3:24 PM Wednesday17 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ತೀರ್ಥಕೆರೆ ನಿರ್ಮಾಣ: ಪ್ರಾರ್ಥನೆ, ಪೂಜೆ ಸಲ್ಲಿಕೆ

18/05/2024, 18:50

ಮಂಗಳೂರು(reporterkarnataka.com):ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವುಳ್ಳ ಗುಜ್ಜರಕೆರೆಯಲ್ಲಿ ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ತೀರ್ಥಕೆರೆಯ ನಿರ್ಮಾಣ ಹಾಗೂ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಈ ಕೆರೆಯ ಧಾರ್ಮಿಕ ಮತ್ತು ಸ್ಥಳ ಮಹತ್ವಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಶ್ರೀ ಮಾರಿಯಮ್ಮ ದೇವಿಯ ಸನ್ನಿಧಾನದಲ್ಲಿ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ವತಿಯಿಂದ ಅಮ್ಮನವರಿಗೆ ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಲಾಯಿತು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ವಿ. ಭಟ್ ಪೂಜೆ ಮತ್ತು ಪ್ರಾರ್ಥನೆಯನ್ನು ನೆರವೇರಿಸಿದರು.
ಈ ಸಂದರ್ಭ ವೇದಿಕೆಯ ಗೌರವಾಧ್ಯಕ್ಷ ಯೋಗೀಶ್ ಕುಮಾರ್ ಜೆಪ್ಪು, ಅಧ್ಯಕ್ಷ ಸಿ. ಪಿ ದಿನೇಶ್, ಉಪಾಧ್ಯಕ್ಷ ಜೆ.ಸುನಿಲ್, ಸುರೇಶ್ ಕುಮಾರ್, ಮುರುಳಿಧರ್ ಬೋಳಾರ್, ಪ್ರಧಾನ ಕಾರ್ಯದರ್ಶಿ ಪಿ. ನೇಮು ಕೊಟ್ಟಾರಿ ಗುಜ್ಜರಕೆರೆ, ಕೋಶಾಧಿಕಾರಿ ಜೆ.ಸುರೇಶ್, ಸ್ಥಳೀಯ ಕಾರ್ಪೂರೇಟರ್ ಭಾನುಮತಿ ಪಿ.ಎಸ್, ಸದಸ್ಯರಾದ ಕೆ.ಜ್ಞಾನೇಶ್, ರಾಜೇಶ್, ವಿಶ್ವನಾಥ್ ಅತ್ತಾವರ, ಮಾಧವ ಗುಜ್ಜರಕೆರೆ, ವಸಂತ ಶೇಣವ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬಿ. , ಸದಸ್ಯರಾದ ಭಾಸ್ಕರ್ ರಾವ್, ಸುಭಾಷ್ ಚಂದ್ರ ಕಾಂಚನ್ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು