4:24 AM Saturday31 - October 2026
ಬ್ರೇಕಿಂಗ್ ನ್ಯೂಸ್
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಎಸ್‌ಐಟಿ ನೂತನ ಮುಖ್ಯಸ್ಥರಾಗಿ ಚೇತನ್… ಭೂತಾನ್‌ನಲ್ಲಿ ಹಿಮನದಿ ಸರೋವರ ಸ್ಫೋಟ: ಅಸ್ಸಾಂ, ಬಂಗಾಳದಲ್ಲಿ ಪ್ರವಾಹದ ಎಚ್ಚರಿಕೆ ರಾಜ್ಯಾದ್ಯಂತ ನೀರಿನ ಘಟಕಗಳ ಮೇಲೆ ಅಧಿಕಾರಿಗಳ ದಾಳಿ: 24 ಘಟಕಗಳಿಗೆ ನೋಟಿಸ್; ಮುಳಬಾಗಿಲಿನಲ್ಲಿ… ಅತ್ಯಾಚಾರ ಎಸಗಿದ ಯುವಕರನ್ನು ಅಪಹರಿಸಿ ಹಣದ ಬೇಡಿಕೆಯಿಟ್ಟ ಸಂತ್ರಸ್ತೆ: 10 ಮಂದಿ ಆರೋಪಿಗಳ… ಮಾಜಿ ಸಚಿವ, ಹಿರಿಯ ರಾಜಕಾರಣಿ ಶಿವಾನಂದ ಕೌಜಲಗಿ ನಿಧನ 4 ಎಂಎಲ್‌ಸಿ ಕ್ಷೇತ್ರ ಗೆದ್ದ ಮಾತ್ರಕ್ಕೆ ಬಿಜೆಪಿ ಬಿಗೋದು ಬೇಡ: ಕಲಬುರಗಿಯಲ್ಲಿ ಆರೋಗ್ಯ… ಮುಂದಿನ ಚುನಾವಣೆಯಲ್ಲಿ 130 ಸ್ಥಾನ ಗೆದ್ದು ಎನ್‌ಡಿಎ ಅಧಿಕಾರಕ್ಕೆ’: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.… Chikkamagaluru | ಕಡೂರು ಬಳಿ ಬಸ್ಸಿಗೆ ಹಿಂಭಾಗದಿಂದ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ… ಮೈಸೂರು ಅರಮನೆ ವಿಚಾರವಾಗಿ ಸಚಿವ ಯತೀಂದ್ರ ಹೇಳಿಕೆಗೆ ವಿರೋಧ: ಪ್ರಮೋದಾದೇವಿ ಒಡೆಯರ್ ಬೆಂಬಲಕ್ಕೆ… Chikkamagaluru | ಆಟೋ‌- ಬೈಕ್ ನಡುವೆ ಮುಖಾಮುಖಿ ‌ಡಿಕ್ಕಿ: ಬೈಕ್ ಸವಾರರ ಸ್ಥಳದಲ್ಲೇ…

ಇತ್ತೀಚಿನ ಸುದ್ದಿ

ಬಿಜೆಪಿ ಕಡೆಗೆ ಸುಮಲತಾ ಒಲವು: ರಂಗ ಮಂದಿರದಿಂದ ಸಂಸದೆಯ ಫೋಟೋ ತೆರವು

13/03/2023, 23:11

ಸ್ವಪ್ನಾ ದಿನಕರ್ ಮದ್ದೂರು ಮಂಡ್ಯ

info.reporterkarnataka@gmail.com

ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಚಿತ್ರನಟಿ ಸುಮಲತಾ ಅಂಬರೀಶ್ ಅವರ ನಡೆ ಬಿಜೆಪಿ ಕಡೆ ತಿರುಗಿದ್ದು, ಮಂಡ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ನಾಗಮಂಗಲದ ಬಿದರಕೆರೆ ಗ್ರಾಮದಲ್ಲಿನ ಲಂಕೇಶ್ ರಂಗ ಮಂದಿರದಿಂದ ಸುಮಲತಾ ಅವರ ಫೋಟೋ ತೆರವುಗೊಳಿಸಲಾಗಿದೆ.

ಸುಮಲತಾ​ ಅವರು ಬಿಜೆಪಿಗೆ ಅಧಿಕೃತವಾಗಿ ಸೇರದಿದ್ದರೂ ತಮ್ಮ ಸಂಪೂರ್ಣ ಬೆಂಬಲ ಎಂದಿಗೂ ಬಿಜೆಪಿಗೆ ಇರುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಇದು ಮಂಡ್ಯ ಜನತೆಗೆ ಆಘಾತ ಉಂಟು ಮಾಡಿದೆ. ಇದರ ಪ್ರತಿಧ್ವನಿ ಎನ್ನುವಂತೆ ಬಿದರಕೆರೆ ಗ್ರಾಮದಲ್ಲಿನ ಲಂಕೇಶ್​ ರಂಗ ಮಂದಿರದಿಂದ ಸುಮಲತಾ ಅವರ ಫೋಟೋವನ್ನು ತೆಗೆಯಲಾಗಿದೆ.

ಅಂಬರೀಷ್ ಅವರು ಸಂಸದರಾಗಿದ್ದಾಗ ನೀಡಿದ್ದ ಅನುದಾನದಲ್ಲಿ ಪಿ.ಲಂಕೇಶ್ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಲಾಗಿತ್ತು.
ಲಂಕೇಶ್ ಪತ್ರಿಕೆಯ‌ ಅಂಕಣಕಾರರಾಗಿದ್ದ ಬಿ.ಚಂದ್ರೇಗೌಡ ಅವರು ಲಂಕೇಶ್‌ ಅವರ ಮೇಲಿನ ಅಭಿಮಾನದಿಂದ ಲಂಕೇಶ್ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಿದ್ದರು. ರಂಗಮಂದಿರದಲ್ಲಿ ವರನಟ ಡಾ. ರಾಜ್​ಕುಮಾರ್​, ನಟ ಅಂಬರೀಶ್​ ಹಾಗೂ ಸುಮಲತಾರ ಫೋಟೋವನ್ನು ಅಳವಡಿಸಲಾಗಿತ್ತು. ಆದರೆ ಸುಮಲತಾ ಬಿಜೆಪಿಗೆ ಬೆಂಬಲ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ರಂಗಮಂದಿರದಲ್ಲಿದ್ದ ಸುಮಲತಾ ಫೋಟೋ ತೆರವುಗೊಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು