11:31 PM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಮಾಜಿ ಸಿಎಂಗಳಾದ ಮೊಯ್ಲಿ, ಶೆಟ್ಟರ್, ಡಿವಿಎಸ್ ಜೊತೆ ಸಿಎಂ ಮಾತುಕತೆ: ಎಚ್ ಡಿಕೆ ಭೇಟಿ ಮಾಡಲೂ ಸಿದ್ದ ಎಂದ ಸಿಎಂ ಡಿಕೆಶಿ.!!

09/06/2026, 11:29

ಬೆಂಗಳೂರು(reporterkarnataka.com): ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಮಾಜಿ ಸಿಎಂ, ಮಾಜಿ ಪ್ರಧಾನಿಯನ್ನು ಭೇಟಿಯಾಗಿದ್ದರು. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದ ಡಿಕೆಶಿ, ಇಬ್ಬರಿಂದಲೂ ಆಶೀರ್ವಾದ ಪಡೆದಿದ್ದರು.


ಇದೀಗ ರಾಜ್ಯದ ಹಲವು ಮಾಜಿ ಸಿಎಂಗಳನ್ನು ಹಾಲಿ ಸಿಎಂ ಡಿಕೆಶಿ ಭೇಟಿಯಾಗಿದ್ದಾರೆ. ಮತ್ತೋರ್ವ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸಮಯ ನೀಡಿದ್ರೆ ಅವರನ್ನೂ ಭೇಟಿಯಾಗ್ತೇನೆ ಅಂತ ಡಿಕೆಶಿ ಹೇಳಿದ್ದಾರೆ.

*ವೀರಪ್ಪ ಮೊಯ್ಲಿ ಮನೆಗೆ ಡಿಕೆಶಿ ಭೇಟಿ:*
ಸಿಎಂ ಡಿಕೆಶಿ ರಾಜ್ಯದ ಮೂವರು ಮಾಜಿ ಸಿಎಂಗಳ ಮನೆಗೆ ಭೇಟಿ ನೀಡಿದ್ದರು. ಮೊದಲಿಗೆ ಬೆಂಗಳೂರಿನ ಆರ್‌ಟಿ ನಗರದಲ್ಲಿರುವ ಮಾಜಿ ಸಿಎಂ ಎಂ. ವೀರಪ್ಪ ಮೊಯ್ಲಿ ನಿವಾಸಕ್ಕೆ ಡಿಕೆಶಿ ಭೇಟಿ ನೀಡಿದ್ರು. ಈ ಹಿಂದೆ ವೀರಪ್ಪ ಮೊಯ್ಲಿ ಡಿಕೆಶಿ ಬೆಂಬಲಿಸಿ ಮಾತನಾಡಿ,ಅಧಿಕಾರ ಹಂಚಿಕೆ ಆಗಬೇಕು ಅಂತ ಹೇಳಿದ್ದರು. ಇದೀಗ ಸಿಎಂ ಆದ ಬಳಿಕ ಮೊದಲ ಬಾರಿಗೆ ಮೊಯ್ಲಿ ಮನೆಗೆ ಡಿಕೆಶಿ ಆಗಮಿಸಿದ್ದರು.

*ಅಂತೂ ಸಿಎಂ ಆದ್ರಲ್ಲ ಎಂದ ಮೊಯ್ಲಿ!:*
ನೂತನ ಸಿಎಂ ಡಿಕೆಶಿಗೆ ಮಾಜಿ ಸಿಎಂ ಮೊಯ್ಲಿ, ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಡಿಕೆಶಿ ಬರುತ್ತಿದ್ದಂತೆ ವೆಲ್ಕಮ್ ಎಂದು ಸ್ವಾಗತಿಸಿದ ಮೊಯ್ಲಿ, ಬಳಿಕ ಕೂರಿಸಿಕೊಂಡು ಮಾತನಾಡಿದ್ರು. ನಿನ್ನೆಯ ಸ್ವಕ್ಷೇತ್ರ ಕನಕಪುರ ಪ್ರವಾಸದ ಬಗ್ಗೆ ಡಿಕೆಶಿ ಮಾತನಾಡಿದ್ರು. ಇಪ್ಪತ್ತು ಪಂಚಾಯತಿ, ಬರೋದು ರಾತ್ರಿ 3 ಗಂಟೆ ಆಯಿತು ಅಂತ ಹೇಳಿದ್ರು.

*ಹೆಣ್ಣು ಮಕ್ಕಳು ಎಷ್ಟು ಹರಕೆ ಕಟ್ಟಿಕೊಂಡಿದ್ರೋ?:*
ನಾನೇ ಆಗ್ತೀನಿ ನಾನೇ ಆಗ್ತೀನಿ ಅಂತಾ ಕೊನೆಗೆ ಸಿಎಂ ಆದ್ರಲ್ಲ ಅಂತ ಮೊಯ್ಲಿ ಹೇಳಿದ್ರು. ಹೌದು ನಿಮ್ಮ ಕ್ಷೇತ್ರದಲ್ಲಿ ಭಾಷಣ ಮಾಡಿದ್ರಲ್ಲ ಅಂತ ಡಿಕೆಶಿ ಹೇಳಿದ್ರು. ಹೌದು, ನನಗೆ ನಂಬಿಕೆ ಇತ್ತು, ನೀವು ಸಿಎಂ ಆಗ್ತೀರಾ ಎಂದುಕೊಂಡಿದ್ದೆ ಅಂತ ಮೊಯ್ಲಿ ಅಂದ್ರು. ಪಾಪ ಹೆಣ್ಣು ಮಕ್ಕಳು ಅಂತೂ ಎಷ್ಟು ಪ್ರಾರ್ಥನೆ ಮಾಡಿದ್ರೋ, ಎಷ್ಟು ಹರಕೆ ಹೊತ್ತಿದ್ರೋ ಎಷ್ಟು ಬೇಡಿಕೊಂಡಿದ್ರೋ ಅಂತ ಡಿಕೆ ಶಿವಕುಮಾರ್ ತಮ್ಮ ಕ್ಷೇತ್ರದ ಹೆಣ್ಮಕ್ಕಳನ್ನು ಹೊಗಳಿದ್ರು.

*ಜಗದೀಶ್ ಶೆಟ್ಟರ್ ಮನೆಗೆ ಡಿಕೆಶಿ ಭೇಟಿ:*
ಮೊಯ್ಲಿ ಮನೆಯಿಂದ ಹೊರಟ ಡಿಕೆ ಶಿವಕುಮಾರ್, ಬಳಿಕ ಆರ್‌ಟಿ ನಗರದಲ್ಲೇ ಇರುವ ಮತ್ತೋರ್ವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ್ರು. ಅಲ್ಲಿ ಶೆಟ್ಟರ್ ಹಾಗೂ ಅವರ ಪತ್ನಿ ಶಿಲ್ಪಾ ಶೆಟ್ಟರ್ ಹಾಗೂ ಮಗನ ಜೊತೆ ಮಾತನಾಡಿ, ವಾಪಸ್ಸಾದರು.

*ಹೂಗುಚ್ಛ ನೀಡಿ ಸ್ವಾಗತಿಸಿದ ಸದಾನಂದಗೌಡ:*
ಬಳಿಕ ಮತ್ತೋರ್ವ ಮಾಜಿ ಸಿಎಂ ಡಿವಿ ಸದಾನಂದಗೌಡರ ನಿವಾಸಕ್ಕೆ ಡಿಕೆ ಶಿವಕುಮಾರ್ ಬಂದ್ರು. ಡಾಲರ್ಸ್ ಕಾಲನಿಯಲ್ಲಿರುವ ನಿವಾಸಕ್ಕೆ ಡಿಕೆಶಿ ಬರುತ್ತಿದ್ದಂತೆ, ಡಿವಿಎಸ್ ಫ್ಯಾಮಿಲಿ ಸಮೇತ ಹೂಗುಚ್ಛ ಹಿಡಿದು, ಮನೆ ಗೇಟ್ ಬಳಿಯೇ ಸ್ವಾಗತಿಸಿದ್ರು. ಡಿಕೆಶಿಗೆ ಆರತಿ ಬೆಳಗಿ ಸನ್ಮಾನಿಸಿದ್ರು.

*ಕುಮಾರಸ್ವಾಮಿಯವ್ರನ್ನೂ ಭೇಟಿಯಾಗ್ತೇನೆ:*
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ನಾನು ಮತ್ತೋರ್ವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವ್ರ ಮನೆಗೂ ಹೋಗ್ತೇನೆ ಎಂದ್ರು. ಅಲ್ಲದೇ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಸಮಯ ಕೊಟ್ಟರೆ, ಅವರನ್ನೂ ಭೇಟಿಯಾಗೋಕೆ ಸಿದ್ದನಿದ್ದೇನೆ ಎಂದ್ರು.

ಇತ್ತೀಚಿನ ಸುದ್ದಿ

ಜಾಹೀರಾತು