9:54 AM Monday10 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಹನಿಟ್ರ್ಯಾಪಿಗೂ ಜಗ್ಗದ ಕಾಡಾನೆ!!: ಹೆಣ್ಣಾನೆ ಮೂಲಕ ದಾಂಧಲೆಕೋರ ಒಂಟಿ ಸಲಗದ ಸೆರೆಗೆ ಯತ್ನ

22/08/2022, 20:15

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕಳೆದ ನಾಲ್ಕೈದು ತಿಂಗಳಿನಿಂದ ಗ್ರಾಮಸ್ಥರಿಗೆ ಕಾಟ ಕೊಡುತ್ತಿರುವ ಒಂಟಿ ಸಲ್ದಾನಾ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆಯನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಶಿವಮೊಗ್ಗದಿಂದ ಹೆಣ್ಣಾನೆಯನ್ನು ತಂದರೂ ಅದು ಹೆಣ್ಣಿನ ಮೋಹಕ್ಕೆ ಬೀಳದೆ ಅರಣ್ಯ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಮೇಗುಂದಾ ಹೋಬಳಿಯ ಸುತ್ತಮುತ್ತ ಕಳೆದ ನಾಲ್ಕೈದು ತಿಂಗಳಿಂದ ಪುಂಡಾನೆ ಕಾಟ ಕೊಡುತ್ತಿದೆ. ಇಡೀ ರಾತ್ರಿ ದಾಂಧಲೆ ಮಾಡಿ ಹಗಲಲ್ಲಿ ಸುತ್ತಲೂ ಪ್ರಪಾತವಿರುವ ಎತ್ತರದ ಜಾಗದಲ್ಲಿ ನಿಲ್ಲುತ್ತಿತ್ತು. ಇದರಿಂದ ಅಧಿಕಾರಿಗಳು ಹಾಗೂ ಸ್ಥಳಿಯರು ಹೈರಾಣಾಗಿದ್ದರು. ಈ ಪುಂಡಾನೆಯನ್ನ ಹಿಡಿಯಲು ಶಿವಮೊಗ್ಗದಿಂದ ಸಾಕಾನೆಗಳನ್ನ ಕರೆಸಿದ್ದರು. ಮೂರು ದಿನದಿಂದ ಕಾರ್ಯಾಚರಣೆ ನಡೆಸಿದರು ಒಂಟಿ ಸಲಗ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದೆ. 11 ಮಾವುತರು, ಐದು ಸಾಕಾನೆಗಳು, ಅಧಿಕಾರಿಗಳು ಸೇರಿ 25ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು ಆನೆ ಸೆರೆಯಾಗಿಲ್ಲ. ಈಗಲೂ ಹಗಲಲ್ಲಿ ದಾಂಧಲೆ ನಡೆಸುತ್ತಿರೋ ಒಂಟಿ ಸಲಗ ಮೇಗುಂದ ಹೋಬಳಿಯ ಗುಡ್ಡದ ಎತ್ತರಕ್ಕೆ ಹೋಗಿ ನಿಲ್ಲುತ್ತಿದೆ. ಸುತ್ತಲೂ ಪ್ರಪಾತವಿದ್ದು, ಬೆದರಿಸಿದರೆ ಬಿದ್ದು ಪ್ರಾಣ ಕಳೆದುಕೊಳ್ಳಬಹುದು ಎಂದು ಅಧಿಕಾರಿಗಳು ಆನೆಯನ್ನ ಬೆದರಿಸಲು ಮುಂದಾಗದೆ ಸೆರೆ ಹಿಡಿಯಲು ಮುಂದಾಗಿದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಸಾಕು ಹೆಣ್ಣಾನೆ ಭಾನುಮತಿ ಮೂಲಕ ಒಂಟಿ ಸಲಗಕ್ಕೆ 


ಹನಿಟ್ರ್ಯಾಪ್ ಮೂಲಕ ಸೆರೆ ಹಿಡಿಯಲು ಮುಂದಾದರೂ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಮೂರು ದಿನದಿಂದ ಉಪಯೋಗವಿಲ್ಲದ ಕಾರ್ಯಚರಣೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಎಷ್ಟೆ ಪ್ರಯತ್ನಪಟ್ಟರೂ ಒಂಟಿ ಸಲಗವನ್ನ ಸೆರೆ ಹಿಡಿಯಲು ಸಾಧ್ಯವಾಗುತ್ತಿಲ್ಲ. ಹಾವೇರಿಯಲ್ಲಿ ಸೆರೆ ಹಿಡಿದಿದ್ದ ಈ ಪುಂಡಾನೆಗೆ ಹಾವೇರಿ ಟಸ್ಕರ್ ಕೊರಳಿಗೆ ರೇಡಿಯೋ ಕಾಲರ್ ಇದ್ದು ಅದು ಇರುವ ನಿಖರ ಜಾಗ ತಿಳಿದಿದ್ದರೂ ಅಧಿಕಾರಿಗಳೂ ಏನೂ ಮಾಡದ ಸ್ಥಿತಿಯಲ್ಲಿದ್ದು ಪುಂಡಾನೆ ಮುಂದೆ ಅಸಹಾಯಕರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು