ಇತ್ತೀಚಿನ ಸುದ್ದಿ
Mangaluru | ನಿಷೇಧಿತ ಎಂಡಿಎಂಎ ಸಾಗಾಟ: ಇಬ್ಬರ ಬಂಧನ; ಕಾರು ಸಹಿತ ಡ್ರಗ್ಸ್ ವಶ
29/05/2026, 21:27
ಮಂಗಳೂರು (reporterkarnataka.com): ನಿಷೇಧಿತ ಎಂಡಿಎಂಎ ಸಾಗಾಟ ಪ್ರಕರಣ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಮಾದಕವಸ್ತು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಮಿಜಾರು ನಿವಾಸಿ ಮಹಮ್ಮದ್ ತನ್ವಿರ್ (27) ಹಾಗೂ ಮೂಡಬಿದ್ರೆ ನಿವಾಸಿ ಮಹಮ್ಮದ್ ಸಲ್ವಾನ್ (22) ಎಂದು ಗುರುತಿಸಲಾಗಿದೆ.
ವೇಣೂರು ಪೊಲೀಸ್ ಠಾಣಾ ಉಪನಿರೀಕ್ಷಕರಾದ ಅಕ್ಷಯ್ ಡವಗಿ ಅವರಿಗೆ ಮೇ 27ರಂದು ಮಧ್ಯಾಹ್ನ ಸಮಯ, ನಿಷೇಧಿತ MDMA ಮಾದಕವಸ್ತು ಸಾಗಾಟದ ಬಗ್ಗೆ ಮಾಹಿತಿ ಬಂದ ಮೇರೆಗೆ, ಠಾಣಾ ಸಿಬ್ಬಂದಿಗಳೊಂದಿಗೆ ತೆರಳಿ ಗುರುವಾಯನಕೆರೆ- ಮೂಡಬಿದ್ರೆ ರಸ್ತೆಯ, ಕಂಬಳದಡ್ಡ ಎಂಬಲ್ಲಿ KA 13 P 2905 ನೇ ನೋಂದಣಿಯ ಕಾರಿನಲ್ಲಿ ಆರೋಪಿಗಳಾದ ಮಹಮ್ಮದ್ ತಹ್ನವೀರ್ ಹಾಗೂ ಮಹಮ್ಮದ್ ಸಲ್ವಾನ್ ಎಂಬವರಿಂದ ಅಂದಾಜು ರೂ 39,200/- ಮೌಲ್ಯದ ಸುಮಾರು 3.92ಗ್ರಾಂ ತೂಕದ MDMA ಎಂಬ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.














