12:06 AM Wednesday19 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಕೊಡಗಿನ ಪಾಲಿ ಬೆಟ್ಟದಿಂದ ಮೂಡಿಗೆರೆಗೆಯ ಗೋಣಿಬೀಡಿಗೆ: ಸತ್ತು ಹೋದ ಮರಿಯ ಹುಡುಕಿಕೊಂಡು ಕಾಡಾನೆ 150 ಕಿಮೀ. ಪಯಣ!!

29/07/2025, 14:32

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಬುದ್ದಿವಂತ ಪ್ರಾಣಿ ಮನುಷ್ಯನ ಪ್ರೀತಿಯನ್ನೂ ಮೀರಿಸಿದ್ದು ಪ್ರಾಣಿ ಪ್ರೀತಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಸತ್ತಿರೋ ಮರಿ ಹುಡುಕಿಕೊಂಡು ಹೆಣ್ಣು ಕಾಡಾನೆಯೊಂದು 150 ಕಿ.ಮೀ. ದೂರ ಬಂದಿದೆ.
ಕಾಡಾನೆ ಬಂದದ್ದು ಮೂಡಿಗೆರೆ ತಾಲೂಕಿನ ಗೋಣಿಬೀಡಿಗೆ.
ಕೊಡಗು ಜಿಲ್ಲೆಯ ಪಾಲಿ ಬೆಟ್ಟದಿಂದ ಮೂಡಿಗೆರೆಯ
ಗೋಣಿಬೀಡಿಗೆ ಒಲ್ಡ್ ಬೆಲ್ಟ್ ಕಾಡಾನೆ ಬಂದಿದೆ.
ನಿನ್ನೆ ಬೆಳಗ್ಗೆ ಮಡಿಕೇರಿಯ ಪಾಲಿ ಬೆಟ್ಟದಲ್ಲಿ ಜನರು ಓಲ್ಡ್ ಬೆಲ್ಟ್ ಕಾಡಾನೆಯನ್ನು ಓಡಿಸಿದ್ದರು. ಈ ಕುರಿತು
ಮಡಿಕೇರಿಯ ಪಾಲಿಬೆಟ್ಟದಲ್ಲಿದ್ದ ಸಿಸಿಟಿವಿ ವಿಡಿಯೋ ಕೂಡ ಲಭ್ಯವಿದೆ.


ಸಂಜೆ ವೇಳೆಗೆ ಮರಿಯನ್ನು ಹುಡುಕಿಕೊಂಡು ಮೂಡಿಗೆರೆ ತಾಲೂಕಿನ ಗೋಣಿಬೀಡಿಗೆ ಬಂದಿದೆ. ಓಲ್ಡ್ ಬೆಲ್ಟ್ ಕೊರಳಲ್ಲಿರೋ ರೆಡಿಯೋ ಕಾಲರ್ ನಿಂದ ಲೊಕೇಶನ್ ಮಾಹಿತಿ ಲಭ್ಯವಾಗಿದೆ.
ಸದ್ಯಕ್ಕೆ ಬೇಲೂರು-ಮೂಡಿಗೆರೆಯ ಗಡಿ ಲಕ್ಷ್ಮಿ ಎಸ್ಟೇಟ್ ನಲ್ಲಿದೆಯೆಂಬ ಮಾಹಿತಿ ಇದೆ. ಓಲ್ಡ್ ಬೆಲ್ಟ್ ಮರಿ ತಿಂಗಳುಗಳ ಮುಂಚೆಯೇ ಸಾವನ್ನಪ್ಪಿದೆ.
ಆದರೆ, ಸಾವನ್ನಪ್ಪಿರೋ ಮರಿ ಹುಡುಕಿಕೊಂಡು 150 ಕಿ.ಮೀ ದೂರ ಈ ಹೆಣ್ಣಾನೆ ಬಂದಿದೆ.
ಲಕ್ಷ್ಮಿ ಎಸ್ಟೇಟ್ ಚಿಕ್ಕಮಗಳೂರು-ಹಾಸನ ಜಿಲ್ಲೆಯ ಗಡಿ ಭಾಗದಲ್ಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು