1:39 AM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಕುಂದಾಪುರ: ರಿವಾಲ್ವರ್ ತೋರಿಸಿ ಅಪಹರಿಸಿ ಮೊಬೈಲ್ ಅಂಗಡಿ ಮಾಲೀಕನಿಂದ ಲಕ್ಷಾಂತರ ರೂಪಾಯಿ ಲೂಟಿಗೈದ ದುಷ್ಕರ್ಮಿಗಳು

22/09/2021, 23:05

ಕುಂದಾಪುರ(reporterkarnataka.com): ಮೊಬೈಲ್ ಅಂಗಡಿ ಮಾಲೀಕನಿಗೆ ದುಷ್ಕರ್ಮಿಗಳ ತಂಡವೊಂದು ರಿವಾಲ್ವರ್ ತೋರಿಸಿ ಲಕ್ಷಾಂತರ ರೂಪಾಯಿ ನಗದು ಹಾಗೂ ಸೊತ್ತುಗಳನ್ನು ಸುಲಿಗೆ ಮಾಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.  

ಬೈಂದೂರಿನ ಮುಸ್ತಾಫ್ ಎಂಬವರು ನಗದು ಹಾಗೂ ಸೊತ್ತು ಕಳೆದುಕೊಂಡ ಮೊಬೈಲ್ ಅಂಗಡಿ ಮಾಲೀಕ. ಅವರು ಎಂದಿನಂತೆ ಸೆ.17ರಂದು ರಾತ್ರಿ ಶಾಪ್ ಬಂದ್ ಮಾಡಿ ಕುಂದಾಪುರದ ಫ್ಲ್ಯಾಟ್ ಗೆ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಮೂವರೊಂದಿಗೆ ಬಂದ ಮುಕ್ತಾರ್ ಎಂಬಾತ ಮುಸ್ತಾಫ್ ನನ್ನು ಅಡ್ಡಗಟ್ಟಿ ಕಾರಿನೊಳಗೆ ಎಳೆದೊಯ್ದಿದ್ದು, ಬಂದೂಕು ತೋರಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಹೋಗುವ ದಾರಿಮಧ್ಯೆ ಆರೋಪಿಗಳು ಬೆಂಗಳೂರಿನ ಎಟಿಎಂ ಹಾಗೂ ಸ್ವೈಪಿಂಗ್ ಮೆಷಿನ್ ನಿಂದ ₹ 3,14,100 ಡ್ರಾ ಮಾಡಿಕೊಂಡಿದ್ದಾರೆ. ಬಳಿಕ ಬೆಂಗಳೂರಿನ ಸರ್ಜಾಪುರದ ವಸತಿಗೃಹವೊಂದಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ, ಮುಸ್ತಾಫ್ ಬಳಿಯಿಂದ ಮೊಬೈಲ್ ವಶಕ್ಕೆ ಪಡೆದ ಅರೋಪಿಗಳು, ಬ್ಯಾಂಕ್ ಖಾತೆಯನ್ನು ಓಪನ್ ಮಾಡಿ ತಮ್ಮ ಖಾತೆಗೆ ₹ 50 ಸಾವಿರ ಜಮಾ ಮಾಡಿಕೊಂಡಿದ್ದರು. ಚೆಕ್ ಬುಕ್ ಪಡೆದುಕೊಂಡು ಸಹಿ ಮಾಡಲು ಹೇಳಿದ್ದಾರೆ. ಅಲ್ಲದೆ, ಊರಿಗೆ ಹೋದ ಮೇಲೆ ಖಾತೆಗೆ ಹಣ ಜಮಾ ಮಾಡಬೇಕು. ಇಲ್ಲದಿದ್ದರೆ ದಾಖಲೆ, ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಕೊಡುವುದಿಲ್ಲ ಬೆದರಿಸಿದ್ದಾರೆ. ಬಳಿಕ ಸೆ.18 ರಂದು ರಾತ್ರಿ 9.30ರ ವೇಳೆಗೆ ಆರೋಪಿಗಳು ಮುಸ್ತಾಫ್ ಅವರನ್ನು ಬಿಟ್ಟಿದ್ದಾರೆ. ಆರೋಪಿಗಳು ಮುಸ್ತಾಫ್ ಅವರಿಂದ ಒಟ್ಟು ₹ 4,64,175 ನಗದು ಹಾಗೂ ₹1,00,000 ಮೌಲ್ಯದ ಸ್ವತ್ತುಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಮುಸ್ತಾಫ್ ದೂರು ನೀಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು