8:50 AM Sunday18 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಮಾತೃ ಶಕ್ತಿಯಿಂದ ಸ್ವಾಸ್ಥ್ಯ ಸಮೃದ್ಧಿ: ಅಮೃತ ಆರೋಗ್ಯ ಮೇಳದಲ್ಲಿ ಚಿತ್ತರಂಜನ್ ಬೋಳಾರ್

23/01/2024, 18:48

ಮಂಗಳೂರು(reporterkarnataka.com): ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಆಯೋಜಿಸಿದ “ಅಮೃತ ಆರೋಗ್ಯ ಮೇಳ” ವು ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ಉಪಸ್ಥಿತಿಯಲ್ಲಿ ಜರುಗಿತು.
ಯೇನಪೋಯ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು ಆಸ್ಪತ್ರೆಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಈ ಶಿಬಿರವನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಗಳ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಉದ್ಘಾಟಿಸಿದರು. ಅವರು ಮಾತನಾಡಿ
ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಆಶ್ರಮದ ಮಾನವೀಯ ಸೇವಾ ಉಪಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು ಕಳೆದ 25 ವರ್ಷಗಳಿಂದ ಹೆಚ್ಚಿನ ಪ್ರಚಾರ ಪಡೆಯದೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆತ್ಮಶಕ್ತಿ ಹಾಗೂ ಬಿಲ್ಲವ ಸಂಘಗಳ ಹೆಚ್ಚಿನ ಶಿಬಿರಗಳಲ್ಲಿ ಮಠದ ವೈದ್ಯಕೀಯ ತಂಡ ಉಚಿತವಾಗಿ ತಪಾಸಣೆ ನಡೆಸಿ ಔಷಧಗಳನ್ನು ಕೂಡ ಉಚಿತವಾಗಿ ವಿತರಣೆ ಮಾಡಿಕೊಂಡು ಬಂದಿದ್ದಾರೆ. ಇಂತಹ ಉಚಿತ ಶಿಬಿರಗಳು ಜನರು ರೋಗ ಬರುವ ಸಾಕಷ್ಟು ಮುಂಚಿತವಾಗಿ ಕಂಡುಬರುವ ಪೂರ್ವ ಲಕ್ಷಣಗಳನ್ನು ಗುರುತಿಸಿ ರೋಗಬರದಂತೆ ತಡೆಯಲು ಅತ್ಯಂತ ಉಪಯುಕ್ತ ವಿಧಾನವಾಗಿದೆ. ಅಮ್ಮನವರ ಆಶೀರ್ವಾದವನ್ನು ನಡೆಯುವ ಈ ಶಿಬಿರದಲ್ಲಿ ಬಂದಂತ ಎಲ್ಲರಿಗೂ ಆರೋಗ್ಯ ಪೂರ್ಣ ಜೀವನವನ್ನು ನೀಡಿ ಹರಸಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.


ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ.ಸುಚಿತ್ರಾ ರಾವ್ ಸ್ವಾಗತಿಸಿದರು. ಡಾ‌ ದೇವದಾಸ್ ಪುತ್ರನ್ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಯೇನಪೋಯ ದಂತ ವೈದ್ಯಕೀಯ ಆಸ್ಪತ್ರೆಯ ಡಾ.ಸುಪ್ರಿಯಾ ಎ., ಸೇವಾ ಸಮಿತಿಯ ಉಪಾದ್ಯಕ್ಷ ಸುರೇಶ್ ಅಮೀನ್, ದಿಲೀಪ್ ಕುಮಾರ್, ರಾಜನ್, ಆಯುಧ್ ನ ಡಾ.ತನುಷಾ ಶೆಟ್ಟಿ, ಪೂರ್ಣಿಮಾ, ರೂಪಾ, ಆತ್ಮಶಕ್ತಿ ಯ ಗೋಪಾಲ್, ಏನಪೋಯ ಆಸ್ಪತ್ರೆಯ ಭರತ್, ಸಮೀರ್ ನಮಿತ ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕರು ವಿವಿಧ ತಜ್ಞ ವೈದರಿಂದ ಉನ್ನತ ತಪಾಸಣೆ, ದಂತ ಚಿಕಿತ್ಸೆ ಮೊದಲಾದ ಸೌಲಭ್ಯಗಳ ಪ್ರಯೋಜನ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು