2:25 AM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಮಸ್ಕಿ: ಅಭಿನಂದನ್ ಸಂಸ್ಥೆಯಿಂದ ಕಾರ್ಗಿಲ್ ವಿಜಯ್ ಯಾತ್ರೆ; ಮೌನ ಪ್ರಾರ್ಥನೆ 

26/07/2021, 20:14

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿಯ ಅಭಿನಂದನ್ ಸಂಸ್ಥೆಯ ವತಿಯಿಂದ ನೂರಾರು ಸೈನಿಕರ ಬಲಿದಾನದಿಂದಾಗಿ ದೊರೆತಂತಹ ಕಾರ್ಗಿಲ್ ಯುದ್ಧದಲ್ಲಿನ ವಿಜಯದ ನೆನಪಿಗಾಗಿ ಮಸ್ಕಿಯ ದೈವದ ಕಟ್ಟೆಯಿಂದ ವಿಜಯ್ ಯಾತ್ರೆಯನ್ನು ಕೈಗೊಳ್ಳಲಾಯಿತು. ಯುದ್ಧದಲ್ಲಿ ಮರಣ ಹೊಂದಿದ  ಯೋಧರಿಗೆ ಮೌನಾಚರಣೆಯ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು. ಈ ಸಮಯದಲ್ಲಿ ಮಾತನಾಡಿದ ಯುವ ನಾಯಕರಾದ ಮೌನೇಶ ನಾಯಕ, 1999 ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲಿ ಭಾರತವು ಗಳಿಸಿದ ಯಶಸ್ಸನ್ನು ಆಚರಿಸುತ್ತಾ ಹಾಗೂ ಆ ಗೆಲುವಿಗಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಬಲಿದಾನವನ್ನು ಸ್ಮರಿಸುತ್ತಾ ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸುವ ಕಾರ್ಯಗಳನ್ನು ಮಾಡಬೇಕು. ಈ ನಿಟ್ಟಿನಲ್ಲಿ ಇಂತಹ ಕೀರ್ತಿದಾಯಕ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಅಭಿನಂದನ್ ಸಂಸ್ಥೆಯು ಸತತವಾಗಿ ಸಾಮಾಜಿಕ ಸೇವೆಯ ಜೊತೆಗೆ ಪರಿಸರ ಸಂರಕ್ಷಣಾ ಕಾರ್ಯಗಳ ಮೂಲಕ ದೇಶ ಸೇವೆಯನ್ನು ಮಾಡುತ್ತಿರುವುದು ನಮ್ಮ ಮಸ್ಕಿಗೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಹೇಳಿದರು. 

ಭಾರತ ಮಾತೆಗೆ ಪುಷ್ಪಾರ್ಪಣೆ ಮಾಡಿ ವಿಜಯೋತ್ಸವ ಆಚರಿಸಿ ನಂತರ ವೀರ ಯೋಧರಿಗೆ ಮೌನಾಚರಣೆಯ ಮೂಲಕ ಆತ್ಮಕ್ಕೆ ಶಾತಿಯನ್ನು ಕೋರಿ ಅಭಿನಂದನ್ ಗುರುಕುಲದ ಮಕ್ಕಳ ಜೊತೆಗೆ ಮಸ್ಕಿಯ ದೈವದ ಕಟ್ಟೆಯಿಂದ ಮಸ್ಕಿಯ ಪ್ರಮುಖ ರಸ್ತೆಯ ಮೂಲಕ ವಿಜಯ ಯಾತ್ರೆಯನ್ನು ಕೈಗೊಳ್ಳಲಾಯಿತು. ಈ ವಿಜಯ ಯಾತ್ರೆಯಲ್ಲಿ ಮಸ್ಕಿಯ ಗಣ್ಯರಾದ ಸೂಗಣ್ಣ ಬಾಳೇಕಾಯಿ, ವೆಂಕಟೇಶ ನಾಯಕ, ನಾಗರಾಜ ಯಂಬಲದ, ಮಹಾಂತೇಶ ಬ್ಯಾಳಿ, ಶಿವಪ್ರಸಾದ ಕ್ಯಾತನಟ್ಟಿ, ವಿನೋದ ಹಳ್ಳಿ, ರಾಕೇಶ ಪಾಟೀಲ್, ಅಮರೇಶ ಹರಸೂರು, ಶಿವಕುಮಾರ ಸ್ವಾಮಿ, ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಮಸ್ಕಿಯ ನಾಗರೀಕರು ಭಾಗವಹಿಸಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು