1:39 PM Sunday19 - April 2026
ಬ್ರೇಕಿಂಗ್ ನ್ಯೂಸ್
ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ… ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಸನದಲ್ಲಿ ಮೂರು ದಿನಗಳ ಆಪರೇಷನ್‌ ಯಶಸ್ವಿ: ನರಹಂತಕ ಕಾಡಾನೆ ಸೆರೆ ಬಳ್ಳಾರಿ | ಪ್ಯಾರಚೂಟ್ ತರಬೇತಿ ವೇಳೆ ತಾಂತ್ರಿಕ ದೋಷ: 50 ಅಡಿ ಎತ್ತರದಿಂದ… ತೀರ್ಥಹಳ್ಳಿಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ: ಪ್ರಕರಣ ದಾಖಲು Udupi | ಕಾಪು ಬಳಿ ಭೀಕರ ಲಾರಿ-ಕಾರು ಅಪಘಾತ: ಓರ್ವ ಸಾವು; ಇಬ್ಬರು… ಮಂತ್ರಾಲಯದ ಬಳಿ ಭೀಕರ ಅಪಘಾತ: 8 ಮಂದಿ ಸಾವು, ತರೀಕೆರೆ ತಾಲೂಕಿನ ಇಬ್ಬರು… ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ, ಸಂಪುಟ ಪುನರ್ ರಚನೆ ಆಗಲಿ: ಆರೋಗ್ಯ… ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ 17 ಮಂದಿಗೆ ಜೀವಾವಧಿ…

ಇತ್ತೀಚಿನ ಸುದ್ದಿ

ಲೇಡಿಗೋಶನ್ ಆಸ್ಪತ್ರೆಯಲ್ಲಿ ಗುಟುಕು ನೀರಿಲ್ಲ!: ಬಾಣಂತಿ-ಮಕ್ಕಳ ಪರದಾಟ; ಅಚಾನಕ್ ಸಮಸ್ಯೆ ಎನ್ನುತ್ತಾರೆ ಶಾಸಕರು

08/08/2021, 20:14

ಮಂಗಳೂರು(reporterkarnataka.com): ಶತಮಾನದ ಇತಿಹಾಸವಿರುವ ಜೆಲ್ಲೆಯ ಹೆರಿಗೆ ಆಸ್ಪತ್ರೆಯಾದ ಮಂಗಳೂರು ಲೇಡಿಗೋಶನ್ ಆಸ್ಪತ್ರೆ ನೀರಿನ ಸಮಸ್ಯೆಯಿಂದ ತತ್ತರಿಸಿ ಹೋಗಿದೆ. ನೀರಿಲ್ಲದೆ 100ಕ್ಕೂ ಹೆಚ್ಚು ಬಾಣಂತಿಯರು ಹಾಗೂ ನವಜಾತ ಶಿಶುಗಳು ತೊಂದರೆಗೀಡಾಗಿದ್ದಾರೆ.

ಲೇಡಿಗೋಶನ್ ಆಸ್ಪತ್ರೆಗೆ ಜಿಲ್ಲೆಯ ವಿವಿಧ ಕಡೆಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಹೆರಿಗೆಗಾಗಿ ಆಗಮಿಸುತ್ತಾರೆ. ಇತರ ಕಾಯಿಲೆಗಳ ಚಿಕಿತ್ಸೆಗೂ ಮಹಿಳೆಯರು ಇಲ್ಲಿ ದಾಖಲಾಗುತ್ತಾರೆ. ಪ್ರಸ್ತುತ 100ಕ್ಕೂ ಅಧಿಕ ಬಾಣಂತಿಯರು ಹಾಗೂ ಅವರ ನವಜಾತ ಶಿಶುಗಳು ಆರೈಕೆ ಪಡೆಯುತ್ತಿದೆ. ಇತರ ಕಾಯಿಲೆಗಳ ಚಿಕಿತ್ಸೆಗೆ ಬಂದವರು ಸೇರಿ 250ಕ್ಕೂ ಹೆಚ್ಚು ಮಹಿಳೆಯರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆ ಹೆರಿಗೆಗೆ ದಾಖಲಾದ ಗರ್ಭಿಣಿಯರು ಇದ್ದಾರೆ. ಆದರೆ ಏನೂ ಮಾಡುವುದು ಮನುಷ್ಯರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ನೀರು ಸರಬರಾಜು ನಿಂತು ಹೋಗಿದೆ. ಕಾರಣ ಏನೆಂದರೆ ಲೇಡಿಗೋಶನ್ ಆಸ್ಪತ್ರೆಯ ಓವರ್ ಹೆಡ್ ಟ್ಯಾಂಕ್ ಗೆ ನೀರು ಲಿಫ್ಟ್ ಮಾಡುವ  ಪಂಪ್ ಹಾಳಾಗಿದೆ. ಹಾಗಾದರೆ ಇಷ್ಟೊಂದು ದೊಡ್ಡ ಆಸ್ಪತ್ರೆಗೆ ಸ್ಟಾಂಡ್ ಬೈ ಪಂಪಿನ ವ್ಯವಸ್ಥೆ ಇಲ್ಲವೇ ಎಂದು ನೀವು ಯೋಚಿಸಬಹುದು. ಪರ್ಯಾಯ ಪಂಪ್ ಸೆಟ್ ನ ವ್ಯವಸ್ಥೆಯೂ ಇದೆ. ಆದರೆ ಅದು ಕೂಡ ಈ ಮುನ್ನವೇ ಕೆಟ್ಟು ಹೋಗಿದೆ. ಅದನ್ನು ಇನ್ನೂ ದುರಸ್ತಿ ಮಾಡಿಲ್ಲ. ಈಗ ಇನ್ನೊಂದು ಪಂಪ್ ಸೆಟ್ ಕೂಡ ಕೆಟ್ಟು ಹೋಗಿದೆ. ಇದಕ್ಕೆಲ್ಲ ಲೇಡಿಗೋಶನ್ ಆಸ್ಪತ್ರೆ ಆಡಳಿತ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯ ವೇ ಕಾರಣವಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಇದೊಂದು ಅಚಾನಕ್ ಆಗಿರುವ ಸಮಸ್ಯೆ. ಇದರ ಬಗ್ಗೆ ರಾಜಕೀಯ ಬೇಡ. ಹೊಸ ಪಂಪ್ ಅಳವಡಿಸಲಾಗುವುದು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.

ಪಂಪ್ ಸೆಟ್ ಕೆಟ್ಟು ಹೋಗಿದೆ. ವೀಕೆಂಡ್ ಲಾಕ್ ಡೌನ್ ನಿಂದ ಅಂಗಡಿಗಳು ಮುಚ್ಚಿರುವುದರಿಂದ ಪಂಪ್ ಸೆಟ್ ನ ಬಿಡಿಭಾಗ ಸಿಗಲಿಲ್ಲ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು