11:08 PM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಮೇ 19: ಬೋಂದೆಲ್ ಚರ್ಚ್ ಕಟ್ಟಡ ನವೀಕರಣ ಯೋಜನೆಯ ಸಹಾಯಾರ್ಥ ವೊಜೆಂ ಉತ್ಸವ್ – 2024

10/04/2024, 11:55

ಮೇ 19: ಬೋಂದೆಲ್ ಚರ್ಚ್ ಕಟ್ಟಡ ನವೀಕರಣ ಯೋಜನೆಯ ಸಹಾಯಾರ್ಥ
ವೊಜೆಂ ಉತ್ಸವ್ – 2024

ಮಂಗಳೂರು(reporterkarnataka.com): ಕೊಂಕಣಿ ಕ್ಯಾಥೊಲಿಕ್ ಕ್ರೈಸ್ತರ ಸಂಸ್ಕೃತಿಯಲ್ಲಿ ಹೊರೆ ಕಾಣಿಕೆಗೆ ವಿಶಿಷ್ಟವಾದ ಸ್ಥಾನವಿದೆ. ಅದು ಕೊಂಕಣಿ ಕ್ಯಾಥೊಲಿಕ್ ಕ್ರೈಸ್ತರ ವಿವಾಹ ಸಂಸ್ಕೃತಿಯ ಒಂದು ಭಾಗವಾಗಿದೆ. ಮದುವೆಯ ಮುಂಚಿತವಾಗಿ ನಡೆಯುವ ರೋಸ್ ಸಂಭ್ರಮದ ವೇಳೆ ನಡೆಯುವ ವಿವಿಧ ಕಾರ್ಯಕ್ರಮಗಳ ಪೈಕಿ ಹೊರೆ ಕಾಣಿಕೆಯೂ ಒಂದಾಗಿದೆ. ಇದನ್ನು ಕೊಂಕಣಿಯಲ್ಲಿ ವೊಜೆಂ ಎಂದು ಹೇಳುತ್ತಾರೆ. ರೋಸ್ ಸಮಾರಂಭದ ವೇಳೆ ವರ ಅಥವಾ ವಧುವಿನ ಮನೆಯಲ್ಲಿ ನಡೆಯುವ ಮೊದಲ ಕಾರ್ಯಕ್ರಮ ಇದಾಗಿದೆ. ಮದುವೆ ಸಮಾರಂಭಕ್ಕೆ ತಗಲುವ ಖರ್ಚು ವೆಚ್ಚದ ಹೊರೆಯನ್ನು ಸ್ವಲ್ಪ ಪ್ರಮಾಣದಲ್ಲಿ ತಗ್ಗಿಸುವ ನಿಟ್ಟಿನಲ್ಲಿ ತರಕಾರಿ, ದವಸ ಧಾನ್ಯ ಇತ್ಯಾದಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ತಲುಪಿಸುವ ಉದ್ದೇಶದಿಂದ ಪೂರ್ವಜರು ಈ ವೊಜೆಂ ಅಥವಾ ಹೊರೆ ಕಾಣಿಕೆ ಸಂಪ್ರದಾಯವನ್ನು ಜಾರಿಗೆ ತಂದಿದ್ದರು ಎಂದು ತಿಳಿದು ಬರುತ್ತದೆ. ಈ ಸಂಪ್ರದಾಯವು ಅನಾಚೂನವಾಗಿ ಬೆಳೆದು ಬಂದಿದೆ.
ಇದೀಗ ಸಾಂಗಾತಿ ಮಂಗ್ಲುರ್ ಸಂಸ್ಥೆಯು ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದ ಸಹಯೋಗದಲ್ಲಿ ಬೋಂದೆಲ್ ಚರ್ಚಿನ ನವೀಕರಣ ಯೋಜನೆಯ ಸಹಾಯಾರ್ಥ ಹೊರೆ ಕಾಣಿಕೆ ಉತ್ಸವ ಅಥವಾ ವೊಜೆಂ ಉತ್ಸವ್ ಸ್ಪರ್ಧೆಯನ್ನು ಆಯೋಜಿಸಿದೆ. ಮೇ 19ರಂದು ವಾಮಂಜೂರು ಚರ್ಚ್ ಸಭಾಂಗಣದಲ್ಲಿ ಈ ವೊಜೆಂ ಉತ್ಸವ್ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಈ ಸ್ಪರ್ಧೆ ಆರಂಭವಾಗಲಿದೆ.
ಸ್ಪರ್ಧೆಯ ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 50,000 ರೂ., ದ್ವಿತೀಯ ಬಹುಮಾನ 25,000 ರೂಪಾಯಿ ಹಾಗೂ ತೃತೀಯ ಬಹುಮಾನ 15,000 ನಗದು ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ವಿಶಾಲಿನ್ ಸಲ್ದಾನ್ಹಾ ಅಧ್ಯಕ್ಷರಾಗಿರುವ, ವಿಕ್ರಮ್ ಪೆರ್ಮನ್ನೂರು ಉಪಾಧ್ಯಕ್ಷರಾಗಿರುವ ಮತ್ತು ಸ್ಟೀಫಾ ಡಿಸೋಜ ಕಾರ್ಯದರ್ಶಿ ಆಗಿರುವ ಉತ್ಸವ ಸಮಿತಿಯು ಇದನ್ನು ಹಮ್ಮಿಕೊಂಡಿದೆ.
ಹೆಚ್ಚಿನ ವಿವರಗಳಿಗೆ 8660015203 ಅಥವಾ 8904373405 ಸಂಖ್ಯೆಗೆ ಸಂಪರ್ಕಿಸ ಬಹುದು.
ವೊಜೆಂ ಉತ್ಸವ್ – 2024
ಸ್ಪರ್ಧೆಯ ನಿಯಮಗಳು:
ಕ್ಯಾಥೋಲಿಕ್ ಕ್ರೈಸ್ತರಿಗೆ ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶ. ಒಬ್ಬರು ಒಂದು ತಂಡದಲ್ಲಿ ಮಾತ್ರ ಪಾಲ್ಗೊಳ್ಳ ಬಹುದು. ಒಂದು ತಂಡಕ್ಕೆ ಪ್ರದರ್ಶನ ನೀಡಲು 15 ನಿಮಿಷಗಳ ಕಾಲಾವಕಾಶ ಇರುತ್ತದೆ. ಒಂದು ತಂಡದಲ್ಲಿ ಗರಿಷ್ಠ 25 ಮಂದಿಗೆ ಪಾಲ್ಗೊಳ್ಳಲು ಅವಕಾಶವಿದೆ. ಒಂದು ತಂಡದಲ್ಲಿ ಗುರ್ಕಾರ್ ಮತ್ತು ಗುರ್ಕಾರ್ನ್ (ಮಹಿಳೆ), ವಧು ಅಥವಾ ವರ ಮತ್ತು ತಾಯಿ ತಂದೆಯರ ಪಾತ್ರ ಕಡ್ಡಾಯ. ಹೊರೆ ಕಾಣಿಕೆಗೆ ಬ್ಯಾಂಡ್ ಮತ್ತು ಬೇಕಾಗಿರುವ ಕೆಲವು ಸಾಮಗ್ರಿಗಳನ್ನು ಸಂಘಟಕರು ಒದಗಿಸುತ್ತಾರೆ. (ಹೆಚ್ಚುವರಿ ವಸ್ತುಗಳು ಬೇಕಿದ್ದರೆ ಸ್ಪರ್ಧಿಗಳು ತರ ಬಹುದು). ಬೆಂಕಿ, ನೀರು, ಪಟಾಕಿ ಮತ್ತು ಪ್ರಾಣಿ/ ಜಾನುವಾರುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಕೃತಕ ಪ್ರಾಣಿ/ ಜಾನುವಾರುಗಳನ್ನು ಬಳಸ ಬಹುದು. ಸ್ಪರ್ಧಿಗಳು ಕಾರ್ಯಕ್ರಮ ಪ್ರಸ್ತುತ ಪಡಿಸುವಾಗ ಕೊಂಕಣಿಯ ಹೊರತಾಗಿ ಅವಶ್ಯಕತೆ ಇಲ್ಲದೆ ಬೇರೆ ಯಾವುದೇ ಭಾಷೆಯನ್ನು ಬಳಸುವಂತಿಲ್ಲ. ಮಾತಿನಲ್ಲಿ ಅಥವಾ ಕೃತ್ಯದಲ್ಲಿ ಯಾವುದೇ ವ್ಯಕ್ತಿಗೆ, ಸಂಸ್ಥೆಗೆ ಅಥವಾ ಒಂದು ಮತ ಧರ್ಮಕ್ಕೆ ಅವಮಾನ ಅಥವಾ ನಿಂದನೆ ಹಾಗೂ ಅಸಭ್ಯ, ಅಶ್ಲೀಲ ಅಥವಾ ಸ್ಪರ್ಧೆಗೆ ಕಳಂಕ ತರುವ ರೀತಿಯ ಪ್ರದರ್ಶನವನ್ನು ನಿಷೇಧಿಸಲಾಗಿದೆ. ರಾಜಕೀಯ ವಿಷಯ ಹಾಗೂ ದ್ವಂದ್ವಾರ್ಥದ ಶಬ್ದಗಳ ಬಳಕೆಯನ್ನು ಮಾಡುವಂತಿಲ್ಲ. ಸ್ಪರ್ಧೆಯ ಯಾವುದೇ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಪ್ರವೇಶಾವಕಾಶವನ್ನು ಅಮಾನತಿನಲ್ಲಿಡುವ ಅಧಿಕಾರ ಸ್ಪರ್ಧೆಯ ಸಂಚಾಲಕರಿಗೆ ಇರುತ್ತದೆ. ಸ್ಪರ್ಧೆಯ ಸಂದರ್ಭದಲ್ಲಿ ವ್ಯವಸ್ಥಾಪಕರು ನೇಮಿಸುವ ವ್ಯಕ್ತಿಗಳ ಹೊರತಾಗಿ ಬೇರೆ ಯಾರೂ ಫೋಟೋ ಅಥವಾ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ವೀಕ್ಷಕರಿಗೆ ಮತ್ತು ತೀರ್ಪುಗಾರರಿಗೆ ಅಡ್ಡಿಯಾಗುವ ರೀತಿಯಲ್ಲಿ ಫೋಟೋ ತೆಗೆಯುವುದನ್ನು ಕೂಡಾ ನಿಷೇಧಿಸಲಾಗಿದೆ. ತೀರ್ಪುಗಾರರ ಮತ್ತು ಸಂಘಟಕರ ತೀರ್ಮಾನವೇ ಅಂತಿಮ. ಸ್ಪರ್ಧೆಯ ಫಲಿತಾಂಶವನ್ನು ಸಂಪೂರ್ಣ ಪ್ರದರ್ಶನದ ಕೊನೆಯಲ್ಲಿ ಘೋಷಿಸಿ ಬಹುಮಾನ ವಿತರಣೆ ಮಾಡಲಾಗುವುದು.
ತಂಡದ ಪ್ರವೇಶ ಶುಲ್ಕ 10,000 ರೂಪಾಯಿ ಆಗಿರುತ್ತದೆ. ನೋಂದಣಿಯು ಮೇ 19 ಭಾನುವಾರ ಬೆಳಗ್ಗೆ 8.30 ಕ್ಕೆ ಆರಂಭವಾಗುತ್ತದೆ. ನೋಂದಣಿ ಬಗ್ಗೆ ಹೆಚ್ಚಿನ ಮಾಹಿತಿಗೆ 8904373405, 8660015203 ನಂಬರಿಗೆ ಸಂಪರ್ಕಿಸ ಬಹುದು. ಹೊರೆ ಕಾಣಿಕೆ ಮೆರವಣಿಗೆಯ ರೀತಿ ಮತ್ತು ಡ್ರೆಸ್, ಹಾಡು, ಗುರ್ಕಾರ್ ಮತ್ತು ಗುರ್ಕಾರ್ನ್ ಅವರ ಸಂಭಾಷಣೆ, ಭಾಗವಹಿಸಿದ ಎಲ್ಲರ ನೃತ್ಯ, ಹಾಸ್ಯ ಪಾತ್ರದ ಮಾನ ದಂಡಗಳ ಆಧಾರದಲ್ಲಿ ಅಂಕಗಳನ್ನು ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು