ಇತ್ತೀಚಿನ ಸುದ್ದಿ
ಕಾಫಿನಾಡಿನಲ್ಲಿ ಮುಂದುವರಿದ ಗಾಳಿ ಮಳೆ ಅಬ್ಬರ: ರಸ್ತೆಗೆ ಮರ ಬಿದ್ದು ಮುಳ್ಳಯ್ಯನಗಿರಿ ಸಂಚಾರ ಸ್ಥಗಿತ
16/06/2025, 11:12

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡ ಮಲೆನಾಡು ಭಾಗದಲ್ಲಿ ಮುಂದುವರೆದ ಗಾಳಿ-ಮಳೆ ಅಬ್ಬರಕ್ಕೆ ಬೃಹತ್ ಮರ ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರದ ಬಳಿ ನಡೆದಿದೆ.
ಇದರ ಪರಿಣಾಮ ಮುಳ್ಳಯ್ಯನಗಿರಿ , ದತ್ತಪೀಠಕ್ಕೆ ತೆರಳುವ ರಸ್ತೆ ಬಂದ್ ಆಗಿದೆ.
ಮರ ತೆರವುಗೊಳಿಸಲು ಪೊಲೀಸರು ಹಾಗೂ ಸ್ಥಳೀಯರ ಹರಸಾಹಸ ಪಡುತ್ತಿದ್ದಾರೆ. ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.