ಇತ್ತೀಚಿನ ಸುದ್ದಿ
ಬೈಕ್ ಗೆ ಗುದ್ದಿದ ಕಾಡುಕೋಣ: ರಸ್ತೆಗೆ ಬಿದ್ದು ಸವಾರನಿಗೆ ಗಾಯ
30/09/2024, 20:35
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಕಾಡುಕೋಣವೊಂದು ಬೈಕಿಗೆ ಅಡ್ಡಬಂದು ಗುದ್ದಿದ ಪರಿಣಾಮ ಸವಾರ ಬಿದ್ದು ಗಾಯಗೊಂಡಿರುವ ಘಟನೆ ಅನ್ನುವಳ್ಳಿ ಸೇತುವೆ ಬಳಿ ಇಂದು ಸಂಜೆ ನಡೆದಿದೆ.
ಮೇಗರವಳ್ಳಿ ಸಮೀಪದ ಅನ್ನುವಳ್ಳಿ ಸೇತುವೆ ಬಳಿ ಈ ಘಟನೆ ನಡೆದಿದೆ. ವೆಂಕಟೇಶ್ ಎಂಬುವವರು ಗುಡ್ಡೆಕೇರಿಯಿಂದ ಕೈಮರ ಸಮೀಪದ ಮನೆಗೆ ಬರುತ್ತಿದ್ದಾಗ ಕಾಡುಕೋಣ ರಸ್ತೆಗೆ ಅಡ್ಡಲಾಗಿ ಬಂದು ಗುದ್ದಿದೆ. ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ನಿಂದ ಬಿದ್ದು ಸವಾರನಿಗೆ ಗಂಭೀರ ಗಾಯಗಳಾಗಿವೆ. ತೀರ್ಥಹಳ್ಳಿಯ ಜೆ. ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.