6:21 AM Monday10 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಇದು ರಾಜ್ಯದಲ್ಲೇ ಫಸ್ಟ್ ಟೈಮ್ : ಮಂಗಳೂರಿನಲ್ಲಿ ಅಂಚೆ ಮೂಲಕ ಜನನ-ಮರಣ ಪ್ರಮಾಣ ಪತ್ರ ಮನೆ ಬಾಗಿಲಿಗೆ ರವಾನೆ!

22/03/2022, 23:20

ಮಂಗಳೂರು(reporterkarnataka.com): ಮನೆ ಬಾಗಿಲಿಗೆ ಜನನ-ಮರಣ ಪ್ರಮಾಣಪತ್ರ ತಲುಪಿಸುವ ಯೋಜನೆಗೆ ಸಂಬಂಧಿಸಿದ ಒಡಂಬಡಿಕೆಗೆ ಮಂಗಳೂರು ಮಹಾನಗರ ಪಾಲಿಕೆ ಮತ್ತು ಅಂಚೆ ಒಡಂಬಡಿಕೆಗೆ ಸಹಿ ಹಾಕಿದ್ದು,

ರಾಜ್ಯದಲ್ಲೇ ಮೊದಲ ಬಾರಿಗೆ ಮನೆ ಬಾಗಿಲಿಗೆ ಜನನ-ಮರಣ ಪ್ರಮಾಣ ಪತ್ರ ತಲುಪಿಸುವ ಯೋಜನೆಯನ್ನು ಪಾಲಿಕೆ ಆರಂಭಿಸಿದೆ. 

ಪಾಲಿಕೆ ಕಚೇರಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಉಪಸ್ಥಿತಿಯಲ್ಲಿ ಮನೆ ಬಾಗಿಲಿಗೆ ಜನನ-ಪ್ರಮಾಣಪತ್ರ ತಲುಪಿಸುವ ಯೋಜನೆಗೆ ಚಾಲನೆ ನೀಡಲಾಯಿತು.

ಜನನ, ಮರಣ ಪ್ರಮಾಣ ಪತ್ರ ಬೇಕಿದ್ದವರು ಪಾಲಿಕೆಗೆ ತೆರಳಿ ಅರ್ಜಿ ನೀಡಬೇಕು. ಪಾಲಿಕೆಯು ಅದನ್ನು ಪರಿಶೀಲಿಸಿ ಅಂಚೆ ಮೂಲಕ ಮನೆಗೆ ಕಳುಹಿಸುತ್ತದೆ. ಮನೆಗೆ ಪ್ರಮಾಣಪತ್ರ ಬಂದ ಬಳಿಕ 100 ರೂ. ಶುಲ್ಕ ಪಾವತಿಸಬೇಕು. ಮುಂದಿನ ದಿನಗಳಲ್ಲಿ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುದೆ.

ಇತ್ತೀಚಿನ ಸುದ್ದಿ

ಜಾಹೀರಾತು