10:57 PM Thursday20 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ಪೆಹಲ್ಗಾಮ್ ನಲ್ಲಿ 26 ಜನ ಸತ್ರು, ಕೇಂದ್ರದ ಫೆಯ್ಯ್ಲೂರು, ನಾವು ಪ್ರಧಾನಿ ರಾಜೀನಾಮೆ ಕೇಳಿದ್ವಾ: ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನೆ

08/06/2025, 21:38

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿಗೆ 26 ಜನ ಸತ್ರು, ಇದು ಕೇಂದ್ರದ ಫೆಯ್ಯ್ಲೂರು, ನಾವು ಪ್ರಧಾನಿ ರಾಜೀನಾಮೆ ಕೇಳುದ್ವಾ ಎಂದು ಲೋಕೋಪಯೋಗಿ
ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳಿದ್ದಾಗ ಬಹಳಷ್ಟು ಘಟನೆ ನಡೆದಿದೆ, ನಾವು ರಾಜೀನಾಮೆ ಕೇಳಿರಲಿಲ್ಲ. ಪಾಕಿಸ್ತಾನದ ಜೊತೆ ಯುದ್ಧವಾದಾಗ ಎಲ್ಲ ಪಕ್ಷಗಳು ಬಿಜೆಪಿ ಜೊತೆ ಕೈಜೋಡಿಸಿದ್ರು. ಅಲ್ಲೂ ಫೆಯ್ಲ್ಯೂರ್ ಆಗಿತ್ತು, ಆಗ ಯಾರೂ ರಾಜೀನಾಮೆ ಕೇಳಿಲ್ಲ.
ಯಾರು ತಮ್ಮ ಕೆಲಸ ಸರಿಯಾಗಿ ಮಾಡಿಲ್ಲ ಅನ್ನೋದು ತನಿಖೆಯಿಂದ ಹೊರಬರಬೇಕು. ಯಾರು ಅನುಮತಿ ಕೇಳಿದ್ರು, ಯಾರು ನಿರಾಕರಿಸಿದ್ರು, ಯಾವಾಗ ಕೊಟ್ರು ಯಾರಿಗೂ ಗೊತ್ತಿಲ್ಲ, ಎಲ್ಲಾ ಬೂದಿ ಮುಚ್ಚಿದ ಕೆಂಡ ಎಂದು ಸಚಿವ ಜಾರಕಿಹೊಳಿ ನುಡಿದರು.

ಕಮಿಷನರ್, ಡಿಸಿಪಿ, ಇನ್ಸ್ಪೆಕ್ಟರ್, ಪೊಲೀಸ್ ಒಬ್ಬೊಬ್ಬರ ಲೆವೆಲ್ ನಲ್ಲಿ ಒಂದೊಂದು ಆಗಿದೆ ತನಿಖೆಯಿಂದ ಸತ್ಯ ಹೊರಬರಲಿ. ಹೈಕಮಾಂಡ್ ಜವಾಬ್ದಾರಿ ಇದೆ, ದೆಹಲಿಗೆ ಕರೆಸಿ ವರದಿ ಕೇಳಬಹುದು, ಮುಂದೆ ಆಗದಂತೆ ಎಚ್ಚರ ವಹಿಸಲು ಸಲಹೆ ಸೂಚನೆ ಕೊಡಬಹುದು ಎಂದರು.
ಬೆಳಗಾವಿ ವಿಭಜನೆ ಸದ್ಯಕ್ಕಿಲ್ಲ, ಆಮೇಲೆ ಮಾಡಬಹುದು, ಮಾಡೋ ವಿಚಾರ ಇದೆ, ಸದ್ಯಕ್ಕಿಲ್ಲ ಎಂದು ಅವರು ನುಡಿದರು.

*ಸಿಎಂ ಬದಲಾವಣೆ ಪ್ರಶ್ನೆಗೆ ನಸುನಕ್ಕ ಸತೀಶ್ ಜಾರಕಿಹೊಳಿ:*
ಅದೇಗೆ ಬದಲಾವಣೆ ಮಾಡ್ತಾರೆ? ನಿಮಗೆ ಹೇಳಿದ್ದು ಯಾರು? ಎಂದು ಸಚಿವರು ನಸುನಕ್ಕರು.
ಎರಡೂವರೆ ವರ್ಷಕ್ಕೆ ಮಾಡ್ತಾರೆ ಅಂತ ನಿಮಗೆ ಯಾರು ಹೇಳಿದ್ದು?
ಎರಡೂವರೆ ವರ್ಷ ಅಂತ ಎಲ್ಲೂ ಇಲ್ಲ, ಅವರೇ ಇದ್ದಾರೆ ಮುಂದೆಯೂ ಇರುತ್ತಾರೆ ಅಷ್ಟೇ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು