1:33 PM Tuesday20 - October 2026
ಬ್ರೇಕಿಂಗ್ ನ್ಯೂಸ್
ಆಯುಧ ಪೂಜೆ–ವಿಜಯ ದಶಮಿ: ನಾಡಿನ ಒಳಿತಿಗಾಗಿ ರಾಜ್ಯಪಾಲ ಡಾ. ಸುಧಾ ಯಾದವ್ ಪ್ರಾರ್ಥನೆ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ | ವಿಜಯದಶಮಿಯೊಳಗೆ ಆರೋಪಿಗಳ ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ:… ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.…

ಇತ್ತೀಚಿನ ಸುದ್ದಿ

ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಮುದಾಯ ಭವನದ ಮಿನಿ ಸಭಾಂಗಣ ಉದ್ಘಾಟನೆ; ಉಚಿತ ಪುಸ್ತಕ, ಸಹಾಯ ಹಸ್ತ ವಿತರಣೆ

29/05/2025, 14:29

ಮಂಜೇಶ್ವರ(reporterkarnataka.com): ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.)ಮಂಜೇಶ್ವರ, ತೂಮಿನಾಡು ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸುಮುದಾಯ ಭವನದ ನೆಲ ಅಂತಸ್ತಿ ನಲ್ಲಿ ನಿರ್ಮಾಣಗೊಂಡಿರುವ ಮಿನಿ ಸಭಾಂಗಣದ ಉದ್ಘಾಟನೆ ಮೇ 25ರಂದು ಜರಗಿತು.


ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಪುಸ್ತಕ ವಿತರಣೆ, 2024-25 ರ ಸಾಲಿನ ಎಸ್. ಎಸ್. ಎಲ್. ಸಿ ಹಾಗೂ ಪ್ಲಸ್ ಟು /ಪಿ. ಯು. ಸಿ ಯ ಕರ್ನಾಟಕ ಕೇರಳ ಪರೀಕ್ಷೆ ಯಲ್ಲಿ ಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ, ಸಹಾಯಹಸ್ತ ವಿತರಣೆ ಕಾರ್ಯಕ್ರಮ ಮತ್ತು ಸಂಘದ ವಾರ್ಷಿಕ ಮಹಾಸಭೆಯು ಜರಗಿತು.
ಬೆಳಗ್ಗೆ ಗಂಟೆ 8ರಿಂದ ಗಣಹೋಮ, ಬೆಳಗ್ಗೆ ಗಂಟೆ 8.45ರಿಂದ ಶ್ರೀ ಬಾಲಾoಜನೇಯ ವ್ಯಾಯಾಮ ಶಾಲೆ ಭಜನಾ ತಂಡ ಮತ್ತು ಶ್ರೀ ಮಹಾಕಾಳಿ ಭಜನಾ ಮಂಡಳಿ ತೂಮಿನಾಡು ತಂಡಗಳಿಂದ ಭಜನೆ ಹಾಗೂ ನಂದಗೋಕುಲ ಭಜನಾ ತಂಡ ತೂಮಿನಾಡು ತಂಡದಿಂದ ಕುಣಿತ ಭಜನೆ ನಡೆಯಿತು.ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಆಶೀರ್ವಚನ ನೀಡಿದರು.
ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷರಾದ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆ ಯೊಂಗಿದೆ ಗಣ್ಯರನ್ನು ಸ್ವಾಗತಿಸಿದರು. ಪ್ರೇಮಾನಂದ ಕುಲಾಲ್ ಕೋಡಿಕಲ್ (ಅಧ್ಯಕ್ಷರು, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ (ರಿ.)ಕುಲಶೇಖರ, ಮಂಗಳೂರು) ಸಭಾಂಗಣವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದಿವಾಕರ ಮೂಲ್ಯ (ಮಾಲಕರು ಅಮೂಲ್ಯ ರಬ್ಬರ್ ಇಂಡಸ್ಟ್ರಿಸ್ ಮತ್ತು ಅಧ್ಯಕ್ಷರು ಕುಲಾಲ ಸಂಘ (ರಿ. )ಬೆಂಗಳೂರು), ಗಣೇಶ್ ಕುಲಾಲ್ (ಮಾಲಕರು ಶ್ರೀ ಲಕ್ಶ್ಮೀ ಫರ್ನಿಚರ್ಸ್ & ಇಂಟೀರಿಯರ್ಸ್ ಮಂಗಳೂರು), ಅನಿಲ್ ದಾಸ್ (ಆಡಳಿತ ನಿರ್ದೇಶಕರು ದಾಸ್ ಪ್ರಮೋಷನ್ಸ್ & ನರ್ಸಿಂಗ್ ಹೋಮ್ ಮಂಗಳೂರು), ಕಮಲಾಕ್ಷೀ ವಿ ಕುಲಾಲ್ (ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರು), ಜಯಂತಿ ಬದಿಯಡ್ಕ (ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯರು), ಮಾಲತಿ ಪಿ. (ಮುಖ್ಯೋಪಾಧ್ಯಾಯಿನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರು), ಜಯಪ್ರಕಾಶ್ ಕೈರಂಗಳ (ಮ್ಯಾನೇಜರ್ ಓಪರೇಷನ್ ವಿಭಾಗ ಎಂ. ಆರ್. ಪಿ. ಎಲ್), ಸುಂದರ ಕುಲಾಲ್ (ಶಕ್ತಿ ನಗರ ಆಡಳಿತ ಮೊಕ್ತೇಸರರು ಶ್ರೀ ವೀರ ನಾರಾಯಣ ದೇವಸ್ಥಾನ ಕುಲಶೇಖರ), ದಾಮೋದರ ಅಶೋಕನಗರ (ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು ಶ್ರೀ ವೀರ ನಾರಾಯಣ ದೇವಸ್ಥಾನ ಕುಲಶೇಖರ), ಸುರೇಶ್ ಕುಲಾಲ್ (ಸಂಚಾಲಕರು ಜೀರ್ಣೋದ್ದಾರ ಸಮಿತಿ ಶ್ರೀ ವೀರನಾರಾಯಣ ದೇವಸ್ಥಾನ) ಭಾಗವಹಿಸಿದರು. ಈ ಸಂದರ್ಭದಲ್ಲಿ
ಸಾಧಕರಿಗೆ ಗೌರವಾರ್ಪಣೆ ನಡೆಯಿತು. ಸಾಧಕರಾದ ಕರಾಟೆ ಪಟು ಸ್ವಾತಿ ಕೊಡಂಗೆ,ಯಕ್ಷಗಾನ ಕಲಾವಿದ ಜಯೇಂದ್ರ ಕುಲಾಲ್ ಕಿದೂರು, ಸಮಾಜ ಸೇವೆಗಾಗಿ ರಾಮ ಪ್ರಸಾದ್ ಎಸ್. ಮಂಗಳೂರು, ದೇಶ ಸೇವೆಗೆ ಪೂವಪ್ಪ ಕಡoಬಾರ್, ದೈವಾರಾದನೆ ಗೋಪಾಲಕೃಷ್ಣ ವಾಂತಿಚ್ಚಾಲ್, ಪ್ರಗತಿಪರ ಕೃಷಿಕ ಶೇಷ ಮೋಹನ್ ನೇರಪ್ಪಾಡಿ,SPC – ವಿದ್ಯಾರ್ಥಿ ಪೊಲೀಸ್ ಕೆಡೆಟ್ ನಲ್ಲಿ ಕೇರಳ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ರಶ್ಮಿತಾ ಕೆ. ತೂಮಿನಾಡು, ಕೇರಳ ರಾಜ್ಯ ಮಟ್ಟದ ಜೂನಿಯರ್ ಗರ್ಲ್ಸ್ ಕಬ್ಬಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಸೃಷ್ಟಿ ಕುಂಜತ್ತೂರು ಅವರನ್ನು ಗೌರವಿಸಲಾಯಿತು.
ಆಶಕ್ತ ಕುಟುಂಬಕ್ಕೆ ನೀಡುವ ಕುಲಾಲ ಆಸರೆಯ 7 ನೇ ಸಹಾಯ ಹಸ್ತ ಯೋಜನೆ ರೂಪಾಯಿ 15,000/- ಮೊತ್ತವನ್ನು ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಸುಂದರ ಮೂಲ್ಯ ಪೆರ್ಲ ರವರಿಗೆ ಮತ್ತು ಕುಲಾಲ ಆಸರೆಯ 8ನೇ ಸಹಾಯ ಹಸ್ತ ಯೋಜನೆ ರೂಪಾಯಿ 15,000/- ಮೊತ್ತ ವನ್ನು ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ದೇವದಾಸ್ ಮಂಜೇಶ್ವರ ಅಡ್ಕರವರಿಗೆ ಗಣ್ಯರ ಉಪಸ್ಥಿಯಲ್ಲಿ ಸ್ವಾಮೀಜಿರವರು ಹಸ್ತಾಂತರಿಸಿದರು. ಸುಮಾರು 375 ಮಂದಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. 2024-25 ನೇ ಸಾಲಿನ ಪರೀಕ್ಷೆ ಗಳಲ್ಲಿ ಅತ್ಯಧಿಕ ಅಂಕಗಳಿಸಿರುವ ಕೇರಳ/ಕರ್ನಾಟಕ ದ ಎಸ್. ಎಸ್. ಎಲ್. ಸಿ ಯ 16 ಮಂದಿ ವಿದ್ಯಾರ್ಥಿಗಳಿಗೆ ಹಾಗೂ ಪ್ಲಸ್ ಟು /ಪಿ. ಯು. ಸಿ ಯ 5 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ದಾಮೋದರ ಮಾಸ್ಟರ್ ಕಬ್ಬಿನಹಿತ್ಲು ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕುಲಾಲ ಸಂಘ ಧನ್ಯವಾದ ಸಮರ್ಪಿಸಿ, ಯನ್.ಕೆ. ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಮಹಾಸಭೆಯಲ್ಲಿ 2025-27 ನೇ ಸಾಲಿನ ನೂತನ ಕಾರ್ಯ ಕಾರಿ ಸಮಿತಿಯ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಉಪಾಧ್ಯಕ್ಷರಾಗಿ ರಾಮ ಉಜಿರೆ,ಪ್ರಧಾನ ಕಾರ್ಯದರ್ಶಿ ಯಾಗಿ ದಾಮೋದರ ಮಾಸ್ಟರ್ ಕಬ್ಬಿನಹಿತ್ಲು, ಜತೆ ಕಾರ್ಯದರ್ಶಿ ಯಾಗಿ ಭೋಜ ಮಸ್ಟರ್ ಪಾವೂರು, ಕೋಶಾಧಿಕಾರಿಯಾಗಿ ಈಶ್ವರ್ ಕುಲಾಲ್ ಕಣ್ವತೀರ್ಥ, ಕ್ರೀಡಾಕಾರ್ಯದರ್ಶಿಯಾಗಿ ತಾರನಾಥ ಕಣ್ವತೀರ್ಥ, ಸಂಘಟನಾ ಸಂಚಾಲಕರಾಗಿ ಸುಧೀರ್ ರಂಜನ್ ದೈಗೋಳಿಹಾಗೂ ಜಯಂತ ಚಿಪ್ಪಾರ್, ಸೇವಾದಳಪತಿಗಳಾಗಿ ಪ್ರಸಾದ್ ತುಮಿನಾಡು ಹಾಗೂ ಸುರೇಶ್ ಕಣ್ವತೀರ್ಥ, ನ್ಯಾಯ ಸಲಹಾ ಮಂಡಳಿ ಸದಸ್ಯರಾಗಿ ಸೋಮಪ್ಪ ಸಾಲ್ಯಾನ್ ಕುಂಜತ್ತೂರು, ಬಾಲಕೃಷ್ಣ ಮುನ್ನಿಪ್ಪಾಡಿ, ವಿಶ್ವನಾಥ ಮಾಣಿ ಪ್ಪಾಡಿ ಹಾಗೂ ಇತರ 21 ಮಂದಿ ಸದಸ್ಯರು ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು.

ಇತ್ತೀಚಿನ ಸುದ್ದಿ

ಜಾಹೀರಾತು