2:43 AM Friday12 - June 2026
ಬ್ರೇಕಿಂಗ್ ನ್ಯೂಸ್
ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ… ಹಾಸನ | ಸಕಲೇಶಪುರ ಬಳಿ ಕರುಗಳ ಬೆನ್ನಟ್ಟಿದ ಕಾಡಾನೆ ಮರಿ ಚಿಕ್ಕಮಗಳೂರು: ಗುಂಡು ಹಾರಿಸಿಕೊಂಡು ಗೃಹಿಣಿ ಅನುಮಾನಾಸ್ಪದ ಸಾವು ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ:… ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು: ಗೃಹ ಸಚಿವ… ಸಿಎಂ ಕಾನೂನು ಸಲಹೆಗಾರ ಸ್ಥಾನಕ್ಕೆ ಎ. ಎಸ್. ಪೊನ್ನಣ್ಣ ರಾಜೀನಾಮೆ: ಸಚಿವ ಸ್ಥಾನ… Kodagu | ನಾಪೋಕ್ಲು: ಕಾರು – ಬೈಕ್ ಅಪಘಾತ- ಸವಾರ ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ

ಜ.4 ರಂದು ಸ್ವಯಂಪ್ರೇರಿತ ನಂಜನಗೂಡು ಬಂದ್ ಗೆ ಯುವ ಬ್ರಿಗೇಡ್ ಕರೆ

02/01/2024, 21:37

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ದಕ್ಷಿಣ ಕಾಶಿ ನಂಜನಗೂಡು ನಂಜುಂಡೇಶ್ವರನಿಗೆ ಎಂಜಲು ನೀರು ಎರಚಿ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಜ.4 ರಂದು ಸ್ವಯಂಪ್ರೇರಿತ ನಂಜನಗೂಡು ಬಂದ್ ಕರೆ ನೀಡಲಾಗಿದೆ ಎಂದು ಯುವ ಬ್ರಿಗೇಡ್ ಮುಖಂಡ ಗಿರೀಶ್ ಹೇಳಿದರು.


ನಂಜನಗೂಡು ನಗರದ ತಾಲ್ಲೂಕು ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿ ನಡೆ ಮಾತನಾಡಿದ ಅವರು, ದೇವಾಲಯದ ಸಂಪ್ರದಾಯದಂತೆ ಅನಾದಿಕಾಲದಿಂದಲೂ ಹುಣ್ಣಿಮೆಯಂದು ಅಂಧಕಾಸುರನ ಸಂಹಾರ ನಡೆಯುತ್ತದೆ. ಅಂಧಾಕಾಸುರ ಸಂಹಾರದ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿ, ನಂಜುಂಡೇಶ್ವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ನಂಜುಂಡೇಶ್ವರನ ವಿಗ್ರಹದ ಮೇಲೆ ಎಂಜಲು ನೀರು ಎರಚಿ ಕೋಟ್ಯಂತರ ಭಕ್ತರ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆ ತಂದು 4 – 5 ದಿನ ಕಳೆದರು ಕಿಡಿಗೇಡಿಗಳನ್ನು ಬಂಧಿಸದೆ ಕಾಲ‌ಹರಣ ಮಾಡುತ್ತಿರುವ ಪೋಲಿಸ್ ಇಲಾಖೆ, ತಾಲ್ಲೂಕು ಆಡಳಿತ, ಜಿಲ್ಲಾಡಳಿತ, ಸರ್ಕಾರದ ಕ್ರಮವನ್ನು ಖಂಡಿಸಿ ನಂಜುಂಡೇಶ್ವರನ ಭಕ್ತರೆಲ್ಲ ಸೇರಿ ಜನವರಿ 4 ರ ಗುರುವಾರ ಸ್ವಯಂ ಪ್ರೇರಿತರವಾಗಿ ನಂಜನಗೂಡು ಬಂದ್ ಮಾಡುವ ಮೂಲಕ ಸರ್ಕಾರವನ್ನು ಎಚ್ಚರ ಮಾಡಬೇಕಾದ ಅನಿವಾರ್ಯತೆ ಬಂದಿದೆ.
ಅದಕ್ಕಾಗಿ ತಾವೆಲ್ಲರೂ ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ದಕ್ಷಿಣ ಕಾಶಿಯ ನಂಜುಂಡೇಶ್ವರನಿಗೆ ಎಂಜಲು ಎರಚಿದವರ ಶಿಕ್ಷೆಗೆ ಈ ಮೂಲಕ ಆಗ್ರಹಿಸ ಬೇಕೆಂದು ಕೋರಿಕೊಳ್ಳುತ್ತೆವೆ ಎಂದು ಮನವಿ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ನಗರಸಭಾ ಸದಸ್ಯ ಕಪಿಲೇಶ್, ಖಾದಿ ಗ್ರಾಮೋದ್ಯೋಗ ನಿಗಮದ ಮಾಜಿ ಅಧ್ಯಕ್ಷ ಕೃಷ್ಣಪ್ಪಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು