3:12 AM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಸಿಎಂ ಸ್ವಾಗತಕ್ಕೆ ಭರ್ಜರಿ ತಯಾರಿ : ಸ್ಥಳೀಯಾಡಳಿತದಿಂದ ನಡೆಯಿತು ಕಣ್ಕಟ್ಟಿನ ರಸ್ತೆ ರಿಪೇರಿ.!!

11/08/2021, 22:41

ಮಂಗಳೂರು(Reporterkarnataka.com)
ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಸವರಾಜ್ ಬೊಮ್ಮಾಯಿ ಇದೇ ಮೊದಲ ಬಾರಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ.

ಸಿಎಂ ಸ್ವಾಗತಕ್ಕೆ ಕೆಂಜಾರು ಹಾಗೂ ಮರವೂರು ಸೇತುವೆಯಲ್ಲಿ ಬಿಜೆಪಿ ಧ್ವಜಗಳು ರಾರಾಜಿಸುತ್ತಿವೆ.

ಇದರ ಜತೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವ ದಾರಿಯ ಕೆಂಜಾರ್ ಜಂಕ್ಷನ್‌ನಲ್ಲಿ ಹುಲ್ಲು ಕಳೆಗಳನ್ನು ಕೂಡ ಕೀಳುವ ಕೆಲಸ ನಡೆಯಿತು.

ಆದರೆ ಮರವೂರು ಸೇತುವೆಯಾಚೆಗಿನ ಹಾಳಾದ ರಸ್ತೆಗೆ ಪಕ್ಕ ವ್ಯವಸ್ಥೆ ಮಾಡದೆ ಬರಿ ಜಲ್ಲಿ ಕಲ್ಲು ಹಾಗೂ ಜಲ್ಲಿ ಕಲ್ಲಿನ ಹುಡಿಯನ್ನು ಹಾಕಿ ತೇಪೆ ಹಚ್ಚುವ ಕೆಲಸ ನಡೆದಿದೆ. ಅದೂ ಕೂಡ ಇಂದು ಸಂಜೆ ಸ್ಥಳೀಯ ಆಡಳಿತ ವ್ಯವಸ್ಥೆಯ ಕಣ್ತೆರೆದಿದ್ದು, ಸಿಎಂ ಆಗಮನದ ಸಂದರ್ಭ ಕಣ್ಕಟ್ಟಿನ ಕೆಲಸವನ್ನೆ ಸ್ಥಳೀಯ ಆಡಳಿತ ಮಾಡುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇಲ್ಲಿಯ ರಸ್ತೆ ಪ್ರತಿ ವರ್ಷವೂ ಹದಗೆಟ್ಟು ಕಿತ್ತು ಹೋದರೂ ಸ್ಥಳೀಯ ಜಿಲ್ಲಾಡಳಿತದ ಗಮನಕ್ಕೆ ಇದು ಬರುವುದೇ ಇಲ್ಲ. ಯಾರಾದರೂ ರಾಜಕೀಯ ಧುರೀಣರು ಬರುವ ಸಂದರ್ಭದಲ್ಲಿ ಮಾತ್ರ ಇಲ್ಲಿಯ ಜನ ಪ್ರತಿನಿಧಿಗಳಿಗೆ ಹಾಳಾದ ರಸ್ತೆ ಕಣ್ಣಿಗೆ ಕಾಣುತ್ತದೆ ಆದರೆ ಶಾಶ್ವತವಾಗಿ ಸಮಸ್ಯೆ ನಿರ್ಮೂಲನೆ ಬಗ್ಗೆ ಕ್ರಮ ತೆಗೆದುಕೊಳ್ಳಲು ಸತತವಾಗಿ ಹಿಂದೇಟು ಹಾಕುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು