11:36 PM Tuesday8 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಬೊಂದೆಲ್ ಲಾಫ್ಟರ್ ಕ್ಲಬ್‌: ವಿದ್ಯಾರ್ಥಿಗಳ ಮಾನಸಿಕ ಒತ್ತಡ ನಿವಾರಿಸಲು 2 ದಿನಗಳ ನಗೆ ಸೆಶನ್‌

05/06/2023, 21:39

ಮಂಗಳೂರು(reporterkarnataka.com):ನಗರದ ಬೊಂದೆಲ್ ಜಂಕ್ಷನ್‌ನಲ್ಲಿರುವ ಜಾನ್ಲಿನ್ ಕಾಟೇಜ್‌ನಲ್ಲಿ ಕಳೆದ 20 ವರುಷಗಳಿಂದ ಲಾಫ್ಟರ್ ಕ್ಲಬ್‌ಗಳನ್ನು ನಡೆಸುತ್ತಿರುವ ಬೊಂದೆಲ್ ಲಾಫ್ಟರ್ ಕ್ಲಬ್ ಇವರು ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ಇದರ 100 ವಿದ್ಯಾರ್ಥಿಗಳಿಗೆ ಜೂನ್ 3 ಮತ್ತು 5ರಂದು ಲಾಫ್ಟರ್ ಸೆಶನ್‌ಗಳನ್ನು ನಡೆಸಿತು.


ಬೊಂದೆಲ್ ಕ್ಲಬ್ಬಿನ ಸಂಸ್ಥಾಪಕ ಜಾನ್ ಬಿ. ಮೊಂತೇರೊ ಮತ್ತು ಕ್ಲಬ್ಬಿನ ಹಿರಿಯ ಸದಸ್ಯರಾದ ನಿವೃತ್ತ ಪ್ರಾಧ್ಯಾಪಕ ಖಾಲಿದ್ ಅನ್ಸಾರಿ ಮತ್ತು ಬೊನವೆಂಚರ್ ಡಿಸೋಜಾ ಅವರು ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೆ ಮಾರ್ಗದರ್ಶನ ನೀಡಿದರು. ಇದಕ್ಕೂ ಮುನ್ನ ಎಪ್ರಿಲ್ 4ರಂದು ಜಾನ್ ಮೊಂತೇರೊ ಮತ್ತು ಪ್ರೊ. ಖಾಲಿದ್ ಅನ್ಸಾರಿ ಅವರನ್ನು ಬಲ್ಮಠ ಎ.ಜೆ. ಟರ‍್ಸ್ನ ಕಾಲೇಜು ಆವರಣದಲ್ಲಿ ಬೋಧಕರಿಗಾಗಿ ನಗೆ ಅಧಿವೇಶನವನ್ನು ನಡೆಸಲು ಆಹ್ವಾನಿಸಲಾಗಿತ್ತು. ಪ್ರಾಂಶುಪಾಲೆ ಡಾ. ಲರಿಸ್ಸಾ ಮಾರ್ಥಾ ಸ್ಯಾಮ್ಸ್ ಅವರ ಮಾರ್ಗದರ್ಶನದಲ್ಲಿ ಮಾನಸಿಕ ಆರೋಗ್ಯ ವಿಭಾಗದ ಉಪನ್ಯಾಸಕಿ ಶ್ರೀರಂಜನಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು