4:18 PM Saturday19 - September 2026
ಬ್ರೇಕಿಂಗ್ ನ್ಯೂಸ್
*ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ…

ಇತ್ತೀಚಿನ ಸುದ್ದಿ

“ಶರ್ಮಿಷ್ಠೆ” ನಾಟಕ ವೀಕ್ಷಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ: ಉಮಾಶ್ರೀ ಭಾವಪೂರ್ಣ ಅಭಿನಯಕ್ಕೆ ಫಿದಾ

23/06/2025, 21:30

ಮೈಸೂರು(reporterkarnataka.com): ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಬೇಲೂರು ರಘುನಂದನ್‌ ವಿರಚಿತ, ಚಿದಂಬರ ರಾವ್‌ ಜಂಬೆ ನಿರ್ದೇಶಿಸಿರುವ ಹಿರಿಯ ನಟಿ ಉಮಾಶ್ರೀ ಅವರ ಅಭಿನಯದ “ಶರ್ಮಿಷ್ಠೆ” ನಾಟವನ್ನು ಭಾನುವಾರ ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯಲ್ಲಿ ವೀಕ್ಷಿಸಿದರು.


ಈ ವೇಳೆ ಮಾತನಾಡಿದ ಅವರು, ಬಹುಮುಖ ಪ್ರತಿಭೆ ಉಮಾಶ್ರೀ ಅವರು ಭಾವಪೂರ್ಣವಾದ ಅಭಿನಯ ನಮ್ಮೆನ್ನೆಲ್ಲ ಒಂದು ಗಂಟೆ ಕಾಲ ಭಾವಪರವಶಗೊಳಿಸಿದೆ. ಇಬ್ಬರು ಪರಮಾಪ್ತ ಸ್ನೇಹಿತರ ವಿಭಿನ್ನವಾದ ನಡೆ, ನುಡಿಗಳು ಹಾಗೂ ಸಂಘರ್ಷದ ಸನ್ನಿವೇಶಗಳ ಮನೋಜ್ಞವಾದ ನಟನೆ ನಿಜಕ್ಕೂ ಪ್ರಶಂಸನೀಯ ಎಂದರು.
ಕಷ್ಟದ ದಿನಗಳಿಂದ ಬೆಳೆದು ಬಂದಿರುವ ಉಮಾಶ್ರೀ ಅವರು ಜೀವನದ ಅನೇಕ ಮಜಲುಗಳನ್ನು ಹತ್ತಿರದಿಂದ ಕಂಡಿದ್ದಾರೆ. ನಾಟಕದಲ್ಲೂ ಕೂಡ ಎಲ್ಲಿಯೂ ಏರಿಳಿತಗಳಿಲ್ಲದೆ ಅತ್ಯುತ್ತಮವಾಗಿ ಏಕಪಾತ್ರದಲ್ಲಿ ಅಭಿನಯಿಸಿ ಪಾತ್ರಕ್ಕೆ ಜೀವತುಂಬಿದ್ದಾರೆ. ಅವರ ಅಪ್ರತಿಮಾ ಕಲಾಪ್ರತಿಭೆಯನ್ನು ಈ ನಾಟಕದ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕೀಯದಲ್ಲಿಯೂ ಕೂಡ ಮಹಿಳಾ ಮತ್ತು ಮಕ್ಕಳ ಸಚಿವೆಯಾಗಿ ಮಹಿಳಾ ಪರವಾಗಿ ಉತ್ತಮವಾದ ಕೆಲಸಗಳನ್ನು ಮಾಡಿದ್ದಾರೆ. ಮಕ್ಕಳು ಹಾಗೂ ಬಾಣಂತಿಯರ ಬಗ್ಗೆ ಆಸಕ್ತಿವಹಿಸಿ ಅನೇಕ ಕೊಡುಗೆ ನೀಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಕೂಡ ಚಳುವಳಿಯ ಮೂಲಕ ತಮ್ಮ ಜವಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ರಂಗಕ್ಷೇತ್ರಗಳು ಸಾಮಾಜಿಕ ಜವಾಬ್ದಾರಿ ಮತ್ತು ಸಂದೇಶಗಳನ್ನು ಸಾರುವ ಮೂಲಕ ಮಹತ್ತರವಾದ ಬದಲಾವಣೆಯನ್ನು ಜಾರಿಮಾಡುವಂತಹ ವೇದಿಕೆಗಳಾಗಿವೆ. ಇಂತಹ ಕೆಲಸಗಳಿಗೆ ಪ್ರೇರಕ ಶಕ್ತಿಯಾಗಿ ಉಮಾಶ್ರೀ ಹಾಗೂ ಮಂಡ್ಯ ರಮೇಶ್ ಅವರಂತಹ ಕಲಾವಿದರ ಕೊಡುಗೆ ಶ್ಲಾಘನೀಯ ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು