1:44 AM Friday5 - June 2026
ಬ್ರೇಕಿಂಗ್ ನ್ಯೂಸ್
ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ… ಯಾವ ಟ್ರಬಲ್ ಶೂಟರೂ ಇಲ್ಲ; ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗ್ಲಿಲ್ಲ:… ಆರೋಗ್ಯ ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಹೊಸ ಮೈಲಿಗಲ್ಲು: ವೈದ್ಯರ ನೇರ ನೇಮಕಾತಿಗೆ… ಹೊಸ ರಾಜಕೀಯ ಹಾದಿಯತ್ತ ಅಣ್ಣಾಮಲೈ: ಕರ್ನಾಟಕದ ಸಿಂಗಂನಿಂದ ಹೊಸ ಪಕ್ಷ ಘೋಷಣೆ ತಿತಿಮತಿ | ಕಾಡಾನೆ ದಾಳಿ: ಕಾಫಿ ತೋಟ ವೀಕ್ಷಿಸಲು ಹೋಗಿದ್ದ ಐಜಿ ಪತ್ನಿ… ಚಿಕ್ಕಮಗಳೂರು: ಕರೆದ ಕೂಡಲೇ ಬರಲಿಲ್ಲವೆಂದು ಕೆಫೆ ಕಾರ್ಮಿಕನ ಮೇಲೆ ಹಲ್ಲೆ ಡಿಕೆಶಿ ಸಂಪುಟದ ಖಾತೆ ಹಂಚಿಕೆ: ಖಾದರ್ ಗೆ ಆರೋಗ್ಯ; ಉಳಿದಂತೆ ಯಾರು ಯಾರಿಗೆ… ನಿಜವಾಯ್ತು ಮಿಥನ್ ರೈ ಭವಿಷ್ಯವಾಣಿ!: ಕೊನೆಗೂ ಡಿಕೆಶಿ ಆದ್ರು ಸಿಎಂ!!; ಇದೀಗ ವೀಡಿಯೊ… ಸಾಮೂಹಿಕ ನಾಯಕತ್ವದಲ್ಲೇ ಮುಂದುವರಿಯಿರಿ: ಸಿಎಂ ಡಿಕೆಶಿಗೆ ಹೈಕಮಾಂಡ್‌ ಕಟ್ಟುನಿಟ್ಟಿನ ಸೂಚನೆ ಲೈವ್‌ ಬಂದು ಅಭಿಮಾನಿಗಳಿಗೆ ಬಹುಮುಖ್ಯ ಮಾಹಿತಿ ನೀಡಿದ ನಟ ದರ್ಶನ್‌

ಇತ್ತೀಚಿನ ಸುದ್ದಿ

ಮಂಗಳೂರು: ರೊನಿ ಅರುಣ್ ಅವರ ರಿಕ್ಷಾ ಡೈರಿ ಲೋಕಾರ್ಪಣೆ

12/05/2024, 18:34

ಮಂಗಳೂರು(reporterlarnataka.com): ಮಾಂಡ್ ಸೊಭಾಣ್ ಪ್ರಕಾಶನದ 22ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಳ್ಳಾಲ ಸೋಮೇಶ್ವರದಲ್ಲಿರುವ ಪಶ್ಚಿಮ್ ಟ್ರಸ್ಟ್ ಸಭಾಂಗಣದಲ್ಲಿ ಮೇ 9ರಂದು ಲೋಕಾರ್ಪನೆಗೊಂಡಿತು. ಹಿರಿಯ ಲೇಖಕಿ ಮತ್ತು ಪ್ರಕಾಶಕಿ ಗ್ಲೇಡಿಸ್ ರೇಗೊ ಪುಸ್ತಕ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿ ಪಶ್ಚಿಮ್ ಟ್ರಸ್ಟ್ ನಿರ್ದೇಶಕ ರೋಹಿತ್ ಸಾಂಕ್ತುಸ್ ಶುಭ ಹಾರೈಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ತೆಲೊಕಾ ಸಂಸ್ಥೆಯ ನಿರ್ದೇಶಕಿ ಕ್ಲಾರಾ ಡಿಕುನ್ಹಾ ಉಪಸ್ಥಿತರಿದ್ದರು. ಲೇಖಕ ರೊನಿ ಅರುಣ್ ಪ್ರಸ್ತಾವನೆಗೈದು ವಿತೊರಿ ಕಾರ್ಕಳ ನಿರೂಪಿಸಿದರು.
ರಿಕ್ಷಾ ಡೈರಿ ದಿರ್ವೆಂ ಕೊಂಕಣಿ ಮಾಸಿಕದಲ್ಲಿ ಪ್ರಕಟವಾದ 44 ಲೇಖನಗಳ ಸಂಗ್ರಹ. ಕಲಾವಿದ ವಿಲ್ಸನ್ ಕಯ್ಯಾರ್ ಮುಖಪುಟ ರಚಿಸಿದ್ದಾರೆ. ಈ ಮೊದಲು ʻಬಿಡಾರ್ʼ ಕಥಾಸಂಕಲನ ಹಾಗೂ ʻಥಕಾನಾತ್‌ಲ್ಲೊ ಝುಜಾರಿʼ (ಜೀವನ ಚರಿತ್ರೆ) ಪುಸ್ತಕಗಳನ್ನು ರೊನಿ ಅರುಣ್ ಬರೆದಿದ್ದು ʻಥಕಾನಾತ್‌ಲ್ಲೊ ಝುಜಾರಿʼ ಪುಸ್ತಕಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಲಭಿಸಿದೆ. ರಿಕ್ಷಾಡ ಡೈರಿ ಪುಸ್ತಕದ ರಿಯಾಯಿತಿ ಬೆಲೆ 100/- ಮಾತ್ರ. ಪುಸ್ತಕಕ್ಕಾಗಿ ಮಾಂಡ್ ಸೊಭಾಣ್ ಕಚೇರಿ ಅಥವಾ ಲೇಖಕರನ್ನು ಸಂಪರ್ಕಿಸಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು