9:34 AM Saturday4 - July 2026
ಬ್ರೇಕಿಂಗ್ ನ್ಯೂಸ್
Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ

ಇತ್ತೀಚಿನ ಸುದ್ದಿ

ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ

15/03/2025, 18:06

ಮಂಗಳೂರು(reporterkarnataka.com): ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ
ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಸ್ತ್ರೀ ಸೌಂದರ್ಯ ತಜ್ಞೆ ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್, ಮೀನುಗಾರಿಕೆ ತಂತ್ರಜ್ಞಾನ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಬೆಂಗ್ರೆಯ ಪ್ರಾಪ್ತಿ ಮೆಂಡನ್‌, ಸಮಾಜ ಸೇವಕಿ ಪ್ರತಿಭಾ ಸಾಲ್ಯಾನ್, ಮಂಗಳೂರು ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷೆ ವೆಲ್ವಿನ್ ಜೇಸನ್, ಉಪಾಧ್ಯಕ್ಷರಾದ ಪೃಥ್ವಿ ಸಾಲ್ಯಾನ್, ಕ್ಲೈಡ್ ಡಿಸೋಜಾ, ಶಾನ್ ಡಿ ಸೋಜಾ , ಕಾರ್ಯದರ್ಶಿ ಅಭಿಷೇಕ್ ಹಾಗೂ ಎನ್.ಎಸ್.ಯು.ಐ ಉಪಾಧ್ಯಕ್ಷೆ ಅಯೋರಾ ಟೆಲ್ಲಿಸ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮ‌ಮತಾ ಗಟ್ಟಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ .ಆರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಂಗಳೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಸದಸ್ಯರಾದ ಆಲಿಸ್ಟನ್ ಡಿಕುನ್ಹಾ, ಸ್ಟ್ಯಾನ್ಲಿ ಪಿಂಟೋ, ಕೆಪಿಎಂಸಿ ಪ್ರಧಾನ ಕಾರ್ಯದರ್ಶಿಗಳಾದ ಸ್ವರೂಪ.ಎನ್ ಶೆಟ್ಟಿ, ಚಂದ್ರಕಲಾ ಡಿ.ರಾವ್, ಗೀತಾ ಅತ್ತಾವರ್, ನಮಿತಾ ಡಿ. ರಾವ್, ಶಕುಂತಲಾ ಕಾಮತ್, ವಸಂತಿ ಅಂಚನ್, ಕಿರಣ ಜೇಮ್ಸ್, ವೀಣಾ ಬೆನೆಡಿಕ್ಟ್, ಮೇರಿ ಪಿಂಟೋ, ವಿಲ್ಮಾ ಡಿ ಕೋಸ್ಟಾ, ಮೀನಾ ಟೆಲ್ಲಿಸ್, ಮೇರಿ ಸಾಂತೀಸ್, ಕುಸುಮ ಬಂಗೇರಾ, ವಸಂತಿ, ರಮಣಿ ಉಮೇಶ್, ಮಲ್ಲಿಕಾ, ಅವಿಟಾ, ವಿಕ್ಟೋರಿಯಾ, ಬೆನೆಡಿಕ್ಟಾ, ಪ್ರೀತಿ ಕರ್ಕೇರಾ, ಚಂದ್ರಾವತಿ, ಪದ್ಮಾವತಿ, ವಿಶಾಲ, ಸುಮತಿ, ವಿನಯಾ, ಬಬಿತಾ, ಉಷಾ ಕಿರಣ್ ಶೆಟ್ಟಿ, ಸಬೀತಾ, ಪ್ರೆಸಿಲ್ಲಾ, ಮರಿಯಾ, ಲತಾ, ಸುಜಾತಾ, ಡೋರಾ, ಸಿಂಥಿಯಾ, ಮಮತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೂಪಾ ಚೇತನ್ ಸ್ವಾಗತಿಸಿದರು. ಶಾಂತಲಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾ ಅಂದ್ರಾದೆ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು