5:07 PM Friday16 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ದೇವೇಗೌಡರಿಗೆ ಅವಮಾನ, ಸುಮಲತಾಗೆ ಅನ್ಯಾಯ: ಒಕ್ಕಲಿಗರ ಕೈಬಿಟ್ಟ ಬಿಜೆಪಿ ವಿರುದ್ಧ ಮಂಡ್ಯ ಕೈ ನಾಯಕನ ಅಕ್ರೋಶ

08/06/2026, 21:33

ಮಂಡ್ಯ(reporterkarnataka.com): ಬಿಜೆಪಿ ರಾಜ್ಯಸಭಾ ಟಿಕೆಟ್ ಘೋಷಣೆ ಬಳಿಕ ಒಕ್ಕಲಿಗರಿಗೆ ಅನ್ಯಾಯವಾಗ್ತಿದೆ ಎನ್ನುವ ಕೂಗು ಕೇಳಿ ಬರ್ತಿದೆ. ಕ್ಷೇತ್ರವನ್ನೇ ತ್ಯಾಗ ಮಾಡಿದ ಸುಮಲತಾ ಅಂಬರೀಷ್​ ಅವರಿಗೆ ರಾಜ್ಯಸಭಾ ಟಿಕೆಟ್ ನೀಡದೆ ಅನ್ಯಾಯ ಮಾಡಲಾಗಿದೆ ಎನ್ನಲಾಗ್ತಿದೆ. ಇದೀಗ ಅಂಬಿ ಪತ್ನಿ ಪರ ಮಂಡ್ಯ ಕಾಂಗ್ರೆಸ್​ ನಾಯಕ ಮಾತಾಡಿದ್ದು, ಜೆಡಿಎಸ್​​ ಪಕ್ಷವನ್ನೇ ಬಿಜೆಪಿ ಸರ್ವನಾಶ ಮಾಡುತ್ತೆ ಎಂದು ಗುಡುಗಿದ್ದಾರೆ.

*ಟಿಶ್ಯೂ ಪೇಪರ್​ ತರ ಯೂಸ್ ಮಾಡಿ ಬಿಸಾಡಿದ್ರು!:*
ಟಿಶ್ಯೂ ಪೇಪರ್​ ತರ ಯೂಸ್ ಮಾಡಿ ಬಿಸಾಕೋದೆ ಬಿಜೆಪಿ ಕೆಲಸ. ಜೆಡಿಎಸ್​ಗೆ ಬಿಸ್ಕೆಟ್​​ ತರ ಕೇಂದ್ರ ಮಂತ್ರಿ ಸ್ಥಾನ ಕೊಟ್ಟು ಕೂರಿಸಿದ್ರು. ಇದೀಗ ಬಿಜೆಪಿಯವರು ಮಂಡ್ಯಕ್ಕೆ ಚಪ್ಪಡಿಕಲ್ಲು ಎಳೆದು ಒಕ್ಕಲಿಗರನ್ನು ಮುಗಿಸಿದ್ದಾರೆ. ದೇವೇಗೌಡ್ರು ಹಾಗೂ ಸುಮಲತಾಗೆ ರಾಜ್ಯಸಭಾ ಟಿಕೆಟ್ ಕೈ ತಪ್ಪಿದ ಬಗ್ಗೆ ಮಂಡ್ಯದಲ್ಲಿ ಬಿಜೆಪಿ ವಿರುದ್ಧ ಶಾಸಕ ಗಣಿಗ ರವಿಕುಮಾರ್ ವಾಗ್ದಾಳಿ ನಡೆಸಿದ್ರು.

*ಅಂಬಿ ಕುಟುಂಬದ ಮೇಲೆ ಅಪಾರ ಪ್ರೀತಿ:*
ಮಂಡ್ಯ ಜನರಿಗೆ ಅಂಬರೀಶಣ್ಣನ ಕುಟುಂಬ ಮತ್ತು ದೇವೇಗೌಡ್ರು ಮೇಲೆ ಅಪಾರ ಪ್ರೀತಿ ಇದೆ. ನಿಖಿಲ್ ಕುಮಾರಸ್ವಾಮಿ ಅವರನ್ನ ಎಂಪಿ ಚುನಾವಣೆಗೆ ನಿಲ್ಲಿಸಿದ್ರು. ಅವ್ರ ವಿರುದ್ದ ಸುಮಲತಾ 1 ಲಕ್ಷಕ್ಕೂ ಅಧಿಕ ಮತಗಳಿಂದ ವಿಜಯ ಪತಾಕೆ ಹಾರಿಸಿದ್ರು. ಅಂದಿನ ಮುಖ್ಯಮಂತ್ರಿ ಮಗನ ವಿರುದ್ದ ಗೆಲ್ಲೋದು ಸುಲಭವಲ್ಲ. ಆದ್ರೂ ಸ್ವತಂತ್ರವಾಗಿ ಸುಮಲತಾ ಅಂಬರೀಶ್ ಗೆದ್ದರು ಎಂದು ಸುಮಲತಾರನ್ನ ಗಣಿಗ ರವಿಕುಮಾರ್​ ಕೆಂಡಕಾರಿದ್ರು.

*ತ್ಯಾಗ ಮಾಡಿ ಸುಮಲತಾಗೆ ಸಿಕ್ಕದ್ದೇನು?:*
ಬಿಜೆಪಿ ಸೇರಿದ ಬಳಿಕ ಮಾಜಿ ಸಂಸದೆ ಸುಮಲತಾ ಅವರು ತ್ಯಾಗಮಯಿಯಂತೆ ಕುಮಾರಸ್ವಾಮಿಗೆ ಕ್ಷೇತ್ರ ಬಿಟ್ಟುಕೊಟ್ಟರು. ಕಾಂಗ್ರೆಸ್​​ ಸೇರಿದ್ರೆ ನಮ್ಮ ಪಕ್ಷದಿಂದ ನಿಲ್ತಿದ್ರೋ? ಬಿಜೆಪಿ ಸೇರಿದ್ದರಿಂದ ತ್ಯಾಗ ಮಾಡಿದ್ದು ಸತ್ಯ. ಬಿಜೆಪಿ ಅಂಬರೀಶಣ್ಣನ ಕುಟುಂಬಕ್ಕೆ ರಾಜ್ಯಸಭೆ ಟಿಕೆಟ್ ಕೊಡದೆ, ದೇವೇಗೌಡ್ರು ಗೆ ಕೊಡದೆ ಒಕ್ಕಲಿಗರಿಗೆ ಅನ್ಯಾಯ ಮಾಡಿದೆ ಎಂದು ಗಣಿಗ ರವಿಕುಮಾರ್ ಅವರು ಸುಮಲತಾ ಪರ ಬ್ಯಾಟಿಂಗ್ ಮಾಡಿದ್ದಾರೆ.

*ಜೆಡಿಎಸ್​ನನ್ನ ಸರ್ವನಾಶ ಮಾಡ್ತಾರೆ:*
ಬಿಜೆಪಿ ಅವರು ಜೆಡಿಎಸ್​ನನ್ನ ರಾಜಕೀಯವಾಗಿ ಸರ್ವನಾಶ ಮಾಡೇ ಮಾಡ್ತಾರೆ ಎಚ್ಚೆತ್ತುಕೊಳ್ಳಿ. ಹಳೆ ಮೈಸೂರು ಭಾಗದ ಗ್ರೌಂಡ್ ಕಿತ್ತುಕೊಳ್ಳಲು ರೆಡಿ ಆಗಿದ್ದಾರೆ. ದೇವೇಗೌಡ್ರುಗೆ ಟಿಕೆಟ್ ತಪ್ಪಿಸ್ತಾರೆ ಅಂದ್ರೆ ದೇವರು ಒಳ್ಳೆಯದು ಮಾಡ್ತಾನಾ ಬಿಜೆಪಿಯವರು ಮಂಡ್ಯಕ್ಕೆ ಚಪ್ಪಡಿಕಲ್ಲು ಎಳೆದು ಒಕ್ಕಲಿಗರನ್ನು ಮುಗಿಸಿದ್ದಾರೆ.

*ಸುಮಲತಾ ಅಂಬರೀಶ್ ಕುಟುಂಬ ಅಂದ್ರೆ ಏನು:?* ಅವರಿಗೆ ಟಿಕೆಟ್ ತಪ್ಪಿದ್ದು, ನಡುನೀರಲ್ಲಿ ಕೈಬಿಟ್ಟರು ಅಂತ ನನಗೆ ಬೇಸರವಾಗಿದೆ. ಅಂದು ಸೋನಿಯಗಾಂಧಿ ಅವರು ದೇವೇಗೌಡ್ರರಿಗೆ ಬಿಟ್ಟುಕೊಟ್ಟರು. ಕಾಂಗ್ರೆಸ್ ಖರ್ಗೆ ಹಾಗೂ ದೇವೇಗೌಡರನ್ನ ಗೌರವಯುತವಾಗಿ ನಡೆಸಿಕೊಂಡ್ರು. ಸತ್ಯದ ಬಗ್ಗೆ ನಾನು ಮಾತನಾಡಿದ್ದೇನೆ. ಅವರ ಮೈತ್ರಿ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.
ಅವರಿಗೆ ಅನ್ಯಾಯ ಆಗಿದೆ, ಅವರ ಕುಟುಂಬದಲ್ಲಿ ಊಟ ಮಾಡಿದ್ದೇನೆ. ದೇವೇಗೌಡ್ರು, ಸುಮಲತಾ ಅವರ ಬಿಜೆಪಿ ನಡೆಸಿಕೊಂಡಿದ್ದು ರೀತಿ ಬೇಸರ ಆಗಿದೆ. ಬಿಜೆಪಿ ಒಕ್ಕಲಿಗರಿಗೆ ಮಾಡಿದ ದೊಡ್ಡ ಅವಮಾನ ನಾನು ಖಂಡಿಸುತ್ತೇನೆ ಎಂದು ಕಾಂಗ್ರೆಸ್​ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು