀ, ಪಹಾಡ್ ಔರ್ ಬಜಾರ್’ – ಹಿಂದಿ ಕವಿತೆಗಳನ್ನು ಹಾಗೂ ಮಮತಾ ವೆರ್ಲೇಕರ್ ಇವರ ’ಗುಪೀತ್’, ’ಫೊಂಡ್ಕುಲಾಂ’ ಮತ್ತು ಪ್ರಕಾಶ್ ಪರಿಯೆಂಕಾರ್ ಇವರ ’ಪಾಣಿ ಆತಾಂ ದೆಂವ್ತಾ’ ಹಾಗೂ ’ಹಿ ರಾನ್‌ಕಾಣಿ’ ಕವಿತೆಗಳನ್ನು ಪ್ರಸ್ತುತಪಡಿಸಿದರು.
ಜ್ಞಾನಪೀಠ ಪುರಸ್ಕಾರ ವಿಜೇತ ಸಾಹಿತಿ ದಾಮೋದರ ಮಾವ್ಜೊ ಇವರ ಕತೆ ’ಭುರ್ಗಿಂ ಮುಗೆಲಿಂ ತಿಂ’ ವಿಷಯ ಮತ್ತು ಪ್ರಸ್ತುತಿಯ ಕಾರಣಕ್ಕಾಗಿ ನೆರೆದ ಕೇಳುಗರ ಕಣ್ಣಲ್ಲಿ ನೀರೂರಿಸಿತು. ಡಾ. ರಮಿತಾ ಗುರವ್, ಡಾ. ಮನೀಷಾ ಖೊರಾಟೆ ಮತ್ತು ಮಮತಾ ವೆರ್ಲೆಕಾರ್ ಸುಂದರವಾಗಿ ಇವನ್ನು ವಾಚಿಸಿದರು. ಆರ್ತಿ ದಾಸ್ ಮತ್ತು ನಿಯತಿ ಪತ್ರೆ ಸಾಹಿತ್ಯ ಮತ್ತು ಸಾಹಿತಿಗಳ ಹಿನ್ನಲೆ ವಿವರಿಸಿದರು.
ಪ್ರತಿಷ್ಟಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರು ಬಾಳಿಗಾ ಢಾಯಿ ಆಖಾರ್ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕವಿತಾ ಟ್ರಸ್ಟ್ ಟ್ರಸ್ಟಿಗಳಾದ ವಿಲಿಯಮ್ ಪಾಯ್ಸ್ ಸ್ವಾಗತಿಸಿ, ವಿಕ್ಟರ್ ಮತಾಯಸ್ ವಂದಿಸಿದರು.
ನಂತರ ಸಾಹಿತ್ಯ ಅಕಾಡೆಮಿ ನವದೆಹಲಿ, ಕವಿತಾ ಟ್ರಸ್ಟ್ ಸಹಕಾರದಲ್ಲಿ ಆಯೋಜಿಸಿದ `ಲೋಕ: ವಿವಿಧ ಸ್ವರಗಳು’ ಎಂಬ ಜಾನಪದ ಕಾರ್ಯಕ್ರಮ ನಡೆಯಿತು. ನವ ಸಿದ್ದಿ ಕಲಾ ತಂಡ ಮೈನಳ್ಳಿ ಇವರಿಂದ ಡಮಾಮ್, ಫುಗ್ಡಿ, ಜಾಕಯ್ ಮತ್ತು ಶಿಗ್ಮೊ ಆಟಗಳ ಪ್ರಸ್ತುತಿ ನಡೆಯಿತು. ಕಲಾವಿದ ಸುನೀಲ್ ಸಿದ್ದಿ ಈ ಪ್ರಕಾರಗಳ ವಿವರಣೆ ನೀಡಿದರು. ಅಕಾಡೆಮಿಯ ಕೊಂಕಣಿ ಸಲಹಾ ಸಮಿತಿಯ ಅಧ್ಯಕ್ಷ ಮೆಲ್ವಿನ್ ರೊಡ್ರಿಗಸ್ ಕಲಾವಿದರನ್ನು ಗೌರವಿಸಿದರು. ಸದಸ್ಯಾ ಎಚ್ಚೆಮ್ ಪೆರ್ನಾಳ್ ಸ್ವಾಗತಿಸಿದರು. ಇನ್ನೋರ್ವ ಸದಸ್ಯ ಸ್ಟ್ಯಾನಿ ಬೇಳ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು