8:04 PM Saturday27 - June 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್…

ಇತ್ತೀಚಿನ ಸುದ್ದಿ

ಮಹರ್ಷಿ ವಾಲ್ಮೀಕಿಯವರು ದೇಶ ಕಂಡ ಅಪರೂಪದ ಸಾಹಿತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

07/10/2025, 16:39

ಬೆಂಗಳೂರು(reporterkarnataka.com): ರಾಮಾಯಣ ದಂತಹ ಮಹಾನ್ ಗ್ರಂಥವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರು ದೇಶ ಕಂಡ ಅಪರೂಪದ ಸಾಹಿತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಶ್ರೀ ಮಹರ್ಷಿ ವಾಲ್ಮೀಕಿ ತಪೋವನ ದಲ್ಲಿರುವ ಶ್ರೀ ವಾಲ್ಮೀಕಿ ಜಯಂತಿಯ ಅಂಗವಾಗಿ ಅವರ ಪ್ರತಿಮೆ ಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.

ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ವಾಲ್ಮೀಕಿ ಜಯಂತೋತ್ಸವದ ಮೂಲಕ ಅವರನ್ನುಸ್ಮರಿಸಲಾಗಿದೆ. ದೇಶ ಕಂಡ ಅಪರೂಪದ ಸಾಹಿತಿ. ರಾಮಾಯಣ ದಂತಹ ಮಹಾನ್ ಗ್ರಂಥದ ಕತೃ. ವಾಲ್ಮೀಕಿಯವರು ಶೂದ್ರ ಜನಾಂಗದಲ್ಲಿ ಜನಿಸಿದ್ದರೂ, ರಾಮಾಯಣದಂತಹ ಶ್ರೇಷ್ಠ ಗ್ರಂಥವನ್ನು ವಿಶ್ವಕ್ಕೆ ಪರಿಚಯಿಸಿದರು. ವಾಲ್ಮೀಕಿಯವರ ಪ್ರತಿಮೆಯನ್ನು 2017 ರಲ್ಲಿ ಸ್ಥಾಪಿಸಲಾಯಿತು. ವಾಲ್ಮೀಕಿ ಹಾಗೂ ಕನಕದಾಸರಂತಹ ಮಹಾನ್ ಸಂತರು ಸಮಾಜಮುಖಿಯಾಗಿ ಬದುಕಿದವರು. ಅವರು ಬೋಧಿಸಿದಂತೆ ಮಾನವೀಯ ಮೌಲ್ಯಗಳನ್ನು ಅನುಸರಿದವರು ಎಂದರು.

*ಸಚಿವ ಸಂಪುಟ ಪುನರ್ ರಚನೆ:* ನಾಯಕ ಸಮುದಾಯದ ಶಾಸಕರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮುಂದಿನ ದಿನಗಳಲ್ಲಿ ಸಚಿವವಸಂಪುಟ ಪುನರ್ ರಚನೆ ನಡೆಯುವ ಸಂದರ್ಭದಲ್ಲಿ ಪರಿಗಣಿಸಲಾಗುವುದು ಎಂದರು.

*ಮನುವಾದಿಗಳ ಕೈವಾಡ:*
ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುತ್ತಾ, ಮುಖ್ಯ ನ್ಯಾಯಮೂರ್ತಿಯವರೇ ಈ ಘಟನೆಯನ್ನು ಕ್ಷಮಿಸಿದ್ದು, ಅವರ ದೊಡ್ಡಗುಣವನ್ನು ಬಿಂಬಿಸುತ್ತದೆ. ಆದರೆ ಇಂತಹ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ಮನುವಾದಿಗಳ ಕೈವಾಡವಾಗಿದೆ ಎಂದರು.

*ಸಮೀಕ್ಷೆ ಅವಧಿ ವಿಸ್ತರಣೆ- ಪರಿಶೀಲಿಸಿ ತೀರ್ಮಾನ:*
ಸಮೀಕ್ಷೆಗೆ ಕಾಲಾವಕಾಶ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿ, ಇಂದು ಸಮೀಕ್ಷೆಯ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಂತರ ಸಮೀಕ್ಷೆ ಅವಧಿ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು