6:14 PM Sunday21 - June 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ

ಇತ್ತೀಚಿನ ಸುದ್ದಿ

ನಂದಿನಿ ನದಿಗೆ ಮಚ್ಚೂರು ಬಳಿ ನಿರ್ಮಿಸಿದ ನೂತನ ಅಣೆಕಟ್ಟಿಗೆ ಚಾಲನೆ: ಗಂಗಾಪೂಜೆ ಮೂಲಕ ಶಾಸಕ ಡಾ. ಭರತ್ ಶೆಟ್ಟಿ ಲೋಕಾರ್ಪಣೆ

15/01/2023, 20:35

ಸುರತ್ಕಲ್(reporterkarnataka.com): ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ನಂದಿನಿ ನದಿಗೆ ಅಡ್ಡವಾಗಿ ಮಚ್ಚೂರು ಕಾನ ಶ್ರೀ ರಾಮ ಮಂದಿರ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ನೂತನ ಅಣೆಕಟ್ಟನ್ನು ನಂದಿನಿ ನದಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಲೋಕಾರ್ಪಣೆಗೊಳಿಸಿದರು.


ಇಳಿ ಸಂಜೆಯ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಹಣತೆಯ ಬೆಳಕಿನಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.
ಗ್ರಾಮದ ನಾಗರಿಕರ ಬಹುಕಾಲದ ಕುಡಿಯುವ ನೀರಿನ ಬವಣೆಯನ್ನು ತಗ್ಗಿಸುವ ಮಾದರಿ ಕಾರ್ಯ ಮಾಡಿರುವ ಡಾ. ಭರತ್ ಶೆಟ್ಟಿಯವರನ್ನು ಊರಿನ ಹಿರಿಯರ ಪ್ರಮುಖರ ಉಪಸ್ಥಿತಿಯಲ್ಲಿ ಆರತಿ ಬೆಳಗಿ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ, ಉಪಾಧ್ಯಕ್ಷರಾದ ನಾರಾಯಣ ಎ.ಎಸ್ ,ಪಂಚಾಯತ್ ಸದಸ್ಯರಾದ ಜಯಂತಿ ನಾಯ್ಕ್ ,ಸುಮನ , ಪೂರ್ಣಿಮಾ ಹರಿಪ್ರಕಾಶ್ , ಜಯಂತಿ ಶಂಕರ್, ರಾಜನೀಶ್, ಮಾಜಿ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆ ,ವೀರಪ್ಪ ಗೌಡ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು