ಇತ್ತೀಚಿನ ಸುದ್ದಿ
ಬಿಡದಿ ಟೌನ್ ಶಿಪ್ ವಿವಾದ | ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಪೋಸ್ಟರ್ ವಾರ್ ವಿಕೃತಿ ಮನಸ್ಥಿತಿ: ಕೇಂದ್ರ ಸಚಿವ ಕುಮಾರಸ್ವಾಮಿ
17/06/2026, 22:41
ಬೆಂಗಳೂರು(reporterkarnataka.com): ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಿಡದಿಯಲ್ಲಿ ಟೌನ್ ಶಿಪ್ ಮಾಡಲು ಮುಂದಾಗಿದ್ದು, ಇದಕ್ಕೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಉಭಯ ಪಕ್ಷಗಳ ನಾಯಕರು ಬಿಡದಿಗೆ ಭೇಟಿ ಮಾಡಿ ರೈತರ ಅಹವಾಲು ಸ್ವೀಕರಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ವಿರುದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ ಬಿಡದಿ ಟೌನ್ ಶಿಪ್ ವಾರ್ ಜೋರಾಗಿದ್ದು, ಬಿಜೆಪಿ,ಜೆಡಿಎಸ್ ನಾಯಕರ ವಿರುದ್ಧ ಪೋಸ್ಟರ್ ವಾರ್ ಆರಂಭವಾಗಿದೆ. ಬಿಡದಿಗೆ ತೆರಳುವ ರಸ್ತೆ, ಬ್ರಿಡ್ಜ್ ಗೋಡೆಗಳ ಮೇಲೆ ಪೋಸ್ಟರ್ ಅನ್ನು ಅನಾಮಿಕರು ಅಂಟಿಸಿದ್ದಾರೆ.
ಇಂದು ಬಿಡದಿ ಬಳಿಯ ಅರಳಾಳು ಸಂದ್ರಕ್ಕೆ ಬಿಜೆಪಿ ನಾಯಕರು ಭೇಟಿ ನೀಡುತ್ತಿದ್ದಾರೆ, ಬಿಜೆಪಿ ರಾಜ್ಯಾಧ್ಯಕ್ಚ ವಿಜಯೇಂದ್ರ, ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಅನೇಕ ನಾಯಕರು ಭೇಟಿ ನೀಡಿ, ರೈತರ ಹೋರಾಟಕ್ಕೆ ಸಾಥ್ ನೀಡಲು ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದಾರೆ.

ಅವರು ಭೇಟಿ ನೀಡುವ ಜಾಗ ಮತ್ತು ಅವರು ತೆರಳುವ ಕಡೆಗಳಲೆಲ್ಲ ಪೋಸ್ಟರ್ ಅಂಟಿಸಿದ್ದು, ಅಶೋಕ್, ವಿಜಯೇಂದ್ರ, ಛಲವಾದಿ ಬಗ್ಗೆ ಪೋಸ್ಟರ್ ನಲ್ಲಿ ಲೇವಡಿ ಮಾಡಲಾಗಿದೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಹಾಗೂ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧವೂ ಪೋಸ್ಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ. ಪೋಸ್ಟರ್ ಮೂಲಕ ಕಿಡಿಗೇಡಿಗಳು ಲೇವಡಿ ಮಾಡಿದ್ದಾರೆ. ಆದರೆ, ಈ ಪೋಸ್ಟರ್ ಅಂಟಿಸಿದವರು ಯಾರೆಂದು ಇದುವರೆಗೂ ಪತ್ತೆಯಾಗಿಲ್ಲ.












