11:54 PM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

‘ಮಾರ್ಕೆಟಿಂಗ್ ಪ್ರಿನ್ಸಿಪಲ್ಸ್ ಅಂಡ್ ಅಪ್ಲಿಕೇಶನ್’ ವಿಷಯದ ಕುರಿತು ಒಂದು ದಿನದ ಅಧ್ಯಯನ ಪ್ರವಾಸ 

11/03/2022, 18:59

ಸುಬ್ರಹ್ಮಣ್ಯ(reporterkarnataka.com):ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗದಿಂದ “ಮಾರ್ಕೆಟಿಂಗ್ ಪ್ರಿನ್ಸಿಪಲ್ಸ್ ಅಂಡ್ ಅಪ್ಲಿಕೇಶನ್ ” ವಿಷಯದ ಕುರಿತಾದ ಒಂದು ದಿನದ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.

ಅಂತಾರಾಷ್ಟಿಯ ಹಾಳೆ ತಟ್ಟೆ ರಫ್ತ್ತು ಉದ್ಯಮ ವಿಟ್ಲ ಕೊಡಪದವು ಸಮೀಪದ ರಾಜರಾಮ್ ಒಡೆತನದ ಇಕೋ ಬ್ಳಿಸ್ ಉದ್ಯಮಕ್ಕೆ ಭೇಟಿ ನೀಡಿ ಹಾಳೆ  ತಟ್ಟೆ ಉದ್ಯಮ, ಮಾರುಕಟ್ಟೆ ಸಂವರ್ಧನೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳೆ  ತಟ್ಟೆ ಬೇಡಿಕೆ,ಪೂರೈಕೆ  ಮತ್ತು ಬೆಲೆಗಳ  ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಸ್ವದ್ಯೋಗಿಳಿಗೆ  ತಾವೇ ನಿರ್ಮಿಸಿ ವಿನ್ಯಾಸ ಗೊಳಿಸಿದ  ಯಂತ್ರೋಪಕರಣ ಮಾಹಿತಿ ಹಾಗೂ ಸಂಸ್ಥೆಯಲ್ಲಿನ  ಉದ್ಯೋಗಿಗಳಿಗೆ ಕೊಡಮಾಡುವ ಸೌಕರ್ಯ ಗಳ  ಬಗ್ಗೆ ಮಾಹಿತಿ ನೀಡಿದರು. ರಫ್ತ್ತುವಿನ ವಿವಿಧ ಹಂತಗಳ  ಬಗ್ಗೆ ವಿಸ್ತಾರವಾದ  ಮಾಹಿತಿಯನ್ನು ನೀಡಿದರು.ಕಲ್ಲಡ್ಕ ಸಮೀಪದ ಧೀರಜ್  ಹಾಗೂ ಅಜಿತ್ ಒಡೆತನದ ಫಾರ್ಚುನ್ ಪೆಟ್ ಜಾರ್ ಇಂಡಸ್ಟ್ರಿಗೆ ತೆರಳಿ  ವಿವಿಧ  ವಿನ್ಯಾಸದ ಶೀಷೆ ತಯಾರಿಕಾ ಮಾಹಿತಿಯನ್ನು  ಪಡೆಯಲಾಯಿತು. ನಾರಾಯಣ  ಸೋಮಯಾಜಿ ಎರಕಲ ಒಡೆತನದ ಐತಿಹಾಸಿಕ ಬ್ರಹತ್  ಹಂಚು, ಇಟ್ಟಿಗೆ ಮತ್ತು ಟೈಲ್ಸ್ ತಯಾರಿಕ ಘಟಕ ಶ್ರೀಕೃಷ್ಣ ಬ್ರಿಕ್ಸ್ ಅಂಡ್ ಟೈಲ್ಸ್ ಪ್ರೈವೆಟ್. ಲಿ. ಇಲ್ಲಿಗೆ ಭೇಟಿನೀಡಿ  ಸಂಸ್ಥೆಯ  ಇತಿಹಾಸ , ಪ್ರೋಸೆಸ್ಸಿಂಗ್, ಕಾರ್ಖಾನೆಯಲ್ಲಿ ತಯಾರಾಗುವ ವಸ್ತುಗಳು  ಅದರ ಮಾರುಕಟ್ಟೆ ವಿಚಾರದ  ಬಗ್ಗೆ ಮಾಹಿತಿಯನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದು  ಕೊಂಡರು

 ಪ್ರಥಮ  ಬಿ. ಕಾಮ್ ಹಾಗೂ ಬಿ. ಬಿ. ಎ ಯ  ಒಟ್ಟು 123 ವಿದ್ಯಾರ್ಥಿ ಅಧ್ಯಯನ ಪ್ರವಾಸದಲ್ಲಿ  ಪಾಲ್ಗೊಂಡಿದ್ದು, ಸಂಸ್ಥೆಯ  ವಾಣಿಜ್ಯ  ಹಾಗೂ ಉದ್ಯಮಾಡಳಿತ ವಿಭಾಗದ ಉಪನ್ಯಾಸಕರಾದ ಶ್ರೀ ರಮಾನಾಥ್. ಎ, ಶಿವಪ್ರಸಾದ್. ಎಸ್ ಮತ್ತು ಕೃತಿಕಾ ಪಿ.ಎಸ್ ಮಾರ್ಗದರ್ಶನ  ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು