9:15 AM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಪ್ರತಿಯೊಬ್ಬರು ಧೃತಿಗೆಡದೆ ಆತ್ಮಸ್ಥೈರ್ಯದಿಂದ ಬದುಕು ಮುನ್ನಡೆಸಿ: ಶ್ರೀ ನಿರ್ಮಲಾನಂದ ಸ್ವಾಮೀಜಿ ಕರೆ

03/06/2021, 16:49

ನಾಗಮಂಗಲ(reporterkarnataka news): ಇಂದಿನ ಮಹಾಮಾರಿ ಕೊರೊನಾದಿಂದ ರಾಜ್ಯ ದೇಶ ಧೃತಿಗೆಟ್ಟಿದ್ದು, ಬದುಕುವ ಜೀವದ ಜೊತೆ ಇರಬೇಕು. ಯಾರು ಕೂಡ ಧೃತಿಗೆಡಬಾರದು ಎಂದು ಆದಿಚುಂಚನಗಿರಿಯ ಜಗದ್ಗುರು ಶ್ರೀ ನಿರ್ಮಲಾನಂದ ಸ್ವಾಮಿಗಳು ಕರೆ ನೀಡಿದರು.

ಅವರಿಂದ ನಾಗಮಂಗಲ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸಿ ಆರ್ ಎಸ್ .ಫೌಂಡೇಶನ್ ಹಮ್ಮಿಕೊಂಡಿದ್ದ ತುರ್ತು ವಾಹನ ಹಾಗೂ ಪೌರಕಾರ್ಮಿಕರಿಗೆ ಆಶಾ ಕಾರ್ಯಕರ್ತರಿಗೆ ಆಹಾರಕ್ಕೆ ಕಿಟ್ ನೀಡುವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಂದು ದೇಶಾದ್ಯಂತ ಮಹಾಮಾರಿಯು ಹಬ್ಬಿರುವ ಹಿನ್ನೆಲೆಯಲ್ಲಿ ಬದುಕುವ ದಾರಿಯ ಹುಡುಕುತ್ತ ನಾವುಗಳು ಆತ್ಮಸ್ಥೈರ್ಯದಿಂದ ಧೃತಿಗೆಡದೆ ಧೈರ್ಯದಿಂದ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು.

ನಾವುಗಳು ಮೊದಲನೆಯ ಅಲೆಯಲ್ಲಿ ಅಲ್ಪ ಪ್ರಮಾಣದ ಬದುಕು ಎದುರಿಸುತ್ತಿದ್ದು ಎರಡನೇ ಅಲೆ ಇಂದು ದೇಶ ವ್ಯಾಪಿಸಿ ಬದುಕುವ ಸಂಕಷ್ಟದ ಹಾದಿಯಲ್ಲಿದೆ.ನಾವುಗಳು ಹೆದರದೆ ಆತ್ಮವಿಶ್ವಾಸದಿಂದ ಮುಂಬರುವ ದಿನಗಳಲ್ಲಿ ಸಾಮಾಜಿಕ ಅಂತರದೊಂದಿಗೆ  ಬದುಕಬೇಕಾದ ಸ್ಥಿತಿ  ನಿರ್ಮಾಣವಾಗಿದೆ. ಇಂತಹ  ಇಕ್ಕಟ್ಟಿನಲ್ಲಿ ನಾವುಗಳೆಲ್ಲರೂ ಎಚ್ಚರದಿಂದ  ಇರಬೇಕಾದ ಅಗತ್ಯ ಎಂದು ತಿಳಿಸಿದರು.

ಸಾರ್ವಜನಿಕರು ಯಾವುದೇ ಭಯಬೀತರಾಗದೆ ಆತ್ಮಹತ್ಯೆಯಂತಹ ಚಿಂತನೆಯನ್ನು ಕೈಬಿಟ್ಟು ಈ ರೋಗಮುಕ್ತ ಸಮಾಜವನ್ನು ನಿರ್ಮಾಣ ಮಾಡುವುದಕ್ಕೆ ಸಹಕರಿಸಬೇಕು. ಇದರ ಜೊತೆಗೆ ಬ್ಲಾಕ್ ಪಂಗಸ್ ರೋಗವು ಸಹ ಹರಡುತ್ತಿದ್ದು ಸಾರ್ವಜನಿಕರು ಆದಷ್ಟು ಸುರಕ್ಷಿತವಾಗಿ ಇರಬೇಕಾಗುತ್ತದೆ. ಈ ಕೊರೊನಾ ರೋಗವನ್ನು ನಿರ್ಮೂಲನ ಮಾಡಲು ಸರ್ಕಾರವು ಸಹ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಮುಂದಿನ ಹತ್ತು ದಿನಗಳಲ್ಲಿ ನಮ್ಮ ಆದಿಚುಂಚನಗಿರಿ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಪ್ಲಾಂಟನ್ನು ನಿರ್ಮಾಣ ಮಾಡುತ್ತಿದ್ದು ನಮ್ಮ ಆಸ್ಪತ್ರೆಯಲ್ಲಿ ಸಾವಿರ ರೋಗಿಗಳು ಬಂದರೂ ಸಹ ಚಿಕಿತ್ಸೆಯನ್ನು ನೀಡಲಾಗುವುದು. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಬೇಕು ಎಂದು ತಿಳಿಸಿದರು

ನಾಗಮಂಗಲದ ಮಾಜಿ ಶಾಸಕರಾದ ಚೆಲುವರಾಯಸ್ವಾಮಿ ಅವರು, ಸಿ.ಆರ್.ಎಸ್ ಫೌಂಡೇಶನ್ ಸಮಾಜಮುಖಿ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು