4:15 PM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಹುಂಡಿ ಎಣಿಕೆ: ಒಂದೇ ತಿಂಗಳಲ್ಲಿ 2.11 ಕೋಟಿಗೂ ಅಧಿಕ ಆದಾಯ

16/04/2026, 18:50

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ರಾಜ್ಯದ ಪ್ರತಿಷ್ಠಿತ ದೇವಾಲಯಗಳಲ್ಲಿ ಒಂದಾದ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿಗಳ ಎಣಿಕೆ ನಡೆದಿದ್ದು, ಒಂದು ತಿಂಗಳಲ್ಲಿ ಸುಮಾರು ಎರಡು ಕೋಟಿಗೂ ಹೆಚ್ಚು ದಾಖಲೆ ಮೊತ್ತದ ಆದಾಯ ಗಳಿಸಿದೆ.
ಶ್ರೀ ಶ್ರೀಕಂಠ ದೇವಾಲಯದ ಸುಮಾರು 37 ಹುಂಡಿಗಳಲ್ಲಿ ತುಂಬಿದ್ದ ಕಾಣಿಕೆ ಹಣ ತೆಗೆದು ಎಣಿಕೆ ಮಾಡಲಾಯಿತು.
ಈ ಬಾರಿಯ ದೇವಾಲಯದ ಪರ್ಕಾವಣೆ ಹಣವನ್ನು ಬ್ಯಾಂಕ್ ಆಫ್ ಬರೋಡ ನಂಜನಗೂಡು ಶಾಖೆಗೆ ವರ್ಗಾಯಿಸಿದ್ದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿಗಳು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ನೂರಾರು ಮಹಿಳೆಯರು ಮತ್ತು ದೇವಾಲಯದ ಸಿಬ್ಬಂದಿಗಳು ಎಣಿಕೆಯಲ್ಲಿ ಭಾಗಿಯಾಗಿದ್ದರು.


ದೇವಾಲಯದ ದಾಸೋಹ ಭವನದಲ್ಲಿ ಆಯೋಜಿಸಲಾಗಿದ್ದ ಹುಂಡಿಗಳ ಎಣಿಕೆ ಕಾರ್ಯದಲ್ಲಿ ಎಲ್ಲಿ ನೋಡಿದರಲ್ಲಿ ಹಣದ ರಾಶಿ ಒಂದು ರೂ ನಿಂದ ಹಿಡಿದು 500 ರೂ ವರೆಗಿನ ಚಿಲ್ಲರೆ ನಾಣ್ಯವೂ ಸೇರಿದಂತೆ ರಾಶಿ ರಾಶಿ ನೋಟುಗಳ ಎಣಿಕೆ ಭರದಿಂದ ಸಾಗಿತ್ತು .
ಈ ಬಾರಿ ವರ್ಗಾವಣೆಯಲ್ಲಿ ಸುಮಾರು ಎರಡು ಕೋಟಿ 11 ಲಕ್ಷದ 48 ಸಾವಿರದ ಏಳುನೂರ ಇಪ್ಪತ್ತೆಂಟು ರೂಪಾಯಿಗಳ ದಾಖಲೆ ಮೊತ್ತದ ಜೊತೆಗೆ 58 ಗ್ರಾಂ ಚಿನ್ನ, ಎರಡು ಕೆಜಿ 500 ಗ್ರಾಂ ಬೆಳ್ಳಿ ಸೇರಿದಂತೆ 46 ವಿದೇಶಿ ಕರೆನ್ಸಿಗಳು, ನಿಷೇಧಿತ 500 ಮತ್ತು 2,000 ದ ಹಳೆಯ ನೋಟುಗಳು ಸಹ ಸಂಗ್ರಹವಾಗಿದ್ದದ್ದು ವಿಶೇಷವಾಗಿತ್ತು.
ಈ ಸಂದರ್ಭ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಮುಜರಾಯಿ ಇಲಾಖೆಯ ತಹಸಿಲ್ದಾರ್ ಭಾಗ್ಯ, ಸಹಾಯಕ ಅಧಿಕಾರಿ ಸತೀಶ್, ಸೇರಿದಂತೆ ದೇವಾಲಯದ ಇನ್ನಿತರ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು