7:29 PM Friday4 - April 2025
ಬ್ರೇಕಿಂಗ್ ನ್ಯೂಸ್
Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2… Mangaluru | ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಮಂಗಳೂರಿನ ಸಿಯೆಲ್‌… Bangaluru | ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿಯಿಂದ ವಿನೂತನ ಯೋಜನೆ:… Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ… Chikkamagaluru | ಕಾಫಿನಾಡಿನಲ್ಲಿ ಭಾರೀ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಯಲ್ಲಿ ವರ್ಷಧಾರೆ Solar power | ದೇಶದ 2,249 ರೈಲು ನಿಲ್ದಾಣಗಳಲ್ಲಿ 209 ಮೆಗಾವ್ಯಾಟ್‌ ಸೌರ… EX CM | ವಕ್ಸ್ ಆಸ್ತಿ ಕಬಳಿಸಿರುವುದನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ತಿದ್ದುಪಡಿ… Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಮಾಸ್ಕೋದಿಂದ ಪುಟ್ಟ ಮಗಳಿಗೆ ಒಂದು ಸೂಟ್ ಕೇಸ್ ಚಾಕಲೇಟ್ ತಂದಿದ್ದ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ !

02/07/2021, 20:22

ಬೆಂಗಳೂರು(reporterkarnataka news): ಪ್ರಸಿದ್ಧ ವಿಜ್ಞಾನ ಬರಹಗಾರ, ಡಿಆರ್​​​​ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ವಾರದ ಹಿಂದೆ ಅವರು ತೀವ್ರ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲಸ ನಿಮಿತ್ತ ಈ ಹಿಂದೆ ರಷ್ಯಾಕ್ಕೆ ಹೋಗಿದ್ದಾಗ ಒಂದು ಸೂಟ್ ಕೇಸ್ ತುಂಬಾ ಚಾಕಲೇಟ್ ತಂದಿರುವುದನ್ನು ಅವರ ಪುತ್ರಿ ಮೇಘನಾ ಸುಧೀಂದ್ರ ನೆನಪಿಸಿಕೊಳ್ಳುತ್ತಾರೆ.

ಫಾದರ್ಸ್ ಡೇ ಬಗ್ಗೆ ಮೇಘನಾ ಅವರು ಬರೆದ ಲೇಖನದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

ಮೇಘನಾ ಅವರು ಆಗ ಸಣ್ಣವರಿದ್ದರಂತೆ. ಸ್ಕೂಲಿಗೆ ಹೋಗುವ ಪ್ರಾಯ. ಆಗ ತಂದೆ ಸುಧೀಂದ್ರ ಹಾಲ್ದೊಡ್ಡೇರಿ ಕೆಲಸದ ಮೇಲೆ ರಷ್ಯಾದ ಮಾಸ್ಕೋಕ್ಕೆ ಹೋಗಿದ್ದರಂತೆ. ಮಗಳು ದಿನಾ ಕಾಲ್ ಮಾಡಿ ‘ಅಪ್ಪಾ… ಯಾವಾಗ ಬರ್ತೀರಿ’ ಅಂತ ವಿಚಾರಿಸುತ್ತಿದ್ದರಂತೆ. ಒಂದು ವಾರ ಬಿಟ್ಟು, ಎರಡು ವಾರ ಬಿಟ್ಟು ಎಂದು ಸಾಬೂಬು ಹೇಳುತ್ತಿದ್ದ ತಂದೆ ಸುಧೀಂದ್ರ ಅವರು ‘ಮಗಳೇ… ನಿನಗೆ ಏನು ತರಬೇಕು’ ಎಂದು ಕೇಳಿದ್ರಂತೆ. ತಕ್ಷಣ ಮಗಳು ಹೇಳಿದ್ದು ಒಂದು ಸೂಟ್ ಕೇಸ್ ಫುಲ್ ಚಾಕಲೇಟ್ ಬೇಕಪ್ಪ ಎಂದು.

ಮಗಳ ಕೋರಿಕೆಯಂತೆ ಸುಧೀಂದ್ರ ಒಂದು ಸೂಟ್ ಕೇಸ್ ಪೂರ್ತಿ ಚಾಕಲೇಟ್ ತಂದು ಮಗಳಿಗೆ ಶಾಕ್ ಕೊಟ್ಟಿದ್ದರಂತೆ. ಅದು ಕೂಡ ಬರೋಬ್ಬರಿ 35 ಕೆಜಿ ಚಾಕಲೇಟ್.

ಮಗಳು ಸುಮ್ಮನೇ ಹೇಳುವ ಮಾತನ್ನು ನಿಜ ಮಾಡುವವರೇ ಅಪ್ಪ ಎಂದು ಒಕ್ಕಣೆ ಬರೆಯಲು ಪುತ್ರಿ ಮೇಘನಾ ಮರೆಯಲಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು