ಇತ್ತೀಚಿನ ಸುದ್ದಿ
ಕಾಫಿನಾಡಿನಲ್ಲಿ ಮತ್ತೆ ನಕ್ಸಲ್ ಚಟುವಟಿಕೆ?: ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಆರಂಭ
12/11/2024, 19:36
ಸಂತೋಷ್ ಅತ್ತಿಗೆರೆbಚಿಕ್ಕಮಗಳೂರು
info.reporterkarnataka@gmail.com
ದಶಕಗಳ ಬಳಿಕ ಕಾಫಿನಾಡಿನ ಮಲೆನಾಡು ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಯ ಗುಮಾನಿ ಹಿನ್ನೆಲೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಕೂಂಬಿಂಗ್ ಶುರುವಾಗಿದೆ.
ನಕ್ಸಲ್ ನಿಗ್ರಹ ಪಡೆಯಿಂದ ತನಿಖೆ ಚುರುಕುಗೊಂಡಿದ್ದು, ಕೂಬಿಂಗ್ ಆರಂಭಿಸಲಾಗಿದೆ.
ಕಳಸ, ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಕೂಂಬಿಂಗ್ ನಡೆಸಲಾಗುವುದು. ದಟ್ಟ ಕಾನನದ ಮಧ್ಯೆಯಲ್ಲಿ ನಕ್ಸಲರಿಗಾಗಿ ತೀವ್ರ ಶೋಧ ನಡೆದಿದೆ. ಎಎನ್ಎಫ್ ಪಡೆ ಡಾಗ್ ಸ್ಕ್ವಾಡ್ ಬಳಸಿಕೊಂಡು ಕೂಂಬಿಂಗ್ ತೀವ್ರಗೊಳಿಸಿದೆ.
ಕೊಪ್ಪ ಕಾಡಂಚಿನ ಗ್ರಾಮದ ಇಬ್ಬರನ್ನು ಬಂಧಿಸಿ ಎಸ್ಪಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.
ನಕ್ಸಲ್ ಮಾಹಿತಿದಾರರೆಂದು ಕೊಪ್ಪ ತಾಲೂಕಿನ ಎಡಗುಂದ ಗ್ರಾಮದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮಲೆನಾಡ ಸಮಸ್ಯೆ ಮುಂದಿಟ್ಟುಕೊಂಡು ನಕ್ಸಲರು ಗ್ರಾಮಸ್ಥರ ಸಂಪರ್ಕ ಮಾಡಿದ್ದ ಅನುಮಾನ ಉಂಟಾಗಿದೆ.
ಕಳೆದ ವಾರ ಶೃಂಗೇರಿ ತಾಲೂಕಿನ ಕಾಡಂಚಿನ ಗ್ರಾಮಕ್ಕೆ 6 ಜನ ಅಪರಿಚಿತರು ಬಂದಿದ್ದರು ಎನ್ನಲಾಗಿದೆ. ನಿನ್ನೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.