2:24 PM Wednesday29 - April 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು…

ಇತ್ತೀಚಿನ ಸುದ್ದಿ

ಹಿರಿಯ ಶಿಕ್ಷಕ‌, ಪತ್ರಕರ್ತ ಜಯಾನಂದ ಪೆರಾಜೆಗೆ ಅಮೃತ ಸಮ್ಮಾನ ಗೌರವ ರಾಜ್ಯ ಪ್ರಶಸ್ತಿ

08/09/2023, 19:20

ಉಡುಪಿ(reporterkarnataka.com): ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ 34 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಪ್ರಸ್ತುತ ಪತ್ರಕರ್ತರಾಗಿರುವ ಹಿರಿಯ ಶಿಕ್ಷಕ ಜಯಾನಂದ ಪೆರಾಜೆಯವರಿಗೆ ‌ಅಮೃತ ಸಮ್ಮಾನ ಗೌರವ ಪ್ರಶಸ್ತಿ ನೀಡಿ ಶಿಕ್ಷಕ ದಿನಾಚರಣೆಯಂದು ಉಡುಪಿಯಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ಹುಬ್ಬಳ್ಳಿ ವತಿಯಿಂದ ನಡೆದ ಶಿಕ್ಷಕ ಸಾಹಿತಿಗಳ ಆರನೆಯ ರಾಜ್ಯ ಸಮ್ಮೇಳನವು ಉಡುಪಿ ಅಂಬಲಪ್ಪಾಡಿ ಶ್ರೀ ಜನಾರ್ದನ ಮಹಾಂಕಾಳಿ ದೇವಸ್ಥಾನದ ಶ್ರೀ ಭವಾನಿ ಮಂಟಪದಲ್ಲಿ ಜರಗಿತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನೆಂಪು ನರಸಿಂಹ ಭಟ್ಟರ ಸರ್ವಾಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. ಧರ್ಮದರ್ಶಿ ಡಾ. ವಿಜಯ ಬಲ್ಲಾಳ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉದ್ಯಮಿ ವಿಶ್ವನಾಥ ಶೆಣೈ, ಕ.ಚು.ಸಾ. ಪ.ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ,
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮುಖ್ಯ‌ಅತಿಥಿಯಾಗಿದ್ದರು.
ರಾಜ್ಯದ ಶಿಕ್ಷಕ ಸಾಹಿತಿಗಳಾದ ಕೆ.ವಿ.ಶ್ರೀಕಾಂತ್‌ ಹೊಸಕೋಟೆ, ಅಶೋಕ ಧರ್ಮಸ್ಥಳ, ವನಿತಾ ಕುಮಾರಿ ದ.ಕ., ಎ.,ಗೌರೀಶ ತಮ್ಮಣ್ಣ ನಾಯಕ, ಹೊನ್ನಪ್ಪ ನಾರಾಯಣ ನಾಯಕ ಅಂಕೋಲ, ಜಿ.ಯು.ನಾಯಕ ಚೇರ್ಕಾಡಿ,ಟಿ.ಕೆ.ಆಚಾರ್‌ ಉಡುಪಿ, ರಾಜು ಆಚಾರ್ಯ ಉಡುಪಿ, ಮನೋಜ್ ಕಡಬ, ಸೋಮಶೇಖರ ಶೆಟ್ಟಿ ನೆಂಪು ಇವರನ್ನು ಅಮೃತ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.


ಉಡುಪಿ ಜಿಲ್ಲಾ ಉಪಾಧ್ಯಕ್ಷ ರಾಜು ಎನ್.ಆಚಾರ್ಯ‌ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು.
ಡಾ.ರಾಧಾಕೃಷ್ಣನ್ ಕಂಡಂತೆ ಶೈಕ್ಷಣಿಕ ಕ್ಷೇತ್ರವಕುರಿತು ಶಾಂತಾ‌ ಪುತ್ತೂರು ವಿಚಾರ ಮಂಡಿಸಿದರು.
ನೈತಿಕ ಶಿಕ್ಷಣ ಬಗ್ಗೆ ಸಾವಿತ್ರಿ ಮನೋಹರ ಕಾರ್ಕಳ‌ ಮಾತನಾಡಿದರು.
ಬಹುಭಾಷಾ‌ ಕವಿ ಅಂಶುಮಾಲ ಅಧ್ಯಕ್ಷತೆಯಲ್ಲಿ‌ ಕವಿಗೋಷ್ಠಿ ನಡೆಯಿತು. ಶೇಖರ‌ ಅಜೆಕಾರು, ಡಾ.‌ಸವಿತಾ ದುರುಗಪ್ಪ ಮಂಡ್ಯ ಉಪಸ್ಥಿತರಿದ್ದರು. ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಜರುಗಿತು. ಕಲಾವಿದರಾದ ಗುರುರಾಜ್ ಕಾಸರಗೋಡು,ರೇಖಾ ಸುದೇಶ ರಾವ್, ಡಾ.ವಂದನಾ ರಾವ್ ಹುಬ್ಬಳ್ಳಿ ನಿರೂಪಿಸಿದರು. ಕಲಾವಿದರನ್ನು ಗೌರವ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು