4:23 PM Wednesday22 - April 2026
ಬ್ರೇಕಿಂಗ್ ನ್ಯೂಸ್
ಅಮಾನತು ಅಂತ್ಯವಲ್ಲ, ಅಬ್ದುಲ್ ಜಬ್ಬಾರ್‌ಗೆ ಇನ್ನೂ ಅವಕಾಶ ಇದೆ: ಸಚಿವ ದಿನೇಶ್ ಗುಂಡೂರಾವ್ ವರ್ಗಾವಣೆ ಆದೇಶವಿದ್ದರೂ ಪೊಲೀಸ್ ಕಮಿಷನರ್ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ: ಮಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕ… ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮಾಲೀಕ ಸೇರಿ ಇಬ್ಬರ… ಇಡಿ ದಾಳಿಗೂ ತಂದೆ ಹ್ಯಾರಿಸ್ ಗೂ ಯಾವುದೇ ಸಂಬಂಧವಿಲ್ಲ; ನಾನೊಬ್ಬ ಒಳ್ಳೆಯ ಮಗನಾಗಲು… ಕಳಸ: ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ; ಓರ್ವ… ಪ್ರಧಾನಿ ಮೋದಿ ಜತೆ ಗುಟ್ಟಾಗಿ ಮಾತನಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಇಡಿ ಶಾಕ್: ಶಾಸಕ ಹ್ಯಾರಿಸ್, ನಲಪಾಡ್ ನಿವಾಸ ಸೇರಿ 17… ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ… ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ಜಲಸಮಾಧಿ: ದರ್ಗಾಕ್ಕೆ ಬಂದವರು… ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭಯದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿಲ್ಲ:…

ಇತ್ತೀಚಿನ ಸುದ್ದಿ

Mangaluru | ರಚನಾ ಪ್ರಶಸ್ತಿ ಪುರಸ್ಕೃತ ಶೋಭಾ ಮೆಂಡೋನ್ಸಾಗೆ ವಾಮಂಜೂರು ಚರ್ಚ್ ನಿಂದ ಅಭಿನಂದನೆ

08/10/2025, 14:14

ಮಂಗಳೂರು(reporterkarnataka.com): ರಚನಾ – ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಚನಾ ಅತ್ಯುತ್ತಮ ಮಹಿಳೆ 2025 ( Rachana Outstanding Woman Award 2025) ಪ್ರಶಸ್ತಿ ಪುರಸ್ಕೃತೆ ಶೋಭಾ ಮೆಂಡೋನ್ಸಾ ಅವರನ್ನು ವಾಮಂಜೂರು ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಜೇಮ್ಸ್ ಡಿ ಸೋಜಾ ಅವರು ಭಕ್ತಾದಿಗಳ ಸಮ್ಮುಖದಲ್ಲಿ ಹೂಗುಚ್ಛ ನೀಡಿ ಅಭಿನಂದಿಸಿದರು.

ಚರ್ಚ್ ಉಪಾಧ್ಯಕ್ಷ ಚಾರ್ಲ್ಸ್ ಪಾಯ್ಸ್ ಮಾತನಾಡಿ ಶೋಭಾ ಮೆಂಡೋನ್ಸಾ ಅವರು ವಾಮಂಜೂರು ಚರ್ಚ್ ಸಮುದಾಯಕ್ಕೆ ನೀಡಿರುವ ದೇಣಿಗೆಯನ್ನು ಹಾಗೂ ವಿದೇಶದಲ್ಲಿ ಅವರು ನಡೆಸುವ ಉದ್ಯಮದ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳನ್ನು ಸ್ಮರಿಸಿ ಅಭಿನಂದಿಸಿದರು. ವಿಶೇಷವಾಗಿ 2007ರಲ್ಲಿ ಕುಟುಂಬದ ಸದಸ್ಯರೊಂದಿಗೆ ಸೇರಿ ‘ಮೆಂಡೋನ್ಸಾ ಎಜ್ಯುಕೇಶನಲ್ ಫಂಡ್’ ಸ್ಥಾಪಿಸಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಸಹಾಯ ಧನ ನೀಡಿರುವುದಕ್ಕಾಗಿ ಹಾಗೂ ಇಲ್ಲಿ ಹಮ್ಮಿಕೊಂಡಿರುವ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಗೆ ಅವರು ಮತ್ತು ಮೆಂಡೋನ್ಸಾ ಕುಟುಂಬದ ಸದಸ್ಯರು ನೀಡಿರುವ ದೇಣಿಗೆಗಳಿಗಾಗಿ ಅವರ ಉಪಕಾರ ಸ್ಮರಿಸಿದರು.
ಕಾಕತಾಳೀಯ ಎಂಬಂತೆ 2009 ರಲ್ಲಿ ಅವರ ಪತಿ ಜೇಮ್ಸ್ ಮೆಂಡೋನ್ಸಾ ಅವರಿಗೆ ರಚನಾ- ಅತ್ಯುತ್ತಮ ಅನಿವಾಸಿ ಭಾರತೀಯ ಪ್ರಶಸ್ತಿ – 2009 ನೀಡಿ ಗೌರವಿಸಲಾಗಿದ್ದ ಸಂದರ್ಭವನ್ನು ನೆನಪಿಸಿ ಅವರಿಗೂ ಅಭಿನಂದನೆ ಸಲ್ಲಿಸಿ ಚರ್ಚ್ ಪ್ರಧಾನ ಧರ್ಮಗುರುಗಳು ಹೂ ಗುಚ್ಛ ನೀಡಿ ಗೌರವಿಸಿದರು. ಚರ್ಚ್ ನ ಸಹಾಯಕ ಧರ್ಮ ಗುರು ವಂದನೀಯ ಫಾ. ಜೀವನ್ ಶೈಲೇಶ್ ಲೋಬೊ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಸಿ. ಎ. ಲೋವೆಲ್ ಮೊಂತೇರೊ, 21 ಆಯೋಗಗಳ ಸಂಯೋಜಕ ಅನಿಲ್ ಪಿಂಟೊ, ಧರ್ಮ ಭಗಿನಿಯರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು