2:14 AM Sunday9 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ನಂಜನಗೂಡು: ಡೇಂಜರ್ ಕೆರೆಯ ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಕುರಿಗಳ ದಾರುಣ ಸಾವು

15/02/2024, 18:49

*ಮಧ್ಯಾಹ್ನದ ವೇಳೆಯಲ್ಲಿ ಕೆರೆಯ ನೀರು ಕುಡಿದ ಹಿಂಡು ಕುರಿಗಳು..ಸಂಜೆ ಕಳೆಯುವುದರ ಒಳಗಾಗಿ ಸರಣಿ ಸಾವು*

*ಕುರಿಗಾಹಿಗಳ ಕಣ್ಣೀರಿಗೆ ನೆರವಾಗದ ಜಿಲ್ಲಾ ಮತ್ತು ತಾಲೂಕು ಆಡಳಿತ*


*ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಆಹಾರ ಸೇವಿಸಿ ದಾಹ ನೀಗಿಸಿಕೊಳ್ಳುವ ಸಲುವಾಗಿ ಹತ್ತಿರದ ಕೆರೆಯ ನೀರು ಕುಡಿದ ಹಿಂಡು ಕುರಿಗಳು*

ಕೆರೆಯ ಕಲುಷಿತ ನೀರು ಕುಡಿದು ಸುಮಾರು 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದ ಬಳಿ ನಡೆದಿದೆ.
ಕೆರೆಯ ಕಲುಷಿತ ನೀರು ಸೇವಿಸಿರುವುದರಿಂದಲೇ ಕುರಿಗಳ ದಾರಣ ಸಾವಿಗೆ ಕಾರಣ ಎನ್ನುತ್ತಾರೆ ಕುರಿಗಾಹಿಗಳು.
ಶಿರಾ ತಾಲ್ಲೂಕಿನ ಬಾಣಗೆರೆ ಗ್ರಾಮದ ರಂಗಸ್ವಾಮಿ ಎಂಬುವರು ನಾಲ್ಕು ನೂರಕ್ಕೂ ಹೆಚ್ಚು ಕುರಿಗಳನ್ನು ಕೂಗಲೂರು ಗ್ರಾಮದ ಸುತ್ತಮುತ್ತ ಮೇಯಿಸುತ್ತಿದ್ದರು.


ಇಂದು ಬೆಳಿಗ್ಗೆ ಕೂಗಲೂರು ಗ್ರಾಮದ ಕೆರೆಯಲ್ಲಿ ನೀರು ಕುಡಿಸಿಕೊಂಡು ಮೇಯಿಸಲು ಹೋದ ಸಂದರ್ಭದಲ್ಲಿ ಐವತ್ತಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡು ಸಾವನ್ನಪ್ಪಿವೆ.
ಕೆರೆಯ ನೀರಿನಲ್ಲಿ ಕ್ರಿಮಿನಾಶಕ ಮಿಶ್ರಣ ವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಕುರಿಗಳನ್ನೆ ನಂಬಿಕೊಂಡು ಜೀವನ ಸಾಗಿಸುತ್ತೇವೆ ಇಷ್ಟೊಂದು ಕುರಿಗಳು ಸಾವನ್ನಪ್ಪಿರುವುದರಿಂದ ನಮಗೆ ತುಂಬಲಾರದ ನಷ್ಟ ಉಂಟಾಗಿದೆ ನಾವು ಮುಂದೆ ಜೀವನ ಸಾಗಿಸುವುದು ಹೇಗೆ ಎಂಬುದು ಚಿಂತೆಯಾಗಿದೆ ಎಂದು ಕುರಿಗಳು ಸಂದರ್ಭದಲ್ಲಿ ಕಣ್ಣೀರು ಸುರಿಸಿದರು.
ಅಧಿಕಾರಿಗಳು ಯಾರು ಕೂಡ ಬಂದು ನಮ್ಮ ಸಮಸ್ಯೆಯನ್ನು ಕೇಳಿಲ್ಲ. ಸರ್ಕಾರ ಕೂಡಲೇ ಪರಿಹಾರವನ್ನು ನೀಡಬೇಕು ಎಂದು ಕುರಿಗಾಹಿ ರಂಗಸ್ವಾಮಿ ಒತ್ತಾಯಿಸಿದ್ದಾರೆ.
ಕೂಗಲೂರು ಗ್ರಾಮಸ್ಥರು ಎಚ್ಚೆತ್ತು ನಮ್ಮ ಸಾಲು ಸಾಲು ಕುರಿಗಳ ಸರಣಿ ಸಾವಿಗೆ ಕಾರಣವಾಗಿರುವ ಕೆರೆಯ ನೀರನ್ನು ಪರೀಕ್ಷಿಸಿ ಎಚ್ಚೆತ್ತುಕೊಳ್ಳಿ ಎಂದು ಕುರಿಗಾಹಿಗಳು ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
ಕೂಡಲೇ ನಂಜನಗೂಡು ತಾಲೂಕು ಆಡಳಿತ ಕೂಗಲೂರು ಕೆರೆಯ ನೀರನ್ನು ಪರೀಕ್ಷಿಸಿದ ಬಳಿಕ ಜನ, ಜಾನುವಾರುಗಳಿಗೆ ಉಪಯೋಗಿಸಲಿ ಎಂಬ ಕರೆಯನ್ನು ನೀಡಿ ಜಾಗೃತಗೊಳಿಸಿ
ಮುಂಬರುವ ಅನಾಹುತಗಳನ್ನು ತಾಲೂಕು ಆಡಳಿತ ತಪ್ಪಿಸಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು