8:48 PM Sunday18 - October 2026
ಬ್ರೇಕಿಂಗ್ ನ್ಯೂಸ್
ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20…

ಇತ್ತೀಚಿನ ಸುದ್ದಿ

ನಾರಾಯಣಪುರ ಅಣೆಕಟ್ಟೆ ನಿಂದ 1,10,000 ಕ್ಯೂಸೆಕ್ ನೀರು ಬಿಡುವ ಸಾಧ್ಯತೆ: ನದಿ ಪಾತ್ರದ ಜನರು ಎಚ್ಚರ ವಹಿಸಲು ಸೂಚನೆ

29/06/2025, 12:42

ಶಿವು ರಾಠೋಡ ಹುಣಸಗಿ ಯಾದಗಿರಿ
info.reporterkarnataka@gmail.com

ನಾರಾಯಣಪುರ ಅಣೆಕಟ್ಟೆ ನಿಂದ 1,10,000 ಕ್ಯೂಸೆಕ್ ನೀರು ಬಿಡುವ ಸಾಧ್ಯತೆ ಇರೋದರಿಂದ ಸುತ್ತ ಮುತ್ತಲ ನಿವಾಸಿಗಳು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ಅಣೆಕಟ್ಟಿನ ಪ್ರಸ್ತುತ ನೀರಿನ ಸಂಗ್ರಹವು 80.27% ಇದೆ .ಕೃಷ್ಣಾ ನದಿಗೆ ಹೊರಹರಿವು 84,445 ಕ್ಯೂಸೆಕ್ ಇದೆ. ಅಣೆಕಟ್ಟಿನ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ ಅಣೆಕಟ್ಟೆಯ ಹೊರಹರಿವು ಪರಿಗಣಿಸಲಾಗಿ ನಾರಾಯಣಪುರ ಅಣೆಕಟ್ಟೆ ಗೆ ಸುಮಾರು 1,10,000 ಕ್ಯೂಸೆಕ್ ಒಳಹರಿವು ಬರುವ ಸಾಧ್ಯತೆ ಇದ್ದು ,ಮದ್ಯಾಹ್ನ. 3.00 ಗಂಟೆ ನಂತರ , ಪ್ರಸ್ತುತ ಇರುವ ಹೊರಹರಿವನ್ನು 84,445 ಕ್ಯೂಸೆಕ್ ರಿಂದ 1,10,000 ಕ್ಯೂಸೆಕ್ ಗೆ ಹಂತ ಹಂತವಾಗಿ ಹೆಚ್ಚಿಸಲಾಗುವುದು & ಒಳಹರಿವಿನ ಅನುಸಾರ ನದಿಗೆ ಬಿಡುತ್ತಿರುವ ಹೊರಹರಿವನ್ನು ಕ್ರಮೇಣ ಹೆಚ್ಚಿಸಲಾಗುವುದು/ಕಡಿಮೆ ಮಾಡಲಾಗುವುದು.
ಆದರಿಂದ ನಾರಾಯಣಪುರ ಅಣೆಕಟ್ಟಿನಕೆಳಭಾಗದಲ್ಲಿರುವ ನದಿ ಪಾತ್ರದ ಜನರು ಹಾಗೂ ಜಾನುವಾರು ಜಾಗ್ರತೆಯಿಂದ ಇರಲು ಎಚ್ಚರಿಕೆಯಿಂದಿರಲು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು