10:16 PM Tuesday28 - April 2026
ಬ್ರೇಕಿಂಗ್ ನ್ಯೂಸ್
Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು… ಶಿವಮೊಗ್ಗ | ಹುಡುಗಿ ವಿಚಾರಕ್ಕೆ ಅಪ್ರಾಪ್ತನಿಗೆ ಲಾಂಗಿನೇಟು: ತಲೆಗೇ ಸಿಲುಕಿಕೊಂಡ ಲಾಂಗ್ ಕಾಂತಾರ ದೈವ ಪಾತ್ರದ ಅನುಕರಣೆ ವಿವಾದ: ಬಾಲಿವುಡ್ ನಟ ರಣವೀರ್ ಚಾಮುಂಡೇಶ್ವರಿಯಲ್ಲಿ ಕ್ಷಮೆ…

ಇತ್ತೀಚಿನ ಸುದ್ದಿ

ಬೆಂಗ್ರೆ ಸ್ಯಾಂಡ್ಸ್ ಪಿಟ್ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡದ ಭೂಮಿ ಪೂಜೆ, ವಿದ್ಯಾರ್ಥಿ ಸಂಘ ಉದ್ಘಾಟನೆ

01/07/2022, 23:18

ಚಿತ್ರ/ವರದಿ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಬೆಂಗ್ರೆ ಸ್ಯಾಂಡ್ಸ್ ಪಿಟ್ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ದ ಭೂಮಿ ಪೂಜೆ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಭೂಮಿಪೂಜೆಯನ್ನು  ಹಳೆ ವಿದ್ಯಾರ್ಥಿ ಪ್ರೊ. ಬೆಂಗ್ರೆ ನಾರಾಯಣ ಕರ್ಕೇರ ನೆರವೇರಿಸಿದರು. ಅವರು ಮಾತನಾಡಿ, ಪೇಟೆಂಟ್ ಮಾರಾಟ ಮಾಡಿದ ಹಣದಿಂದ ಹಾಗೂ ತಮ್ಮ ಕುಟುಂಬಸ್ಥರ ನೆರವಿನಿಂದ  ನಮ್ಮ  ಕೈಲಾದ ಮಟ್ಟಿನಲ್ಲಿ ಶಾಲೆಗೆ ಒಂದು ಕೊಠಡಿ ನಿರ್ಮಾಣಕ್ಕೆ ಸಹಕಾರ ನೀಡಿದ್ದೇನೆ. ಇದೇ ರೀತಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇನ್ನಷ್ಟು ಧನ ಸಹಾಯ ಹರಿದು ಬರಲಿ ಎಂದರು.


ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದ  ದ. ಕ ಜಿಲ್ಲಾ ಘಟಕದ ಚೇರ್ ಮೇನ್ ಶಾಂತ ರಾಮ್ ಶೆಟ್ಟಿ ಮಾತನಾಡಿದರು.


ಶಾಲಾ ಮುಖ್ಯೋಪಾಧ್ಯಾಯಿನಿ ಉಮಾಲಕ್ಷ್ಮಿ ಕುಡುಪು ಮಾತನಾಡಿ, ಶಾಲಾ ಅಭಿವೃದ್ಧಿ ಕಾರ್ಯದಲ್ಲಿ ಹಳೆ  ವಿದ್ಯಾರ್ಥಿ ಸಂಘದ ಪಾತ್ರ ಈ ಭೂಮಿ ಪೂಜೆಯ ಹಿಂದಿನ ಕೈಚಳಕ. ಇಂತಹ ಹಳೆ ವಿದ್ಯಾರ್ಥಿಗಳ ಸಂಘಗಳಿಂದ ಸರಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದರು.


ಮುಖ್ಯ ಅತಿಥಿಗಳಾಗಿ ಮಹಾಜನ ಸಭೆ ಅಧ್ಯಕ್ಷ ಕೇಶವ ಕರ್ಕೇರ, ಮಂಗಳೂರು ಬಂದರು ಪ್ರಾಧಿಕಾರದ ಟ್ರಸ್ಟಿ ಭರತ್ ಕುಮಾರ್ ಎರ್ಮಾಳ್, ಮತ್ಸ್ತ್ಯೋದ್ಯಮಿ ಮೋಹನ್ ಬೆಂಗ್ರೆ, ಶಿಕ್ಷಣ ಇಲಾಖೆಯ ಸಿ. ಆರ್. ಪಿ. ಹೇಮಂತ್  ಕುಲಾಲ್, ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ರಾಕೇಶ್ ಸುವರ್ಣ, ಶಾಲಾ ಶಿಕ್ಷಕರಾದ ಅಶ್ವಿನಿ , ಸುಮಾ, ದೀಪಾ, ವರ್ಷಾ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಪ್ರೊ. ಬೆಂಗ್ರೆ ಅವರನ್ನು ಸನ್ಮಾನಿಸಲಾಯಿತು


ಶಿಕ್ಷಕಿ ಉಷಾ ಕೆ. ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು