6:52 AM Tuesday6 - October 2026
ಬ್ರೇಕಿಂಗ್ ನ್ಯೂಸ್
ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ವಿಜೃಂಭಣೆಯ ಶ್ರೀಕೊತ್ತಲ‍ಾಂಜನೇಯ ಕಾರ್ತೀಕೋತ್ಸವ; ರಸ್ತೆಯ ಇಕ್ಕೆಲೆಗಳಲ್ಲಿ ಎಣ್ಣೆ ದೀಪಗಳ ರಂಗು

19/12/2021, 16:14

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀಕೊತ್ತಲಾಂಜನೇಯ ಸ್ವ‍‍ಾಮಿ ದೇವರ ಕಾರ್ತೀಕೋತ್ಸವ ಬಹು ಅದ್ಧೂರಿಯಾಗಿ ಹಾಗೂ ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ಜರುಗಿತು.

ಪಟ್ಟಣ ಹಾಗೂ ಪಟ್ಟಣದ ನೆರೆ ಹೊರೆಯ ಗ್ರಾಮಗಳ ನಾಗರೀಕರು, ಸಾವಿರಾರು ಭಕ್ತರು ಶ್ರೀಆಂಜನೇಯ ಕಾರ್ತೀಕೋತ್ಸವದಲ್ಲಿ ಭಾಗಿಯಾಗಿದ್ದರು.ಮಹಿಳೆಯರು ಮಕ್ಕಳು ಯುವಕರು ಹಿರಿಯ ನಾಗರೀಕರು ಕಾರ್ತೀಕೋತ್ಸವದಲ್ಲಿ ಭಾಗಿಯಾಗಿ ದೀಪ ಬೆಳಗಿದರು. ದೇವಸ್ಥಾನದ ಭಕ್ತ ಮಂಡಳಿಯಿಂದ ಬಣ್ಣದ ಪಟಾಕಿ ಸಿಡಿಮದ್ದನ್ನು ಸಿಡಿಸಲಾಯಿತು. ಈ ಮೂಲಕ ಬಾನಂಗಳದಲ್ಲಿ ಬಣ್ಣ ಬಣ್ಣದ  ಬೆಳಕಿನ ರಂಗೋಲಿ ಹಾಕಿದಂತಿತ್ತು, ಇದರಿಂದಾಗಿ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು. ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ,ವಾಲ್ಮೀಕಿ ಮುಖಂಡ ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯ ಕಾವಲ್ಲಿ ಶಿವಪ್ಪನಾಯಕ ಹಾಗೂ ಕೆಲ ಹಿರಿಯ ನಾಗರೀಕರ ನೇತೃತ್ವದಲ್ಲಿ ಹಲವು ದೇವಸ್ಥ‍ಾನಗಳ ಸೇವಾಕರ್ತರು, ಶ್ರೀಕೊತ್ತಲಾಂಜನೇಯ ಭಕ್ತ ಮಂಡಳಿ ಪದಾಧಿಕಾರಿಗಳು ಹಾಗೂ ದೇವಸ್ಥಾನದ ಸೇವಾಕರ್ತರು ಕಾರ್ತೀಕೊತ್ಸವದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ದೇವಸ್ಥಾನದ ಆವರಣ ಹಾಗೂ ಪ್ರಮುಖ ರಸ್ಥೆಗಳ ಇಕ್ಕೆಲಗಳಲ್ಲಿ ಸಹಸ್ರಾರು ಎಣ್ಣೆದೀಪಗಳನ್ನು ಬೆಳಗಿಸಲಾಗಿತ್ತು. ಸಹಸ್ರಾರು ಮಣ್ಣಿನ ಪ್ರಣತಿಗಳನ್ನು ಹಾಗೂ ಎಣ್ಣೆ ಬತ್ತಿಯಿಂದ ದೀಪ ಬೆಳಗುವ ಮೂಲಕ ,ಬಹು ಅರ್ಥಪೂರ್ಣವಾಗಿ ಶ್ರದ್ಧಾಭಕ್ತಿಯಿಂದ ಕಾರ್ತೀಕೋತ್ಸವ ಆಯೋಜಿಸಿದ್ದರು.ಪಟ್ಟಣದ ಸಹಸ್ರಾರು ಭಕ್ತರು ತಮ್ಮ ಕುಟುಂಬ ಸದಸ್ಯರ ಸಮೇತವಾಗಿ ಶ್ರೀಕೊತ್ತಲ‌ಾಂಜನೇಯ ದರ್ಶನ ಪಡೆದು,ದೇವಸ್ಥ‍ಾನದ ಆವರಣದಲ್ಲಿ ವ್ಯವಸ್ಥೆಮಾಡಲಾಗಿದ್ದ ಸಹಸ್ರಾರು ಪ್ರಣತಿಗಳಲ್ಲಿ ದೀಪಬೆಳಗಿಸುವ ಮೂಲಕ ಮತ್ತು ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ದೇವಸ್ಥಾನ ಹಾಗೂ ಆವರಣವನ್ನು ಜಗಮಗಿಸುವಂತೆ ಅಲಂಕರಿಸಲಾಗಿತ್ತು.ಕಾರ್ತೀಕೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು,ಪಟ್ಟಣದ  ಸಹಸ್ರಾರು ಭಕ್ತರು ಶ್ರೀಕೊತ್ತಲಾಂಜನೇಯ ಕಾರ್ತೀಕೋತ್ಸವವನ್ನು,ಬಹು ಶ್ರದ್ಧೆಯಿಂದ ಆಚರಿಸಿ ದೇವರ ಕೃಪೆಗೆ ಪಾತ್ರರಾದರು.

ಇತ್ತೀಚಿನ ಸುದ್ದಿ

ಜಾಹೀರಾತು