ಇತ್ತೀಚಿನ ಸುದ್ದಿ
ಮಾಣಿ ಜಂಕ್ಷನ್ ನಲ್ಲಿ ರಸ್ತೆ ಅಪಘಾತ: ಕಾರುಗಳೆರಡರ ಮುಂಭಾಗ ಸಂಪೂರ್ಣ ಜಖಂ; ಪವಾಡಸದೃಶ ಚಾಲಕರು ಪಾರು
16/02/2026, 19:13
ಬಂಟ್ವಾಳ(reporterkarnataka.com): ರಾಷ್ಟ್ರೀಯ ಹೆದ್ದಾರಿ ಮಾಣಿ – ಮೈಸೂರು ಜಂಕ್ಷನ್ ನಲ್ಲಿ ಸೋಮವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಕಾರುಗಳೆರಡರ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕರು ಪವಾಡಸದೃಶ್ಯ ಪಾರಾಗಿದ್ದಾರೆ.
ಬೆಳಗ್ಗೆ 7.15ರ ಹೊತ್ತಿಗೆ ಫ್ಲೈ ಓವರ್ ಕೆಳಗಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಉಪ್ಪಿನಂಗಡಿ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಎರಡೂ ಕಾರುಗಳ ಮುಂಭಾಗ ಜಖಂಗೊಂಡಿದೆ. ವಾಹನ ಚಾಲಕರಿಬ್ಬರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಫ್ಲೈ ಓವರ್ ಕೆಳಗಡೆಯೇ ಇರುವ ಈ ಜಂಕ್ಷನ್ ನಲ್ಲಿ ಸ್ವಲ್ಪ ಗಮನ ತಪ್ಪಿದರೂ ಅಪಘಾತವಾಗುವ ಸಂಭವ ಇದೆ. ಇಲ್ಲಿ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಉಪ್ಪಿನಂಗಡಿ ಕಡೆಯಿಂದ ಬರುವ ಸರ್ವಿಸ್ ರಸ್ತೆಗೆ ಹಂಪ್ಸ್ ಹಾಕುವುದರಿಂದ ಅಪಘಾತ ತಪ್ಪಿಸಬಹುದೆಂದು ಸ್ಥಳೀಯ ರಿಕ್ಷಾ ಚಾಲಕರ ಅಭಿಪ್ರಾಯವಾಗಿದೆ.














