8:33 AM Saturday5 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷರಿಂದ ಏಟು ತಿಂದಿದ್ದು ಕಾಂಗ್ರೆಸ್ ಅಭಿಮಾನಿಯಲ್ಲ, ಜನತಾ ದಳದ ಕಾರ್ಯಕರ್ತ !!: ಏನು ವಿಚಿತ್ರ ನೋಡಿ! 

12/07/2021, 11:05

ಮಂಡ್ಯ(reporterkarnataka news): ಅವರ ಹೆಸರು ಉಮೇಶ್ ಮದ್ದೂರು. ಜೆಡಿಎಸ್ ಕಾರ್ಯಕರ್ತರು. ತೊರೆಬೊಮ್ಮನ ಹಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರೂ ಹೌದು.

ಉಮೇಶ್ ಬಗ್ಗೆ ಯಾಕಿಷ್ಟು ವಿವರ ಅಂತ ಅಂದುಕೊಂಡ್ರಾ…? ಕಾರಣ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈಯಿಂದ ಏಟು ತಿಂದವರು ಇದೇ ಉಮೇಶ್ ಮದ್ದೂರು.

ಹಾಗಾದರೆ ಜೆಡಿಎಸ್ ಕಾರ್ಯಕರ್ತರಾದ ಉಮೇಶ್ ಅವರು ಕಾಂಗ್ರೆಸ್ ಅಧ್ಯಕ್ಷರ ಜತೆ ಆ ಸಣ್ಣ ಮೆರವಣಿಗೆಯಲ್ಲಿ ಯಾಕೆ ಸೇರ್ಕೊಂಡರು? ಯಾಕೆ ಹೊಡೆಸಿಕೊಂಡ್ರು? ಎನ್ನುವ ಕುತೂಹಲ ನಿಮಗಿದೆಯೇ? ಹಾಗಾದರೆ ಉಮೇಶ್ ಮದ್ದೂರು ಅವರ ಬಾಯಿಯಲ್ಲೇ ಏನಾಯಿತು ಅನ್ನುವುದನ್ನು

ಕೇಳೋಣ ಬನ್ನಿ….

ನಾನು ನಮ್ಮ ಒಕ್ಕಲಿಗರ ನಾಯಕ ಬರುತ್ತಿದ್ದಾರೆ ಎಂಬ ಅಭಿಮಾನದಿಂದ ಹೋಗಿದ್ದೆ. ಫೋಟೋ ತೆಗೆದುಕೊಳ್ಳಬೇಕೆಂದು ಹತ್ತಿರ ಹೋದೆ. ಹೆಗಲ ಮೇಲೆ ಕೈಹಾಕುವಷ್ಟು ಸಣ್ಣತನ ನನ್ನಲ್ಲಿ ಇರಲಿಲ್ಲ. ನಾನೊಬ್ಬ ಪ್ರಜ್ಞಾವಂತ ವ್ಯಕ್ತಿ ಎನ್ನುತ್ತಾರೆ ಉಮೇಶ್ ಮದ್ದೂರು.

ಸಾಕಷ್ಟು ನೊಂದುಕೊಂಡಿರುವ ಉಮೇಶ್ ಮತ್ತೆ ಮಾತು ಮುಂದುವರಿಸುತ್ತಾರೆ. ಶಿವಕುಮಾರ್ ಅವರು ನನಗೆ ಸಂಬಂಧಿಕರೂ ಆಗಬೇಕು. ಬೇರೆ ಯಾರಾದರೂ ನನ್ನ ಮೇಲೆ ಕೈ ಮಾಡುತ್ತಿದ್ದರೆ ನಾನು ಅಲ್ಲೇ ಪ್ರತಿಭಟನೆ ಮಾಡುತ್ತಿದ್ದೆ. ಅವರ ಸ್ಥಾನಮಾನಕ್ಕೆ ಗೌರವ ಕೊಟ್ಟು ಸುಮ್ಮನಾಗಿದ್ದೇನೆ. ಶಿವಕುಮಾರ್ ಅವರು ಇನ್ನಾದರೂ ಇಂತಹ ವರ್ತನೆ ಬಿಡಬೇಕು ಎಂದು ಬುದ್ದಿವಾದದ ಮಾತನ್ನು ಬಹಳ ನಯವಾಗಿ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು